ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲು ದಿನಗಣನೆ ಆರಂಭಗೊಂಡಿದ್ದು, ಇದರ ಬೆನ್ನಲ್ಲೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಹೊರಗುಳಿದಿದ್ದ ಅಲೆಕ್ಸ್ ಹೇಲ್ಸ್ ಸ್ಥಾನಕ್ಕೆ ಇದೀಗ ಮತ್ತೋರ್ವ ಸ್ಫೋಟಕ ಬ್ಯಾಟರ್ ಆಯ್ಕೆಯಾಗಿದೆ.
-
Decode this: 🇦🇺🦘🔴©️ + 🇦🇺🦘⚪©️ = 💜💛#KKR #KKRHaiTaiyaar #IPL2022 pic.twitter.com/Jn479qXDZG
— KolkataKnightRiders (@KKRiders) March 11, 2022 " class="align-text-top noRightClick twitterSection" data="
">Decode this: 🇦🇺🦘🔴©️ + 🇦🇺🦘⚪©️ = 💜💛#KKR #KKRHaiTaiyaar #IPL2022 pic.twitter.com/Jn479qXDZG
— KolkataKnightRiders (@KKRiders) March 11, 2022Decode this: 🇦🇺🦘🔴©️ + 🇦🇺🦘⚪©️ = 💜💛#KKR #KKRHaiTaiyaar #IPL2022 pic.twitter.com/Jn479qXDZG
— KolkataKnightRiders (@KKRiders) March 11, 2022
ಇಂಡಿಯನ್ ಪ್ರೀಮಿಯರ್ ಲೀಗ್ಗೋಸ್ಕರ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಅನ್ಸೋಲ್ಡ್ ಆಗಿದ್ದ ಫಿಂಚ್ ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ಸೇರಿಕೊಳ್ಳಲಿದ್ದಾರೆ. 2021ರಲ್ಲಿ ಆಸ್ಟ್ರೇಲಿಯಾ ತಂಡವನ್ನು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಆ್ಯರೋನ್ ಫಿಂಚ್ 1.5 ಕೋಟಿ ರೂ ಮೂಲ ಬೆಲೆ ಹೊಂದಿದ್ದರು. ಆದರೆ, ಇವರ ಖರೀದಿಗೆ ಯಾವುದೇ ಫ್ರಾಂಚೈಸಿಗಳು ಆಸಕ್ತಿ ತೋರಿಸಿರಲಿಲ್ಲ. ಆದರೆ, ಇದೀಗ ಕೆಕೆಆರ್ ತಂಡ ಇವರ ಜೊತೆ ಒಪ್ಪಂದ ಮಾಡಿಕೊಂಡಿದೆ.
ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿರುವ ಕೆಕೆಆರ್ ಅಲೆಕ್ಸ್ ಹೆಲ್ಸ್ ಸ್ಥಾನಕ್ಕೆ ಫಿಂಚ್ ಅವರನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ತಿಳಿಸಿದೆ. ಇವರಿಗೆ 1.5 ಕೋಟಿ ರೂ. ನೀಡಿದೆ.
ಇದನ್ನೂ ಓದಿ: IPLಗೆ ರಿಎಂಟ್ರಿ ಕೊಟ್ಟ ಯಾರ್ಕರ್ ಕಿಂಗ್: ರಾಜಸ್ಥಾನ ರಾಯಲ್ಸ್ ಪಾಳಯ ಸೇರಿದ ಮಲಿಂಗ
ಆಸ್ಟ್ರೇಲಿಯಾ ಪರ 88 ಟಿ20 ಪಂದ್ಯಗಳನ್ನಾಡಿರುವ ಫಿಂಚ್ 2,686 ರನ್ಗಳಿಕೆ ಮಾಡಿದ್ದು, ಇದರಲ್ಲಿ ಎರಡು ಶತಕ ಹಾಗೂ 15 ಅರ್ಧಶತಕಗಳಿವೆ. ಐಪಿಎಲ್ನಲ್ಲಿ 87 ಪಂದ್ಯಗಳನ್ನಾಡಿದ್ದು, 2000 ರನ್ಗಳಿಸಿದ್ದಾರೆ. 2020ರಲ್ಲಿ ಆರ್ಸಿಬಿ ಪರ ಆಡಿರುವ ಫಿಂಚ್ 12 ಪಂದ್ಯಗಳಿಂದ 268ರನ್ಗಳಿಕೆ ಮಾಡಿದ್ದು, ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಇವರನ್ನ ಕೈಬಿಡಲಾಗಿತ್ತು. ಇದಾದ ಬಳಿಕ ಇವರು ಅನ್ಸೋಲ್ಡ್ ಆಗಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೆಕೆಆರ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ವಿರುದ್ಧ ಸೆಣಸಾಡಲಿದೆ.
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 26ರಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ. ಈ ಸಲ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.