ETV Bharat / sports

WTC final: ಕೊಹ್ಲಿ-ಪಂತ್ ವಿಕೆಟ್ ಪಡೆದು 8 ದಶಕಗಳ ದಾಖಲೆ ಬ್ರೇಕ್ ಮಾಡಿದ ಜೆಮೀಸನ್ - ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಲೈವ್ ಅಪ್​ಡೇಟ್​

ಜೆಮೀಸನ್ ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ, ಪಂತ್ ಸೇರಿದಂತೆ ಮೊದಲ ಇನ್ನಿಂಗ್ಸ್​ನಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದರು. ಈ ಮೂಲಕ ಅವರು ತಮ್ಮ 8 ಟೆಸ್ಟ್​ ಪಂದ್ಯಗಳಿಂದ ಒಟ್ಟು 44 ವಿಕೆಟ್ ಪಡೆಯುವ ಮೂಲಕ ದಾಖಲೆಯೊಂದಕ್ಕೆ ಪಾತ್ರರಾದರು.

ಕೈಲ್ ಜೆಮೀಸನ್
ಕೈಲ್ ಜೆಮೀಸನ್
author img

By

Published : Jun 20, 2021, 9:18 PM IST

ಸೌತಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದ 3ನೇ ದಿನ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಬ್ ಪಂತ್ ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್ ವೇಗಿ ಕೈಲ್ ಜೆಮೀಸನ್​ ತಮ್ಮ ದೇಶದ ಪರ ಮೊದಲ 8 ಪಂದ್ಯಗಳಲ್ಲಿ ಹೆಚ್ಚು ವಿಕೆಟ್​ ಪಡೆದ ದಾಖಲೆಗೆ ಪಾತ್ರರಾಗಿದ್ದಾರೆ.

ಜೆಮೀಸನ್ ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ, ಪಂತ್ ಸೇರಿದಂತೆ ಮೊದಲ ಇನ್ನಿಂಗ್ಸ್​ನಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದರು. ಈ ಮೂಲಕ ಅವರು ತಮ್ಮ 8 ಟೆಸ್ಟ್​ ಪಂದ್ಯಗಳಿಂದ ಒಟ್ಟು 44 ವಿಕೆಟ್ ಪಡೆಯುವ ಮೂಲಕ ದಾಖಲೆಯೊಂದಕ್ಕೆ ಪಾತ್ರರಾದರು.

44 ವಿಕೆಟ್ ಪಡೆದಿರುವ ಜೆಮೀಸ್​ ಕಿವೀಸ್​ ಪರ ಮೊದಲ 8 ಟೆಸ್ಟ್​ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಅವರು 1930-40ರ ದಶಕದಲ್ಲಿ ಜಾಕ್ ಕೋವಿ ದಾಖಲೆಯನ್ನು ಬ್ರೇಕ್ ಮಾಡಿದರು. ಕೋವಿ 41 ವಿಕೆಟ್​ ಪಡೆದು ಇಲ್ಲಿಯವರೆಗೆ ಈ ದಾಖಲೆಗೆ ಪಾತ್ರರಾಗಿದ್ದರು.

ಇವರಿಬ್ಬರನ್ನು ಹೊರತುಪಡಿಸಿದರೆ, ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಆಗಿರುವ ಶೇನ್ ಬಾಂಡ್ 38, ಆಲ್​ರೌಂಡರ್​ ಡಾಗ್ ಬ್ರೇಸ್​ವೆಲ್ 33 ಮತ್ತು ಹೆಡ್ಲೀ ಹೋವರ್ತ್​ 32 ವಿಕೆಟ್ ಪಡೆದಿದ್ದಾರೆ.

ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 217ರ ನ್​ಗಳಿಗೆ ಆಲೌಟ್ ಆಯಿತು. ಕೈಲ್ ಜೆಮೀಸನ್ 31ಕ್ಕೆ 5 ವಿಕೆಟ್ ಪಡೆದರೆ, ಇವರಿಗೆ ಸಾಥ್ ನೀಡಿದ ವ್ಯಾಗ್ನರ್ ಮತ್ತು ಬೌಲ್ಟ್​ ತಲಾ 2 ವಿಕೆಟ್ ಹಾಗೂ ಸೌಥಿ ಒಂದು ವಿಕೆಟ್ ಪಡೆದರು.

ಇದನ್ನು ಓದಿ:ಪೂಜಾರ ಸ್ಟ್ರೈಕ್ ರೊಟೇಟ್​ ಮಾಡುವುದರಲ್ಲಿ ಎಡವುತ್ತಿದ್ದಾರೆ: ಡೇಲ್ ಸ್ಟೇನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.