ಭಾರತದ ಉದಯೋನ್ಮುಖ ಕ್ರಿಕೆಟ್ ಆಟಗಾರ, ವಿಕೆಟ್ ಕೀಪರ್ ಶ್ರೀಕರ್ ಭರತ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಧೋನಿಯಿಂದ ಸಲಹೆ ಪಡೆದಿದ್ದೇನೆ ಎಂದಿದ್ದಾರೆ. ಭಾರತದ ಮಾಜಿ ನಾಯಕ ಧೋನಿ ನಾಯಕರಾಗಿ ಎಷ್ಟು ಯಶಸ್ವಿಯೋ ಅದರ ಎರಡು ಪಟ್ಟು ವಿಕೆಟ್ ಕೀಪಿಂಗ್‌ನಲ್ಲಿ ಯಶ ಸಾಧಿಸಿದ್ದಾರೆ. 41 ವರ್ಷದ ಮಾಹಿ ವಿಕೆಟ್ ಹಿಂದೆ ಈಗಲೂ ಪಾದರಸದಂತೆ ಚುರುಕು. ಬ್ಯಾಟರ್ ಒಂದು ಕ್ಷಣ ಕಾಲನ್ನು ಕ್ರೀಸ್ನಿಂದ ಹೊರಗಿಟ್ಟರೆ ಸ್ಟಂಪ್ ಮಾಡಿ ಔಟ್ ಮಾಡುವಷ್ಟು ಚತುರ ಈ ಧೋನಿ. ಇದಕ್ಕೆ ಸಾಕ್ಷಿಯಾಗಿ ಐಪಿಎಲ್ ಫೈನಲ್ನಲ್ಲಿ ಶುಭಮನ್ ಗಿಲ್ ಔಟ್ ಆಗಿದ್ದನ್ನು ಪರಿಗಣಿಸಬಹುದು.
ಅತಿ ಹೆಚ್ಚು ವೇಗದಲ್ಲಿ ಸ್ಟಂಪ್ ಮಾಡಿದ ದಾಖಲೆ ಮತ್ತು ವಿಕೆಟ್ಗಳನ್ನು ಉರುಳಿಸಿದ ರೆಕಾರ್ಡ್ ಸಹ ಧೋನಿ ಹೆಸರಿನಲ್ಲಿದೆ. ವಿದೇಶಿ ಕೀಪರ್ಗಳಿಗೂ ಧೋನಿ ಒಬ್ಬ ಮಾದರಿ ವಿಕೆಟ್ ಕೀಪರ್ ಆಗಿದ್ದಾರೆ. ಭಾರತದ ಮುಂದಿನ ಪೀಳಿಗೆ ಕೀಪರ್ಗಳಿಗೆ ಧೋನಿ ಸ್ಪೂರ್ತಿಯ ಸೆಲೆ. ಕಳೆದ ಕೆಲ ಆವೃತ್ತಿಯ ಐಪಿಎಲ್ನಲ್ಲಿ ಧೋನಿ ಪಂದ್ಯದ ನಂತರ ಯುವ ಆಟಗಾರರ ಜೊತೆ ಮಾತನಾಡಿ ಅವರಿಗೆ ಸಲಹೆಗಳನ್ನು ಕೊಡುತ್ತಿರುವುದನ್ನು ಕಾಣಬಹುದು. ಧೋನಿ ಮುಕ್ತವಾಗಿ ಎಲ್ಲರಲ್ಲೂ ಬೆರೆತು ಹೇಳಿಕೊಡುವ ವಿಡಿಯೋಗಳು ಕಾಣಸಿಗುತ್ತವೆ.
-
KS Bharat has revealed the invaluable advice he has received from MS Dhoni ahead of the #WTC23 Final 🧤
— ICC (@ICC) June 5, 2023 " class="align-text-top noRightClick twitterSection" data="
Read 👇 https://t.co/zlE2z5R51m
">KS Bharat has revealed the invaluable advice he has received from MS Dhoni ahead of the #WTC23 Final 🧤
— ICC (@ICC) June 5, 2023
Read 👇 https://t.co/zlE2z5R51mKS Bharat has revealed the invaluable advice he has received from MS Dhoni ahead of the #WTC23 Final 🧤
— ICC (@ICC) June 5, 2023
Read 👇 https://t.co/zlE2z5R51m
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿತ್ತು. ಗುಜರಾತ್ ಟೈಟಾನ್ಸ್ನಲ್ಲಿ ತಂಡದಲ್ಲಿ ವೃದ್ಧಿಮಾನ್ ಸಹಾ ಇದ್ದುದ್ದರಿಂದ ಶ್ರೀಕರ್ ಭರತ್ಗೆ ಈ ಆವೃತ್ತಿಯಲ್ಲಿ ಅವಕಾಶ ಸಿಕ್ಕಿಲ್ಲ. ಆದರೆ ಫೈನಲ್ ಪಂದ್ಯದ ನಂತರ ಧೋನಿಯೊಂದಿಗೆ ಸಂಭಾಷಣೆ ಮಾಡಿರುವುದಾಗಿ ಶ್ರೀಕರ್ ಹೇಳಿದ್ದಾರೆ.
ಶ್ರೀಕರ್ ಭರತ್ ಅವರು ಐಸಿಸಿ ನಡೆಸಿದ ಸಂದರ್ಶನವೊಂದರಲ್ಲಿ ಧೋನಿ ಬಗ್ಗೆ ಮಾತನಾಡಿದರು. ನಿಮ್ಮ ಫೇವರೇಟ್ ಕೀಪರ್ ಯಾರು ಎಂಬ ಪ್ರಶ್ನೆಗೆ ಅವರು ಎಂ.ಎಸ್.ಧೋನಿ ಎಂದು ಹೇಳಿ ಐಪಿಎಲ್ನಲ್ಲಿ ಅವರೊಂದಿಗೆ ಸಂಭಾಷಣೆ ಮಾಡಿದ ಕ್ಷಣಗಳ ಬಗ್ಗೆ ತಿಳಿಸಿದರು.
"ಇತ್ತೀಚೆಗೆ ಐಪಿಎಲ್ ಸಮಯದಲ್ಲಿ ನಾನು ಧೋನಿ ಅವರೊಂದಿಗೆ ಒಂದು ಮಾತು ಹೇಳಿದ್ದೆ. ಧೋನಿ ಇಂಗ್ಲೆಂಡ್‌ನಲ್ಲಿ ತಮ್ಮ ಕೀಪಿಂಗ್ ಅನುಭವಗಳು ಮತ್ತು ಯಾವುದೇ ವಿಕೆಟ್-ಕೀಪರ್‌ಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಬಗ್ಗೆ ಸಲಹೆ ನೀಡಿದ್ದಾರೆ. ಅದು ತುಂಬಾ ಒಳ್ಳೆಯ ಸಂಭಾಷಣೆ ಮತ್ತು ಅದರಿಂದ ಸಾಕಷ್ಟು ತಿಳಿದುಕೊಂಡಿದ್ದೇನೆ. ಕೀಪಿಂಗ್ ಬಗ್ಗೆ ನಾವೇನಾದರು ತಿಳಿದುಕೊಳ್ಳಬೇಕು ಎಂದರೆ ಅದಕ್ಕೆ ಧೋನಿ ಅತ್ಯುತ್ತಮ ವ್ಯಕ್ತಿ. ಅವರಿಂದ ಕೀಪಿಂಗ್ ಬಗ್ಗೆ ಬಹಳಷ್ಟು ಕಲಿಯಬಹುದು. ಕೀಪಿಂಗ್‌ನಲ್ಲಿ ಅವರು ಹೊಂದಿರುವ ಅರಿವು ಅಗಾಧ" ಎಂದರು.
"ನಿಮಗೆ ಕೀಪರ್ ಆಗಲು ಉದ್ದೇಶ ಮತ್ತು ಉತ್ಸಾಹ ಬೇಕು. ಏಕೆಂದರೆ ಕೀಪಿಂಗ್ ಕೃತಜ್ಞತೆಯಿಲ್ಲದ ಕೆಲಸ. ಟೆಸ್ಟ್ ದಿನದಲ್ಲಿ 90 ಓವರ್‌ಗಳ ಪ್ರತಿ ಬಾಲ್ನ ಮೇಲೂ ನಿಗಾ ಇಟ್ಟಿರಬೇಕು. ಅಲ್ಲದೇ ಪ್ರತಿ ಬಾಲ್ ಕೂಡಾ ಹೊಸ ಸವಾಲಾಗಿರುತ್ತದೆ. ಅದನ್ನು ಸ್ವೀಕರಿಸಲೇಬೇಕು ಮತ್ತು ತಂಡಕ್ಕೆ ಕೊಡುಗೆ ನೀಡುವಲ್ಲಿ ನಿಜವಾಗಿಯೂ ಉತ್ಸಾಹದಿಂದಿರಬೇಕು" ಎಂದು ತಮ್ಮ ಕೀಪಿಂಗ್ ಅನುಭವ ಹಂಚಿಕೊಂಡರು.
29 ವರ್ಷ ವಯಸ್ಸಿನ ಶ್ರೀಕರ್ ಭರತ್ ಭಾರತಕ್ಕಾಗಿ ನಾಲ್ಕು ಟೆಸ್ಟ್‌ಗಳನ್ನು ಆಡಿದ್ದಾರೆ. ಕಾರು ಅಪಘಾತದಿಂದ ಗಾಯಕ್ಕೆ ತುತ್ತಾದ ರಿಷಭ್ ಪಂತ್ ಬದಲಿ ಆಟಗಾರರಾಗಿ ಈ ವರ್ಷದ ಆರಂಭದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಪಾದಾರ್ಪಣೆ ಮಾಡಿದ್ದರು. 4 ಪಂದ್ಯದಲ್ಲಿ 44 ರನ್ ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಇಶಾನ್ ಕಿಶನ್ ಅವರನ್ನು ಪರ್ಯಾಯ ಕೀಪರ್ ಆಗಿ ಕೆ.ಎಲ್. ರಾಹುಲ್ಗೆ ಗಾಯವಾದ ಕಾರಣ ಆಯ್ಕೆ 15ರ ಬಳಗಕ್ಕೆ ಸೇರಿಸಲಾಗಿದೆ. ಆದರೆ ಆಡುವ 11ರಲ್ಲಿ ಭರತ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಜಡೇಜಾ ಬೌಲಿಂಗ್‌ಗಿಂತ ಬ್ಯಾಟಿಂಗ್ ಕೊಡುಗೆ ಹೆಚ್ಚು: ಪಾಂಟಿಂಗ್