ಲಾಹೋರ್(ಪಾಕಿಸ್ತಾನ): 24 ವರ್ಷಗಳ ನಂತರ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ತಂಡ ಟೆಸ್ಟ್ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿತು. ಲಾಹೋರ್ನಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ 115ರನ್ಗಳಿಂದ ಜಯ ಸಾಧಿಸುವ ಮೂಲಕ ಸರಣಿಯನ್ನು 1-0ರ ಅಂತರದಲ್ಲಿ ಕೈವಶ ಮಾಡಿಕೊಂಡಿದೆ.
-
Australia register a historic victory in Pakistan 🙌
— ICC (@ICC) March 25, 2022 " class="align-text-top noRightClick twitterSection" data="
They win the third Test by 115 runs and take the series 1-0.#WTC23 | https://t.co/k7Mg7Onz5c pic.twitter.com/v1W2mpVgrz
">Australia register a historic victory in Pakistan 🙌
— ICC (@ICC) March 25, 2022
They win the third Test by 115 runs and take the series 1-0.#WTC23 | https://t.co/k7Mg7Onz5c pic.twitter.com/v1W2mpVgrzAustralia register a historic victory in Pakistan 🙌
— ICC (@ICC) March 25, 2022
They win the third Test by 115 runs and take the series 1-0.#WTC23 | https://t.co/k7Mg7Onz5c pic.twitter.com/v1W2mpVgrz
ಗಡಾಫಿ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ ಉಸ್ಮಾನ್ ಖವಾಜ(91) ಸ್ಮಿತ್(59), ಗ್ರೀನ್(79) ಹಾಗೂ ಅಲೆಕ್ಸ್ ಕ್ಯಾರಿ(67)ರನ್ಗಳ ನೆರವಿನಿಂದ ತನ್ನೆಲ್ಲ ವಿಕೆಟ್ ಕಳೆದುಕೊಂಡು 391ರನ್ಗಳಿಕೆ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಪಾಕಿಸ್ತಾನನ ಶಫೀಕ್(81), ಅಜರ್ ಅಲಿ(78) ಹಾಗೂ ಬಾಬರ್ ಆಜಂ(67)ರನ್ಗಳ ನೆರವಿನಿಂದ ತನ್ನೆಲ್ಲ ವಿಕೆಟ್ ಕಳೆದುಕೊಂಡು 268 ರನ್ಗಳಿಕೆ ಮಾಡಿ 123ರನ್ಗಳ ಹಿನ್ನಡೆ ಅನುಭವಿಸಿತ್ತು.
ಎರಡನೇ ಇನ್ನಿಂಗ್ಸ್ನಲ್ಲಿ ಉಸ್ಮಾನ್ ಖವಾಜ ಅಜೇಯ 104ರನ್, ವಾರ್ನರ್ 51ರನ್ಗಳಿಕೆ ಮಾಡುವ ಮೂಲಕ 3 ವಿಕೆಟ್ ನಷ್ಟಕ್ಕೆ 227ರನ್ಗಳಿಕೆ ಮಾಡಿ ಡಿಕ್ಲೇರ್ ಘೋಷಣೆ ಮಾಡಿದೆ. ಜೊತೆಗೆ, ಪಾಕ್ ಗೆಲುವಿಗೆ 351ರನ್ಗಳ ಗುರಿ ನೀಡಿತು. ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕ್ ತಂಡ ಕೇವಲ 235ರನ್ಗಳಿಗೆ ಆಲೌಟ್ ಆಗುವ ಮೂಲಕ 115ರನ್ಗಳ ಸೋಲು ಕಂಡಿತು. ಆಸ್ಟ್ರೇಲಿಯಾ ಪರ ಎರಡನೇ ಇನ್ನಿಂಗ್ಸ್ನಲ್ಲಿ ನಾಥನ್ ಲಿಯಾನ್ 5 ವಿಕೆಟ್ ಪಡೆದುಕೊಂಡರೆ, ನಾಯಕ ಕಮ್ಮಿನ್ಸ್ 3 ವಿಕೆಟ್ ಕಿತ್ತು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಫೈನಲ್ ಪಂದ್ಯದಲ್ಲಿ 8 ವಿಕೆಟ್ ಕಬಳಿಸಿರುವ ನಾಯಕ ಕಮ್ಮಿನ್ಸ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿದರೆ, ಮೂರು ಟೆಸ್ಟ್ ಪಂದ್ಯಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ 496ರನ್ ಗಳಿಸಿರುವ ಉಸ್ಮಾನ್ ಖವಾಜ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ರಾವಲ್ಪಿಂಡಿಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದರಿಂದ ಪಂದ್ಯ ಡ್ರಾ ಆಗಿತ್ತು.
ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ಅವಕಾಶ ಪಡೆದುಕೊಂಡಿದ್ದ ಆಸ್ಟ್ರೇಲಿಯಾ ತಂಡ ಫಾಲೋ ಆನ್ ಹೇರದೇ ತಪ್ಪು ಮಾಡಿದ್ದರಿಂದ ಗೆಲ್ಲುವ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ಆದರೆ, ಮೂರನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಕಮ್ಮಿನ್ಸ್ ಪಡೆ ಗೆಲುವು ಸಾಧಿಸಿದೆ. ಇದೀಗ ಲಾಹೋರ್ನಲ್ಲಿ ಮೂರು ಏಕದಿನ ಪಂದ್ಯಗಳ ಸರಣಿ ಹಾಗೂ ಏಕೈಕ ಟಿ20 ಪಂದ್ಯ ನಡೆಯಲಿದ್ದು, ಅದಕ್ಕಾಗಿ ಆಸ್ಟ್ರೇಲಿಯಾ ಪಡೆ ಸನ್ನದ್ಧವಾಗಲಿದೆ.
ಇದನ್ನೂ ಓದಿ: ಧೋನಿ ನಾಯಕತ್ವದಲ್ಲಿ ಆಡುವುದೇ ಅದೃಷ್ಟ: ಫಾಫ್ ಡು ಪ್ಲೆಸಿಸ್