ETV Bharat / sports

ಏಷ್ಯಾಕಪ್​ನಲ್ಲಿ 9 ವಿಕೆಟ್​ ಕಬಳಿಸಿದ ಟಾಪ್​ ಬೌಲರ್​ ಕುಲದೀಪ್​.. ಲಂಕಾ ವಿರುದ್ಧದ ವಿಶೇಷ ಮೈಲಿಗಲ್ಲು ತಲುಪಿದ ಚೈನಾಮನ್​ ಸ್ಪಿನ್ನರ್

author img

By ETV Bharat Karnataka Team

Published : Sep 13, 2023, 5:53 PM IST

Updated : Sep 13, 2023, 6:17 PM IST

Kuldeep Yadav reach 150 ODI wickets: ಏಷ್ಯಾಕಪ್​ನಲ್ಲಿ ಭಾರತದ ಚೈನಾಮನ್​ ಸ್ಪಿನ್ನರ್​ ಕುಲದೀಪ್​ ಯಾದವ್​ ವಿಶೇಷ ಮೈಲಿಗಲ್ಲೊಂದನ್ನು ತಲುಪಿದ್ದಾರೆ.

Kuldeep Yadav
Kuldeep Yadav

ಕೊಲಂಬೊ (ಶ್ರೀಲಂಕಾ): ಎಡಗೈ ಚೈನಾಮನ್​ ಬೌಲರ್​ ಕುಲದೀಪ್ ಯಾದವ್​ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಮೈಲಿಗಲ್ಲೊಂದನ್ನು ದಾಟಿದ್ದಾರೆ. ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಆಯೋಜಿಸಲಾಗಿರುವ ಏಷ್ಯಾಕಪ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕುಲದೀಪ್​, ಲಂಕಾ ನೆಲದಲ್ಲಿ ತಮ್ಮ ಸ್ಪಿನ್​ ಮೋಡಿ ಮಾಡುತ್ತಿದ್ದಾರೆ. ಏಷ್ಯಾಕಪ್​ನ ಕಳೆದ ಎರಡು ಇನ್ನಿಂಗ್ಸ್​​ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಕುಲದೀಪ್​ ಐಸಿಸಿ ಶ್ರೇಯಾಂಕದಲ್ಲೂ ಏರಿಕೆ ಕಂಡಿದ್ದಾರೆ.

  • 150 wickets for Kuldeep Yadav in ODIs.

    5 wickets vs Pakistan & 4 wickets vs Sri Lanka - Two classic performances.

    Kuldeep is a hero for India....!!!!! pic.twitter.com/U3NjPv1diF

    — Johns. (@CricCrazyJohns) September 12, 2023 " class="align-text-top noRightClick twitterSection" data=" ">

ನಿನ್ನೆ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಪ್ರಮುಖ ವಿಕೆಟ್​ಗಳನ್ನು ಕಬಳಿಸಿದ್ದಲ್ಲದೇ, ಕೊನೆಯಲ್ಲಿ ಎರಡು ವಿಕೆಟ್​ ಪಡೆದು 4 ವಿಕೆಟ್​ಗಳನ್ನು ಪಡೆದರು. ಈ ಮೂಲಕ ಕುಲದೀಪ್ ಯಾದವ್ 150 ಏಕದಿನ ವಿಕೆಟ್‌ಗಳ ಗಡಿ ತಲುಪಿದರು. ಯಾದವ್​ ಕೇವಲ 88 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಭಾರತದ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಕುಲದೀಪ್​ ನಿನ್ನೆಯ ಪಂದ್ಯದಲ್ಲಿ 9.3 ಓವರ್‌ ಮಾಡಿ 4.52 ಎಕಾನಮಿ ದರದಲ್ಲಿ 43 ರನ್‌ಗಳಿಗೆ ನಾಲ್ಕು ವಿಕೆಟ್ ಪಡೆದರು. ಅವರು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಸದೀರ ಸಮರವಿಕ್ರಮ ಮತ್ತು ಚರಿತ್ ಅಸಲಂಕಾ ಅವರ ನಿರ್ಣಾಯಕ ವಿಕೆಟ್‌ಗಳನ್ನು ಪಡೆದರು. ಬಳಿಕ ಕಸುನ್ ರಜಿತ ಮತ್ತು ಮತೀಶ ಪತಿರಣ ಅವರನ್ನು ತೆಗೆದು ಲಂಕಾದ ಸರ್ವಪತನಕ್ಕೆ ಕಾರಣರಾದರು.

88 ಏಕದಿನದಲ್ಲಿ ಕುಲದೀಪ್ 25.64 ಸರಾಸರಿಯಲ್ಲಿ 150 ವಿಕೆಟ್‌ಗಳನ್ನು ಹೊಂದಿದ್ದಾರೆ. ಅದರಲ್ಲಿ 6/25 ಅತ್ಯುತ್ತಮ ಬೌಲಿಂಗ್ ಅಂಕಿ - ಅಂಶ ಆಗಿದೆ. ಅವರು ಏಕದಿನದಲ್ಲಿ ಭಾರತಕ್ಕಾಗಿ ಏಳು ಬಾರಿ ನಾಲ್ಕು ವಿಕೆಟ್ ಮತ್ತು ಎರಡು ಐದು ವಿಕೆಟ್​ಗಳ ಗುಚ್ಛ ಪಡೆದಿದ್ದಾರೆ. 80 ಪಂದ್ಯಗಳಿಂದ ವೇಗದ ಬೌಲರ್​ ಮೊಹಮ್ಮದ್​ ಶಮಿ 150 ವಿಕೆಟ್​ ಕಬಳಿಸಿದ ಸಾಧನೆ ಮಾಡಿದ್ದರು. ಹೀಗಾಗಿ ಅತಿವೇಗವಾಗಿ 150 ವಿಕೆಟ್​ ಪಡೆದ ಭಾರತದ ಎರಡನೇ ಬೌಲರ್ ಕುಲದೀಪ್​ ಆಗಿದ್ದಾರೆ. ಆದರೆ, ಸ್ಪಿನ್​​ ಬೌಲಿಂಗ್​ನಲ್ಲಿ ಭಾರತದ ಮೊದಲಿಗರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಇವರಿಗೂ ಮೊದಲು ಶ್ರೀಲಂಕಾದ ಅಜಂತಾ ಮೆಂಡಿಸ್ (84), ರಶೀದ್ ಖಾನ್ (80) ಮತ್ತು ಸಕ್ಲೇನ್ ಮುಷ್ತಾಕ್ (78) ಇದ್ದಾರೆ.

ಏಷ್ಯಾಕಪ್​ನ ಟಾಪ್​ ಬೌಲರ್​: ಏಷ್ಯಾಕಪ್​ನ ನಾಲ್ಕು ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ ಪಡೆದಿರುವ ಕುಲದೀಪ್ ಪ್ರಮುಖ ವಿಕೆಟ್ ಟೇಕರ್ ಆಗಿದ್ದಾರೆ. ಭಾರತ ಪಾಕಿಸ್ತಾನದ ವಿರುದ್ಧ 228ರನ್​ನ ಬೃಹತ್​ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಕುಲದೀಪ್​ 5 ವಿಕೆಟ್​ ಪಡೆದರೆ, ನಿನ್ನೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್​ ಕಬಳಿಸಿದ್ದಾರೆ.

ಇದನ್ನೂ ಓದಿ: ICC ODI Rankings: ಪಾಕಿಸ್ತಾನದ ವಿರುದ್ಧ ಭಾರತದ ಅದ್ಭುತ ಆಟ.. 4 ವರ್ಷಗಳ ನಂತರ ತ್ರಿವಳಿ ಬ್ಯಾಟರ್​ಗಳ ದಾಖಲೆ

Last Updated : Sep 13, 2023, 6:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.