ನವದೆಹಲಿ : ಅನಿಲ್ ಕುಂಬ್ಳೆ ಅವರಿಂದ ನಾನು ಕೆಲವು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ ಎಂದು ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಐಸಿಸಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಭಾರತದ ಪರ ಗರಿಷ್ಠ ವಿಕೆಟ್ ಪಡೆದಿರುವ ಅನಿಲ್ ಕುಂಬ್ಳೆ(953) 2015ರಲ್ಲಿ ಐಸಿಸಿ ಹಾಲ್ ಆಫ್ ಫೇಮ್ ಪಟ್ಟಿಗೆ ಸೇರ್ಪಡೆಯಾಗಿದ್ದರು. ಈ ಸಂದರ್ಭದಲ್ಲಿ ಅವರ ಸಮಕಾಲೀನರಾದ ವಿವಿಧ ದೇಶಗಳ ಸ್ಟಾರ್ ಕ್ರಿಕೆಟಿಗರಿಂದ ಐಸಿಸಿ ಹೇಳಿಕೆ ಪಡೆದುಕೊಂಡಿತ್ತು.
ಶ್ರೀಲಂಕಾದ ಕುಮಾರ್ ಸಂಗಕ್ಕಾರ, ಮಹೇಲಾ ಜಯವರ್ದನೆ, ನ್ಯೂಜಿಲ್ಯಾಂಡ್ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್, ಇಂಗ್ಲೆಂಡ್‌ನ ಆ್ಯಂಗಸ್ ಫ್ರಾಸರ್ ಪಾಕಿಸ್ತಾನದ ಮಾಜಿ ನಾಯಕ ವಾಸೀಮ್ ಅಕ್ರಮ್ ಕೂಡ ಕುಂಬ್ಳೆ ಬಗ್ಗೆ ಮೆಚ್ಚುಗೆಯ ಮಾತನಾಡಿರುವ ವಿಡಿಯೋವನ್ನು ಐಸಿಸಿ ಬುಧವಾರ ತನ್ನ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ.
-
More 📽️ https://t.co/8zGg4Jc9wP pic.twitter.com/8TfZTriS7b
— ICC (@ICC) May 19, 2021 " class="align-text-top noRightClick twitterSection" data="
">More 📽️ https://t.co/8zGg4Jc9wP pic.twitter.com/8TfZTriS7b
— ICC (@ICC) May 19, 2021More 📽️ https://t.co/8zGg4Jc9wP pic.twitter.com/8TfZTriS7b
— ICC (@ICC) May 19, 2021
"ನನಗೆ ಕುಂಬ್ಳೆ ಕೆಲವು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುವಂತೆ ಮಾಡಿದ್ದಾರೆ. ಅವರು ನೀವು ಬಯಸಿದಂತೆ ಸಾಂಪ್ರಾದಾಯಿಕ ಲೆಗ್ ಸ್ಪಿನ್ನರ್ ಅಲ್ಲ. ದೈತ್ಯ ದೇಹ, ಎತ್ತರವಾಗಿರುವ ಬೌಲರ್ ಓಡಿ ಬಂದು, ತಮ್ಮ ಎತ್ತರವಾದ ಕೈಗಳಿಂದ ಬೌಲಿಂಗ್ ಮಾಡಿದಾಗ, ನಿಮಗೆ ಅವರ ವಿರುದ್ಧ ರನ್ಗಳಿಸುವುದು ಸುಲಭವಾಗಿರುವುದಿಲ್ಲ" ಎಂದು ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ತಿಳಿಸಿದ್ದಾರೆ.
ಪಾಕಿಸ್ತಾನದ ಮಾಜಿ ನಾಯಕ ವಾಸೀಮ್ ಅಕ್ರಮ್,"ದೆಹಲಿಯಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಅವರು ನಮ್ಮ ವಿರುದ್ಧ ಒಂದೇ ಇನ್ನಿಂಗ್ಸ್ನಲ್ಲಿ 10 ವಿಕೆಟ್ ಪಡೆದಿದ್ದರು. ಆ ದಿನ ನಿನ್ನೆ ನಡೆದಿದೆ ಎಂದು ನಾನು ಇನ್ನೂ ನೆನಪಿನಲ್ಲಿಟ್ಟುಕೊಂಡಿದ್ದೇನೆ, ಅವರು ಇತರೆ ಲೆಗ್ಸ್ಪಿನ್ನರ್ಗಳಂತೆ ಅಲ್ಲ, ತುಂಬಾ ಕಠಿಣ ಬೌಲರ್" ಎಂದು ಕುಂಬ್ಳೆ ಬೌಲಿಂಗ್ ಗುಣಗಾನ ಮಾಡಿದ್ದಾರೆ.
1990ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅನಿಲ್ ಕುಂಬ್ಳೆ, 2008ರಲ್ಲಿ ನಿವೃತ್ತಿಯಾಗಿದ್ದರು. ಅವರು 132 ಟೆಸ್ಟ್ ಪಂದ್ಯಗಳಿಂದ 619 ವಿಕೆಟ್ಸ್, 271 ಏಕದಿನ ಪಂದ್ಯಗಳಿಂದ 337 ವಿಕೆಟ್ ಪಡೆದಿದ್ದಾರೆ.
ಇದನ್ನು ಓದಿ: ಐಪಿಎಲ್ ಪೂರ್ಣಗೊಳಿಸಲು ಬಿಸಿಸಿಐ ಮಾಸ್ಟರ್ ಪ್ಲಾನ್? ಆದ್ರೆ ಇಸಿಬಿ ಒಪ್ಪಿಗೆ ಬೇಕೇಬೇಕು!