ETV Bharat / sports

ಕುಲ್‌ದೀಪ್‌ ಸೇನ್‌ ಐದು ವಿಕೆಟ್, ಈಶ್ವರನ್‌ ಅಜೇಯ ಅರ್ಧಶತಕ: ಇರಾನಿ ಕಪ್​ ಗೆದ್ದ ಶೇಷ ಭಾರತ

author img

By

Published : Oct 4, 2022, 9:33 PM IST

ರಾಜ್‌ಕೋಟ್‌ನಲ್ಲಿ ಇರಾನಿ ಕಪ್​ನಲ್ಲಿ ರೆಸ್ಟ್‌ ಆಫ್‌ ಇಂಡಿಯಾ 8 ವಿಕೆಟ್​ಗಳಿಂದ ಜಯಿಸಿದೆ. 2019-20ರ ರಣಜಿ ಚಾಂಪಿಯನ್‌ ಸೌರಾಷ್ಟ್ರ ಮತ್ತು ರೆಸ್ಟ್‌ ಆಫ್‌ ಇಂಡಿಯಾ ನಡುವೆ ಪಂದ್ಯ ಇರಾನಿ ಕಪ್​ ಪಂದ್ಯ ನಡೆದಿದ್ದು, ಕುಲ್​ದೀಪ ಸೇನ್​ ಕೈಚಳಕ ಮತ್ತು ಅಭಿಮನ್ಯುವಿನ ಆಟಕ್ಕೆ ಜಯದೇವ್ ಉನದ್ಕತ್ ಪಡೆ ಸೋಲುಂಡಿತು.

Rest of India regain Irani Trophy
ಇರಾನಿ ಕಪ್​ ಗೆದ್ದ ಶೇಷ ಭಾರತ

ರಾಜ್‌ಕೋಟ್‌: ವೇಗದ ಬೌಲರ್‌ ಕುಲ್‌ದೀಪ್‌ ಸೇನ್‌ ಅವರ ಐದು ವಿಕೆಟ್‌ ಮತ್ತು ಅಭಿಮನ್ಯು ಈಶ್ವರನ್‌ ಅವರ ಅಜೇಯ ಅರ್ಧಶತಕದ ನೆರವಿನಿಂದ ರೆಸ್ಟ್‌ ಆಫ್‌ ಇಂಡಿಯಾ ಮಂಗಳವಾರ 2019-20ರ ರಣಜಿ ಚಾಂಪಿಯನ್‌ ಸೌರಾಷ್ಟ್ರವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿ ಇರಾನಿ ಕಪ್ ಕ್ರಿಕೆಟ್ ಟೂರ್ನಿಯನ್ನು ಗೆದ್ದುಕೊಂಡಿತು.

ಟಾಸ್ ಗೆದ್ದ ಶೇಷ ಭಾರತ (Rest of India) ತಂಡದ ನಾಯಕ ಹನುಮ ವಿಹಾರಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌರಾಷ್ಟ್ರ ತಂಡವು ಮೊದಲ ಇನಿಂಗ್ಸ್​ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತ್ತು. ರೆಸ್ಟ್ ಆಫ್ ಇಂಡಿಯಾ ತಂಡದ ವೇಗಿಗಳಾದ ಮುಖೇಶ್ ಕುಮಾರ್, ಉಮ್ರಾನ್ ಮಲಿಕ್ ಹಾಗೂ ಕುಲ್ದೀಪ್ ಸೇನ್ ದಾಳಿಗೆ ತತ್ತರಿಸಿದ ಸೌರಾಷ್ಟ್ರ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 98 ರನ್​ಗಳಿಗೆ ಆಲೌಟ್ ಆಗಿತ್ತು.

ಆ ಬಳಿಕ ಮೊದಲ ಇನಿಂಗ್ಸ್ ಆಡಿದ್ದ ಶೇಷ ಭಾರತ ತಂಡದ ಪರ ಸರ್ಫರಾಜ್ ಖಾನ್ (138) ಭರ್ಜರಿ ಶತಕ ಸಿಡಿಸಿದ್ದರು. ಈ ಶತಕದ ನೆರವಿನಿಂದ ಶೇಷ ಭಾರತ ತಂಡವು 374 ರನ್​ಗಳನ್ನು ಕಲೆಹಾಕಿತು. ಮೊದಲ ಇನಿಂಗ್ಸ್​ನ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಸೌರಾಷ್ಟ್ರ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು.

ಶೆಲ್ಡನ್ ಜಾಕ್ಸನ್ (71), ವಸವಾಡ (55), ಪ್ರೇರಕ್ (72) ಹಾಗೂ ನಾಯಕ ಜಯದೇವ್ ಉನಾದ್ಕಟ್ (89) ಅರ್ಧಶತಕ ಬಾರಿಸಿ ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿದ್ದರು. ಆದರೆ, ಮೂರನೇ ದಿನದಾಟದ ಅಂತ್ಯದಲ್ಲಿ ಭರ್ಜರಿ ಬೌಲಿಂಗ್ ದಾಳಿ ಸಂಘಟಿಸಿದ ಶೇಷ ಭಾರತ ತಂಡವು ಅಂತಿಮವಾಗಿ ಸೌರಾಷ್ಟ್ರವನ್ನು 380 ರನ್​ಗಳಿಗೆ ಆಲೌಟ್ ಮಾಡಿತು.

ಮೊದಲ ಇನಿಂಗ್ಸ್​ನ ಮುನ್ನಡೆಯೊಂದಿಗೆ 2ನೇ ಇನಿಂಗ್ಸ್​ನಲ್ಲಿ ಕೇವಲ 105 ರನ್​ಗಳ ಟಾರ್ಗೆಟ್ ಪಡೆದ ಶೇಷ ಭಾರತ ತಂಡದ ಪರ ಅಭಿಮನ್ಯು ಈಶ್ವರನ್ (63) ಅರ್ಧಶತಕ ಬಾರಿಸಿದರು. ಅಲ್ಲದೇ ಕೇವಲ 2 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟುವ ಮೂಲಕ 8 ವಿಕೆಟ್​ಗಳಿಂದ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಹನುಮ ವಿಹಾರಿ ನಾಯಕತ್ವದಲ್ಲಿ ಶೇಷ ಭಾರತ ತಂಡವು ಈ ಬಾರಿಯ ಇರಾನಿ ಕಪ್​ ಅನ್ನು ತನ್ನದಾಗಿಸಿಕೊಂಡಿದೆ.

ಇದನ್ನೂ ಓದಿ : ಔಪಚಾರಿಕ ಕದನದಲ್ಲಿ ಟಾಸ್​ಗೆದ್ದು ಕ್ಷೇತ್ರ ರಕ್ಷಣೆ ಆಯ್ದು ಕೊಂಡ ರೋಹಿತ್​ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.