ETV Bharat / sports

ತವರಿನಲ್ಲೂ ಭಾರತೀಯರಿಗೆ ಜೇಮಿಸನ್ ಕಂಟಕ: 4 ಪಂದ್ಯಗಳಿಂದ ಪಡೆದ ವಿಕೆಟ್​ ಎಷ್ಟು? - ಭಾರತದೆದರು ಮಿಂಚಿದ ಜೇಮಿಸನ್

ಇಂಗ್ಲೆಂಡ್​ನಲ್ಲಿ ನಡೆದಿದ್ದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ನಲ್ಲೂ ಭಾರತದೆದುರು 7 ವಿಕೆಟ್​ ಪಡೆದು ಕಿವೀಸ್​ಗೆ ಮರೀಚಿಕೆಯಾಗಿದ್ದ ಐಸಿಸಿ ಟ್ರೋಫಿಯನ್ನು ಗೆದ್ದುಕೊಡುವಲ್ಲಿ ಜೇಮಿಸನ್ ಯಶಸ್ವಿಯಾಗಿದ್ದರು. ಇದೀಗ ಭಾರತದಲ್ಲಿ ನಡೆಯುತ್ತಿರುವ ಟೆಸ್ಟ್​ ಸರಣಿಯಲ್ಲೂ ಭಾರತೀಯ ಬ್ಯಾಟರ್​ಗಳನ್ನು ಕಾಡತೊಡಗಿದ್ದಾರೆ.

Kyle jamieson
ಕೈಲ್ ಜೇಮಿಸನ್ ದಾಖಲೆ
author img

By

Published : Nov 25, 2021, 6:02 PM IST

ಕಾನ್ಪುರ: ನ್ಯೂಜಿಲ್ಯಾಂಡ್​ ಎದುರು ಟೆಸ್ಟ್​ ಕ್ರಿಕೆಟ್​ ಆಡುವಾಗಲೆಲ್ಲಾ ಜೇಮಿಸನ್ ಭಾರತೀಯ ಬ್ಯಾಟರ್​ಗಳ ಪಾಲಿಗೆ ಕಬ್ಬಿಣದ ಕಡಲೆಯಾಗುತ್ತಿದ್ದಾರೆ. ಪದಾರ್ಪಣೆ ಟೆಸ್ಟ್​ ಸರಣಿಯಲ್ಲೇ ಭಾರತೀಯರನ್ನು ಕಾಡಿದ್ದ ಅವರೂ ಬ್ಯಾಟಿಂಗ್ ಮತ್ತು ಬೌಲಿಂಗ್​ ಎರಡರಲ್ಲೂ ಮಿಂಚಿ ಕಿವೀಸ್​ 2-0 ಸರಣಿಯಲ್ಲಿ ಗೆಲ್ಲಲು ನೆರವಾಗಿದ್ದರು.

ನಂತರ, ​ಜುಲೈನಲ್ಲಿ ಇಂಗ್ಲೆಂಡ್​ನಲ್ಲಿ ನಡೆದಿದ್ದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ನಲ್ಲೂ ಭಾರತದೆದುರು 7 ವಿಕೆಟ್​ ಪಡೆದು ಕಿವೀಸ್​ಗೆ ಮರೀಚಿಕೆಯಾಗಿದ್ದ ಐಸಿಸಿ ಟ್ರೋಫಿಯನ್ನು ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಭಾರತದಲ್ಲಿ ನಡೆಯುತ್ತಿರುವ ಟೆಸ್ಟ್​ ಸರಣಿಯಲ್ಲೂ ಭಾರತೀಯ ಬ್ಯಾಟರ್​ಗಳನ್ನು ಕಾಡತೊಡಗಿದ್ದಾರೆ.

ಕಾನ್ಪುರದಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್​ನಲ್ಲಿ ಜೇಮಿಸನ್​ ಸ್ಪಿನ್ ಸ್ನೇಹಿ ಪಿಚ್​ನಲ್ಲೂ ಅದ್ಭುತ ಸ್ವಿಂಗ್ ಮಾಡುತ್ತಿದ್ದು, ಮೊದಲ ದಿನವೇ 3 ವಿಕೆಟ್​ ಪಡೆದು ಮಿಂಚಿದ್ದಾರೆ. ಕಿವೀಸ್​ ಲಂಬು ಬೌಲರ್​ ಇಂದು 13 ರನ್​ಗಳಿಸಿದ್ದ ಕನ್ನಡಿಗ ಮಯಾಂಕ್ ಅಗರ್​ವಾಲ್​, 35 ರನ್​ಗಳಿಸಿದ್ದ ನಾಯಕ ಅಜಿಂಕ್ಯ ರಹಾನೆ ಮತ್ತು 52 ರನ್​ಗಳಿಸಿದ್ದ ಶುಬ್ಮನ್​ ಗಿಲ್​ರನ್ನು ಪೆವಿಲಿಯನ್​ಗಟ್ಟಿದ್ದಾರೆ.

26 ವರ್ಷದ ಕಿವೀಸ್​ ಬೌಲರ್​ ಭಾರತದೆದುರು 7 ಇನ್ನಿಂಗ್ಸ್​ ಮೂಲಕ 19 ವಿಕೆಟ್​ ಪಡೆದಿದ್ದಾರೆ. ಈಗಾಗಲೇ ಎರಡು ಬಾರಿ 5 ವಿಕೆಟ್ ಗೊಂಚಲು ​ ಪಡೆದಿದ್ದಾರೆ. ಒಟ್ಟಾರೆ ಕಿವೀಸ್​ ಪರ ಆಡಿರುವ 9 (ಇಂದಿನ ಪಂದ್ಯ ಸೇರಿ) ಪಂದ್ಯಗಳಲ್ಲಿ 49 ವಿಕೆಟ್​ ಪಡೆದಿದ್ದಾರೆ. 5 ಬಾರಿ 5ಕ್ಕೂ ಹೆಚ್ಚು ವಿಕೆಟ್​ ಪಡೆದಿದ್ದರೆ, ಒಮ್ಮೆ 10 ವಿಕೆಟ್​ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ:7 ತಿಂಗಳ ಏಳುಬೀಳಿನ ಪಯಣ: ಗಾಯದಿಂದ ಚೇತರಿಸಿಕೊಂಡು ಟೆಸ್ಟ್​ ಕ್ಯಾಪ್​ ಧರಿಸಿದ ಅಯ್ಯರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.