ETV Bharat / sports

2019ರ ವಿಶ್ವಕಪ್​ ನಂತರ ಕುಲ್ದೀಪ್-ಚಹಲ್​ ಬೌಲಿಂಗ್ ಕ್ಷೀಣಿಸಿದೆ.. ಕಾರಣ ಧೋನಿ ಮೈದಾನದಲ್ಲಿಲ್ಲ ಎಂದ ಮಾಜಿ ಕ್ರಿಕೆಟಿಗ

ವಿರಾಟ್​ ಕೊಹ್ಲಿ ನಾಯಕನಾಗಿದ್ದ ಸಂದರ್ಭದಲ್ಲೂ ಕುಲ್ದೀಪ್ ಮತ್ತು ಚಹಲ್​ ಖಂಡಿತ ಧೋನಿ ಮಾತನ್ನೇ ಹೆಚ್ಚು ಕೇಳುತ್ತಿದ್ದರು. ಅವರಿಬ್ಬರು ಧೋನಿಯನ್ನು ಸಂಪೂರ್ಣವಾಗಿ ನಂಬಿದ್ದರು. ಆತ ಅವರಿಬ್ಬರನ್ನು ಉತ್ತಮವಾಗಿ ಗೈಡ್​ ಮಾಡುತ್ತಿದ್ದರು ಎಂದು ಕಾರ್ತಿಕ್​ ತಿಳಿಸಿದ್ದಾರೆ.

kuldeep-chahal bowling charm dropped because MS Dhoni
ಕುಲ್ದೀಪ್ ಚಹಲ್ ಧೋನಿ
author img

By

Published : Jan 24, 2022, 10:12 PM IST

ಮುಂಬೈ: ಭಾರತ ಸೀಮಿತ ಓವರ್​ಗಳ ಕ್ರಿಕೆಟ್​​ನಲ್ಲಿ ಯುಜ್ವೇಂದ್ರ ಚಹಲ್​ ಮತ್ತು ಕುಲ್ದೀಪ್ ಯಾದವ್​ ಅತ್ಯಂತ ಯಶಸ್ವಿ ಸ್ಪಿನ್​ ಜೋಡಿ. ಇವರಿಬ್ಬರು ಭಾರತದಲ್ಲಿ ಮಾತ್ರವಲ್ಲದೆ, ಇಂಗ್ಲೆಂಡ್, ದಕ್ಷಿಣ ಅಫ್ರಿಕಾದಂತಹ ಬೌನ್ಸ್​ ಸ್ನೇಹಿ ವಿಕೆಟ್​ಗಳಲ್ಲಿ ಅದ್ಭುತ ಪ್ರದರ್ಶನ ತೋರಿ ತಂಡಕ್ಕೆ ಹಲವು ಬಾರಿ ಗೆಲುವು ತಂದುಕೊಟ್ಟಿದ್ದರು. ಇದೀಗ ಅವರ ಪ್ರದರ್ಶನ ಕ್ಷೀಣಿಸಿದೆ. ಮೈದಾನದಲ್ಲಿ ಅವರಿಗೆ ಮಾರ್ಗದರ್ಶಕನಾಗಿದ್ದ ಧೋನಿ ಇಂದು ಇಲ್ಲದಿರುವುದೇ ಅವರಿಬ್ಬರ ವೈಫಲ್ಯಕ್ಕೆ ಕಾರಣ ಎಂದು ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.

"2019 ರ ವಿಶ್ವಕಪ್‌ನ ನಂತರ ಎಂ ಎಸ್ ಧೋನಿಯಂತಹವರು ಮೈದಾನದಲ್ಲಿ ಇಲ್ಲದ ಕಾರಣ ಕುಲದೀಪ್ ಮತ್ತು ಯುಜ್ವೇಂದ್ರ ಚಹಲ್​ ಅಂತಹವರ ಬೌಲಿಂಗ್‌ ಪ್ರದರ್ಶನ ಕುಸಿದಿದೆ ಎಂದು ನಾನು ಭಾವಿಸುತ್ತೇನೆ. ಧೋನಿ ಅವರಿಗೆ ಎಷ್ಟು ನೆರವಾಗುತ್ತಿದ್ದರು ಎಂಬುದನ್ನು ನಾನು ನೋಡಿದ್ದೇನೆ. ಬೌಲರ್​ಗಳ ಪ್ರದರ್ಶನ ಒಳ್ಳೆಯ ರೀತಿಯಲ್ಲಿ ಹೋಗುತ್ತಿದ್ದಾಗ ಅವರಿಗೆ ಸಹಾಯದ ಅಗತ್ಯವಿರುವುದಿಲ್ಲ. ಆದರೆ ವೈಫಲ್ಯ ಅನುಭವಿಸಿದಾಗ ಕೆಲವು ಒಳ್ಳೆಯ ನುಡಿಗಳು ಅಗತ್ಯವಿರುತ್ತದೆ" ಎಂದು ಕ್ರಿಕ್​ಬಜ್​ ಚರ್ಚೆಯ ಸಂದರ್ಭದಲ್ಲಿ ಕಾರ್ತಿಕ್ ಅವರು ಧೋನಿ ಅನುಪಸ್ಥಿತಿಯ ಬಗ್ಗೆ​ ಹೇಳಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

"ಸ್ಪಿನ್​ ಬೌಲಿಂಗ್​ಗೆ ಯಾರಾದರೂ ಸ್ಲಾಗ್-ಸ್ವೀಪ್ ಅಥವಾ ರಿವರ್ಸ್-ಸ್ವೀಪ್ ನಂತಹ ಶಾಟ್​​ ಆಡಿದಾಗ, ನೀವು ತುಂಬಾ ಅನುಭವವನ್ನು ಹೊಂದಿರುವ ವ್ಯಕ್ತಿಯಿಂದ ಬುದ್ಧಿವಂತಿಕೆಯ ಪದಗಳನ್ನು ಕೇಳಬೇಕಿರುತ್ತದೆ. ಬೌಲರ್​ಗಳು ಕೂಡ ಅಂತಹ ವ್ಯಕ್ತಿಯನ್ನು ತುಂಬಾ ಪ್ರೀತಿಸುತ್ತಾರೆ " ಎಂದು ಅವರು ಹೇಳಿದರು.

ವಿರಾಟ್​ ಕೊಹ್ಲಿ ನಾಯಕನಾಗಿದ್ದ ಸಂದರ್ಭದಲ್ಲೂ ಕುಲ್ದೀಪ್ ಮತ್ತು ಚಹಲ್​ ಖಂಡಿತ ಧೋನಿ ಮಾತನ್ನೇ ಹೆಚ್ಚು ಕೇಳುತ್ತಿದ್ದರು. ಅವರಿಬ್ಬರು ಧೋನಿಯನ್ನು ಸಂಪೂರ್ಣವಾಗಿ ನಂಬಿದ್ದರು. ಆತ ಅವರಿಬ್ಬರನ್ನು ಉತ್ತಮವಾಗಿ ಗೈಡ್​ ಮಾಡುತ್ತಿದ್ದರು ಎಂದು ಕಾರ್ತಿಕ್​ ತಿಳಿಸಿದ್ದಾರೆ.

2019ರಲ್ಲಿ ಭಾರತ ಏಕದಿನ ವಿಶ್ವಕಪ್​ನಲ್ಲಿ ಆಡಿದ್ದ ಇವರಿಬ್ಬರು ಧೋನಿ ನಿವೃತ್ತಿಯ ಬಳಿಕ ತಮ್ಮ ಪ್ರದರ್ಶನ ಕಾಯ್ದುಕೊಳ್ಳಲಾಗದೆ ಭಾರತ ತಂಡದಿಂದ ನಿಧಾನವಾಗಿ ದೂರವಾದರು. 2021ರ ಟಿ20 ವಿಶ್ವಕಪ್​ನಿಂದಲೂ ಇವರಿಬ್ಬರು ಹೊರಬಿದ್ದಿದ್ದರು. ಆದರೆ ಚಹಲ್ ಕಮ್​ಬ್ಯಾಕ್ ಮಾಡಿದ್ದಾರಾದರೂ ತಮ್ಮ ಹಿಂದಿನ ಚಾರ್ಮ್​ ಉಳಿಸಿಕೊಂಡಿಲ್ಲ ಎನ್ನುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

ಇದನ್ನೂ ಓದಿ:ವಮಿಕಾ ಫೋಟೋ ವೈರಲ್​ : ನಮ್ಮ ನಿಲುವಿನಲ್ಲಿ ಬದಲಾವಣೆಯಿಲ್ಲ, ಫೋಟೋ ಪ್ರಕಟಿಸಬೇಡಿ ಎಂದ ವಿರುಷ್ಕಾ ದಂಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.