ಮುಂಬೈ: ಒಂದೆರಡು ವರ್ಷಗಳಿಂದ ಭಾರತ ತಂಡದ ಪ್ರಭಾವಿ ಸ್ಪಿನ್ನರ್ ಆಗಿದ್ದ ಕುಲ್ದೀಪ್ ಯಾದವ್, ಇದೀಗ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಹೆಚ್ಚು ಅವಕಾಶ ಸಿಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ ಬೌಲರ್ಗೆ ಫ್ರಾಂಚೈಸಿ ಲೀಗ್ನಲ್ಲಿ ನಿರೀಕ್ಷಿತ ಅವಕಾಶಗಳು ಸಿಗದಿದ್ದಾಗ ತುಂಬಾ ನಿರಾಶೆಯಾಗುತ್ತದೆ ಎಂದಿದ್ದಾರೆ.
ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ ಪರ ಪದಾರ್ಪಣೆ ಮಾಡಿದ್ದ ಕುಲ್ದೀಪ್ ಯಾದವ್ ಐಪಿಎಲ್ನ ಎಲ್ಲಾ ಪಂದ್ಯಗಳಲ್ಲೂ ಅವಕಾಶ ಪಡೆಯುತ್ತಿದ್ದರು. ಆ ಸಂದರ್ಭದಲ್ಲಿ ತಂಡದ ಯಾದವ್ ಕೆಕೆಆರ್ ಪಾಲಿನ ಮ್ಯಾಚ್ ವಿನ್ನರ್ ಆಗಿದ್ದರು. ಗೌತಿ ನಾಯಕತ್ವದಲ್ಲಿ ಯಾದವ್ 15 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದರು. ಆದರೆ ಕಳೆದ ಒಂದೆರಡು ಐಪಿಎಲ್ಗಳಲ್ಲಿ ರಿಸ್ಟ್ ಸ್ಪಿನ್ನರ್ಗೆ ನಿರೀಕ್ಷಿಸಿದಷ್ಟು ಅವಕಾಶಗಳು ಕೆಕೆಆರ್ನಲ್ಲಿ ಸಿಗುತ್ತಿಲ್ಲ.
"ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಗೆಲುವಿಗಾಗಿ ತೋರುವ ಹಸಿವನ್ನು ನಾನು ನೋಡಿದ್ದೇನೆ. ನಾವು ಕೆಕೆಆರ್ನಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಅದನ್ನು ಕಾಣುತ್ತಿದ್ದೆವು. ಕೊಹ್ಲಿ ಮತ್ತು ಗೌತಮ್ ಗಂಭೀರ್ ಮನಸ್ಥಿತಿ ತಂಡವನ್ನು ಮುನ್ನಡೆಸುವಾಗ ಒಂದೇ ಇರುತ್ತಿತ್ತು. ಆದರೆ ಈ ಮನಸ್ಥಿತಿ ಈಗ ಕೆಕೆಆರ್ ತಂಡದಲ್ಲಿ ಕಾಣದಿರುವುದೇ ತಂಡದ ಸೋಲಿಗೆ ಕಾರಣವಾಗುತ್ತಿದೆ. ಅಲ್ಲದೆ ಅವರು ಟೂರ್ನಮೆಂಟ್ಅನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ" ಎಂದು ಕುಲ್ದೀಪ್ ಯಾದವ್ ತಿಳಿಸಿದ್ದಾರೆ.
ನನ್ನ ಮೇಲೆ ಗಂಭೀರ್ ತೋರಿದ ನಂಬಿಕೆ ಈಗ ಕಾಣೆಯಾಗಿದೆ
ನೀವು ಭಾರತ ತಂಡಕ್ಕೆ ಆಡುತ್ತಿದ್ದರೂ ನಿಮಗೆ ಫ್ರಾಂಚೈಸಿ ಕ್ರಿಕೆಟ್ನಲ್ಲಿ ಅವಕಾಶ ಸಿಗುತ್ತಿಲ್ಲ ಎನ್ನುವುದು ನ್ಯಾಯಸಮ್ಮತವಲ್ಲ. ನಿಮ್ಮಲ್ಲಿ ಕೆಟ್ಟ ಭಾವನೆ ಮೂಡುತ್ತದೆ, ಆದರೆ ನೀವು ಏನೂ ಮಾಡಲಾಗುವುದಿಲ್ಲ, ನೀವು ಕಷ್ಟಪಟ್ಟು ಕೆಲಸ ಮಾಡಬಹುದು ಮತ್ತು ಕಾರಣಗಳನ್ನು ಕೇಳಬಹುದು. ನೀವು ಕಾರಣ ಕೇಳಿದಾಗ ಕೆಲವು ವಿವರಣೆ ಪಡೆಯಬಹುದು ಆದರೆ ಕೆಕೆಆರ್ನಲ್ಲಿ ನಾನು ನಿರೀಕ್ಷಿಸುತ್ತಿರುವ ಬೆಂಬಲ ನನಗೆ ಸಿಗುತ್ತಿಲ್ಲ. ಗಂಭೀರ್ ನನ್ನ ಮೇಲೆ ತೋರುತ್ತಿದ್ದ ವಿಶ್ವಾಸ ಈಗಿರುವ ತಂಡದಿಂದ ನನಗೆ ಸಿಗುತ್ತಿಲ್ಲ ಎಂದು ಕುಲ್ದೀಪ್ ಯಾದವ್ ತಿಳಿಸಿದ್ದಾರೆ.
ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಭರವಸೆ:
ಭಾರತದಲ್ಲಿ ಈ ವರ್ಷ ಟಿ20 ವಿಶ್ವಕಪ್ ನಡೆಯಲಿದೆ, ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ 2020ರಲ್ಲಿ ಮುಂದೂಡಿದ ವಿಶ್ವಕಪ್ ನಡೆಯಲಿದೆ. ಆದ್ದರಿಂದ ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿ ಮತ್ತು ಗೆ 2ನೇ ಹಂತದ ಐಪಿಎಲ್ನಲ್ಲಿ ಹೆಚ್ಚಿನ ಅವಕಾಶಗಳು ಸಿಕ್ಕರೆ ಟಿ20 ವಿಶ್ವಕಪ್ನಲ್ಲಿ ಪ್ರಭಾವ ಬೀರಲು ಸಾಧ್ಯವಾಗುತ್ತದೆ. ನನಗೆ ಅವಕಾಶ ಸಿಕ್ಕರೆ ನಾನು ಆಸ್ಟ್ರೇಲಿಯಾದಲ್ಲಿ ಪರಿಣಾಮಕಾರಿಯಾಗಬಹುದು ಎಂದು ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಆಸ್ಟ್ರೇಲಿಯಾವನ್ನು ಅವರ ನೆಲದಲ್ಲೇ ಮಣಿಸಿದ್ದು ಆತ್ಮ ವಿಶ್ವಾಸ ಹೆಚ್ಚಿಸಿದೆ: ಇಶಾಂತ್