ETV Bharat / sports

ರಣಜಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ; ಮನೀಶ್​ಗೆ ನಾಯಕತ್ವ, U19 ವಿಶ್ವಕಪ್​ ವಿಜೇತ ತಂಡದ ಆಟಗಾರನಿಗೂ ಚಾನ್ಸ್​ - ಕರ್ನಾಟಕ ರಣಜಿ ತಂಡ

2022ರ ಸಾಲಿನ ರಣಜಿ ಟ್ರೋಫಿ ಫೆಬ್ರವರಿ 10ರಿಂದ ಆರಂಭವಾಗಲಿದೆ. ಒಟ್ಟು 62 ದಿನಗಳ ಕಾಲ 2 ಹಂತದಲ್ಲಿ ಟೂರ್ನಿ ನಡೆಯಲಿದೆ. ಐಪಿಎಲ್​ಗೂ ಮುನ್ನ ಲೀಗ್​ ಫೆಬ್ರವರಿ 10 ರಿಂದ ಮಾರ್ಚ್ 15 ರವರೆಗೆ ಮತ್ತು ಐಪಿಎಲ್​ ನಂತರ ಮೇ 30 ರಿಂದ ಜೂನ್ 26 ರವರೆಗೆ ನಾಕೌಟ್ ಪಂದ್ಯಗಳು ನಡೆಯಲಿವೆ.

KSCA announce 20 member squad for Ranji Trophy
ಕರ್ನಾಟಕ ತಂಡ
author img

By

Published : Feb 8, 2022, 10:54 PM IST

ಬೆಂಗಳೂರು: ಎರಡು ಹಂತದಲ್ಲಿ ನಡೆಯಲಿರುವ 2021-22ರ ಋತುವಿನ ರಣಜಿ ಟ್ರೋಫಿಗೆ ಕರ್ನಾಟಕ ರಾಜ್ಯ ಕ್ರಿಕೆಟ್​ ಅಸೋಸಿಯೇಷನ್​ 20 ಸದಸ್ಯರ ಕರ್ನಾಟಕ ತಂಡವನ್ನು ಪ್ರಕಟಿಸಿದೆ.

2022ರ ಸಾಲಿನ ರಣಜಿ ಟ್ರೋಫಿ ಫೆಬ್ರವರಿ 10ರಿಂದ ಆರಂಭವಾಗಲಿದೆ. ಒಟ್ಟು 62 ದಿನಗಳ ಕಾಲ 2 ಹಂತದಲ್ಲಿ ಟೂರ್ನಿ ನಡೆಯಲಿದೆ. ಐಪಿಎಲ್​ಗೂ ಮುನ್ನ ಲೀಗ್​ ಫೆಬ್ರವರಿ 10 ರಿಂದ ಮಾರ್ಚ್ 15 ರವರೆಗೆ ಮತ್ತು ಐಪಿಎಲ್​ ನಂತರ ಮೇ 30 ರಿಂದ ಜೂನ್ 26 ರವರೆಗೆ ನಾಕೌಟ್ ಪಂದ್ಯಗಳು ನಡೆಯಲಿವೆ.

ಅನುಭವಿ ಆಟಗಾರ ಮನೀಷ್ ಪಾಂಡೆ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ಉಪನಾಯಕನಾಗಿ ರವಿಕುಮಾರ್ ಸಮರ್ಥ್ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ತಂಡದ ಮಯಾಂಕ್ ಅಗರ್ವಾಲ್, ಅನುಭವಿ ಕರುಣ್ ನಾಯರ್, ಶ್ರೇಯಸ್ ಗೋಪಾಲ್ ಯುವ ಆಟಗಾರ ದೇವದತ್ ಪಡಿಕ್ಕಲ್ ಮತ್ತು ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದಿದ್ದಾರೆ. ವಿಶೇಷವೆಂದರೆ ವೆಸ್ಟ್​ ಇಂಡೀಸ್​ನಲ್ಲಿ ನಡೆದ ಅಂಡರ್​ 19 ವಿಶ್ವಕಪ್​ ಗೆದ್ದ ಭಾರತ ತಂಡದ ಭಾಗವಾಗಿದ್ದ ಅನೀಶ್ವರ್ ಗೌತಮ್​ಗೂ ಅವಕಾಶ ನೀಡಲಾಗಿದೆ.

ಕರ್ನಾಟಕ ತಂಡ ಎಲೈಟ್ ಸಿ ಗುಂಪಿನಲ್ಲಿದ್ದು, ಪುದುಚೇರಿ, ರೈಲ್ವೇ ಮತ್ತು ಜಮ್ಮು ಮತ್ತು ಕಾಶ್ಮೀರ ತಂಡಗಳ ವಿರುದ್ದ ಲೀಗ್​ನಲ್ಲಿ ಸೆಣಸಾಡಲಿದೆ. ಕೋವಿಡ್​ ಕಾರಣ ಎಲ್ಲಾ ಪಂದ್ಯಗಳ ತಟಸ್ಥ ಸ್ಥಳದಲ್ಲಿ ನಡೆಸಲು ಬಿಸಿಸಿಐ ಆಯೋಜಿಸಿದ್ದು, ಕರ್ನಾಟಕದ ಪಂದ್ಯಗಳು ಚೆನ್ನೈನಲ್ಲಿ ನಡೆಯಲಿವೆ. ರಾಜ್ಯ ತಂಡ 2014-15ರ ಆವೃತ್ತಿಯಲ್ಲಿ ಕೊನೆಯ ಬಾರಿಗೆ ರಣಜಿ ಟ್ರೋಫಿ ಎತ್ತಿ ಹಿಡಿದಿತ್ತು

ಕರ್ನಾಟಕ ರಣಜಿ ತಂಡ:

ಮನೀಶ್ ಪಾಂಡೆ (ನಾಯಕ), ರವಿ ಕುಮಾರ್ ಸಮರ್ಥ್ (ಉಪನಾಯಕ), ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ದೇವದತ್ ಪಡಿಕ್ಕಲ್, ಸಿದ್ಧಾರ್ಥ್ ಕೆವಿ, ನಿಶ್ಚಲ್ ಡಿ, ಅನೀಶ್ವರ್ ಗೌತಮ್, ಶುಭಾಂಗ್ ಹೆಗ್ಡೆ, ಕೆ ಗೌತಮ್, ಶ್ರೇಯಸ್ ಗೋಪಾಲ್, ಜಗದೀಶ್ ಸುಚಿತ್ , ಕೆಸಿ ಕಾರಿಯಪ್ಪ, ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), ಶರತ್ ಬಿಆರ್, ಪ್ರಸಿಧ್ ಕೃಷ್ಣ, ರೋನಿತ್ ಮೋರೆ, ವೆಂಕಟೇಶ್ ಎಂ, ವೈಶಾಕ್ ವಿ, ವಿದ್ಯಾಧರ್ ಪಾಟೀಲ್.

ಇದನ್ನೂ ಓದಿ:ಮುಂಬೈ ರಣಜಿ ತಂಡದಲ್ಲಿ ರಹಾನೆ, ಅರ್ಜುನ್​ ತೆಂಡೂಲ್ಕರ್​ಗೆ ಸ್ಥಾನ, ಪೃಥ್ವಿ ಶಾ ನಾಯಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.