ಕೊಲಂಬೊ : ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಂಬರುವ ಟಿ20 ವಿಶ್ವಕಪ್ಗೆ ಅಂತಿಮ 15 ಸದಸ್ಯರ ಬಳಗವನ್ನು ಪ್ರಕಟಿಸಿದೆ. ಈ ಹಿಂದೆ ಘೋಷಿಸಿದ್ದ 7 ಆಟಗಾರರನ್ನು ತಂಡದಿಂದ ಕೈಬಿಟ್ಟಿರುವುದಾಗಿ ಭಾನುವಾರ ಎಸ್ಎಲ್ಸಿ ಖಚಿತಪಡಿಸಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿ ಈ ಹಿಂದೆ 19 ಸದಸ್ಯರ ತಂಡವನ್ನು ಘೋಷಿಸಿತ್ತು. ಇದೀಗ ಆ ತಂಡದಿಂದ ಕಮಿಂಡು ಮೆಂಡಿಸ್, ನುವಾನ್ ಪ್ರದೀಪ್, ಪ್ರವೀಣ್ ಜಯವಿಕ್ರಮ, ಮಿನೋದ್ ಭಾನುಕ, ಅಶೆನ್ ಬಂಡಾರ, ಲಕ್ಷನ್ ಸಂದಕನ್ ಮತ್ತು ರಮೇಶ್ ಮೆಂಡಿಸ್ ಅವರನ್ನು ತಂಡದಿಂದ ಕೈಬಿಟ್ಟಿದೆ.
ನೂತನ ತಂಡಕ್ಕೆ ಲಹಿರು ಕುಮಾರ, ಬಿನುರ ಫರ್ನಾಂಡೊ, ಅಕಿಲಾ ಧನಂಜಯ ಸೇರ್ಪಡೆಗೊಂಡಿದ್ದಾರೆ. ರಿಸರ್ವ್ ಆಟಗಾರರ ಲಿಸ್ಟ್ನಲ್ಲಿದ್ದ ಪುಲಿನ ತರಂಗರನ್ನು ಕೂಡ ಕೈಬಿಟ್ಟಿದೆ. ಆದರೆ, ಈ ಬಾರಿ ಯಾವುದೇ ರಿಸರ್ವ್ ಆಟಗಾರರನ್ನು ಪ್ರಕಟಿಸಿಲ್ಲ.
ತಂಡದ ಪ್ರಮುಖ ಆಟಗಾರರಾಗಿದ್ದ ನಿರೋಶನ್ ಡಿಕ್ವೆಲ್ಲಾ, ಕುಸಾಲ್ ಮೆಂಡಿಸ್ ಮತ್ತು ದನುಶ್ಕಾ ಗುಣತಿಲಕ ಇಂಗ್ಲೆಂಡ್ ಪ್ರವಾಸದಲ್ಲಿ ಕೋವಿಡ್ ಪ್ರೋಟೋಕಾಲ್ ಉಲ್ಲಂಘಿಸಿದ ಕಾರಣ ಒಂದು ವರ್ಷ ನಿಷೇಧಕ್ಕೆ ಒಳಗಾಗಿದ್ದಾರೆ.
ಶ್ರೀಲಂಕಾ ಟಿ20 ವಿಶ್ವಕಪ್ ತಂಡ :
ದಾಸುನ್ ಶನಕ (ನಾಯಕ), ಕುಸಾಲ್ ಪೆರೇರಾ, ದಿನೇಶ್ ಚಂಡಿಮಾಲ್, ಧನಂಜಯ ಡಿ ಸಿಲ್ವಾ (ಉಪನಾಯಕ), ಪಾತುಮ್ ನಿಸಾಂಕ, ಚರಿತ್ ಅಸಲಂಕ, ಆವಿಷ್ಕಾ ಫೆರ್ನಾಂಡೊ, ಭಾನುಕಾ ರಾಜಪಕ್ಷೆ, ಚಮಿಕ ಕರುಣರತ್ನೆ, ವನಿಂಡು ಹಸರಂಗ, ದುಷ್ಮಂತ ಚಮೀರಾ, ಲಹಿರು ಕುಮಾರ, ಮಹೀಶ ತೀಕ್ಷಾನ, ಅಕಿಲಾ ಧನಂಜಯ, ಬಿನೂರ ಫರ್ನಾಂಡೊ
ಇದನ್ನೂ ಓದಿ:ಮಾರಕ ಬೌಲರ್ಗೆ ಟೀಂ ಇಂಡಿಯಾ ಮಣೆ.. T-20 ವಿಶ್ವಕಪ್ ನೆಟ್ ಬೌಲರ್ ಆಗಿ ಉಮ್ರಾನ್ ಮಲಿಕ್ ಆಯ್ಕೆ