ದುಬೈ : ಬುಧವಾರ ಐಸಿಸಿ ಬಿಡುಗಡೆ ಮಾಡಿರುವ ನೂತನ ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಬ್ಯಾಟರ್ಗಳು ಪ್ರಾಬಲ್ಯ ಸಾಧಿಸಿದ್ದಾರೆ. ಉತ್ತಮ ಲಯದಲ್ಲಿರುವ ಮಾರ್ನಸ್ ಲಾಬುಶೇನ್ ತಮ್ಮ ರಾಷ್ಟ್ರದ ಸ್ಟೀವ್ ಸ್ಮಿತ್ ಮತ್ತು ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ರನ್ನು ಹಿಂದಿಕ್ಕಿ 2ನೇ ಸ್ಥಾನ ಪಡೆದಿದ್ದಾರೆ.
ಮೊದಲ ಆ್ಯಶಸ್ ಟೆಸ್ಟ್ನಲ್ಲಿ 74 ರನ್ಗಳಿಸಿದ್ದ ಲಾಬುಶೇನ್(894 ಅಂಕ) 2 ಸ್ಥಾನ ಏರಿಕೆ ಕಂಡು 2ನೇ ರ‍್ಯಾಂಕ್ ಪಡೆದಿದ್ದರೆ, 94 ರನ್ಗಳಿಸಿದ್ದ ಡೇವಿಡ್ ವಾರ್ನರ್ 3 ಸ್ಥಾನ ಏರಿಕೆ ಕಂಡು ಭಾರತ ತಂಡದ ನಾಯಕ ಕೊಹ್ಲಿ ಜೊತೆಗೆ ಜಂಟಿ 6ನೇ ಸ್ಥಾನ ಪಡೆದಿದ್ದಾರೆ.
ಸ್ಫೋಟಕ ಶತಕ(152) ಸಿಡಿಸಿದ್ದ ಟ್ರಾವಿಸ್ ಹೆಡ್ ಬರೋಬ್ಬರಿ 16 ಸ್ಥಾನ ಏರಿಕೆ ಕಂಡು ಕ್ವಿಂಟನ್ ಡಿಕಾಕ್ ಜೊತೆಗೆ 10ನೇ ಸ್ಥಾನ ಅಲಂಕರಿಸಿದ್ದಾರೆ. ಇಂಗ್ಲೆಂಡ್ ನಾಯಕ ಜೋ ರೂಟ್(903) ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
-
Australia’s batters and Pakistan’s pacers make significant gains in the latest @MRFWorldwide ICC Men’s Test Player Rankings 📈
— ICC (@ICC) December 15, 2021 " class="align-text-top noRightClick twitterSection" data="
Details 👉 https://t.co/kkMymOpUSW pic.twitter.com/SeCzbldK5g
">Australia’s batters and Pakistan’s pacers make significant gains in the latest @MRFWorldwide ICC Men’s Test Player Rankings 📈
— ICC (@ICC) December 15, 2021
Details 👉 https://t.co/kkMymOpUSW pic.twitter.com/SeCzbldK5gAustralia’s batters and Pakistan’s pacers make significant gains in the latest @MRFWorldwide ICC Men’s Test Player Rankings 📈
— ICC (@ICC) December 15, 2021
Details 👉 https://t.co/kkMymOpUSW pic.twitter.com/SeCzbldK5g
3ರಲ್ಲಿ ಸ್ಟೀವ್ ಸ್ಮಿತ್(881) ಇದ್ದರೆ, ಕೇನ್ ವಿಲಿಯಮ್ಸನ್(879), ರೋಹಿತ್ ಶರ್ಮಾ(797), ವಿರಾಟ್ ಕೊಹ್ಲಿ(756) ಮತ್ತು ವಾರ್ನರ್(756) ನಂತರದಲ್ಲಿ ಇದ್ದಾರೆ.
ಪಾಕ್ ಬೌಲರ್ಗಳಲ್ಲಿ ಏರಿಕೆ
ಮೊದಲ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್(913) ಮತ್ತು ಭಾರತದ ರವಿಚಂದ್ರನ್ ಅಶ್ವಿನ್(883) ಅಗ್ರ 2 ಸ್ಥಾನದಲ್ಲಿ ಮುಂದುವರಿದಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಅಮೋಘ ಪ್ರದರ್ಶನ ತೋರಿದ ಶಾಹೀನ್ ಅಫ್ರಿದಿ 5 ರಿಂದ 3ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಹಸನ್ ಅಲಿ ಅಗ್ರ 10ಕ್ಕೆ ಪ್ರವೇಶಿಸಿದ್ದಾರೆ.
ಹೆಜಲ್ವುಡ್(4), ಟಿಮ್ ಸೌಥಿ(5), ಕಗಿಸೋ ರಬಾಡ(6), ನೀಲ್ ವ್ಯಾಗ್ನರ್(7) ಜೇಮ್ಸ್ ಆ್ಯಂಡರ್ಸನ್(8) ಕೈಲ್ ಜೇಮಿಸನ್(9) ಟಾಪ್ 10ರಲ್ಲಿರುವ ಇತರೆ ಬೌಲರ್ಗಳು.
ಇದನ್ನೂ ಓದಿ:ಆಸೀಸ್ ವಿರುದ್ಧ 36 ರನ್ಗಳಿಗೆ ಆಲೌಟ್ ಆದ ಭಾರತ ಸರಣಿ ಗೆದ್ದಿತು, ಕಷ್ಟಪಟ್ಟರೆ ನಮ್ಮಿಂದಲೂ ಸಾಧ್ಯ : ಆ್ಯಂಡರ್ಸನ್ ಕಿವಿಮಾತು: