ಸೌತಾಂಪ್ಟನ್: ಭಾರತ ತಂಡ ಶುಕ್ರವಾರ ನ್ಯೂಜಿಲ್ಯಾಂಡ್ ವಿರುದ್ಧ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸೆಣಸಾಡಲಿದೆ. ಲಕ್ಷಾಂತರ ಕಣ್ಣುಗಳು ಈ ಪಂದ್ಯಕ್ಕಾಗಿ ಎದುರು ನೋಡುತ್ತಿವೆ.
ಕೊಹ್ಲಿ ನಾಯಕನಾಗಿ ಯಶಸ್ವಿಯಾದರೂ ಇದುವರೆಗೂ ಯಾವುದೇ ದೊಡ್ಡ ಪ್ರಶಸ್ತಿಯನ್ನು ಗೆಲ್ಲದಿರುವುದರಿಂದ ಈ ಚಾಂಪಿಯನ್ಶಿಪ್ ಕೊಹ್ಲಿ ಪಾಲಿಗೆ ಮಹತ್ವದ್ದಾಗಿದೆ. ಮತ್ತು ಗೆಲ್ಲುವುದು ಅನಿವಾರ್ಯವಾಗಿದೆ ಎಂದು ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಇಯಾನ್ ಬಿಷಪ್ ಹೇಳಿದ್ದಾರೆ.
WTC ಫೈನಲ್ನ ಅಧಿಕೃತ ಪ್ರಸಾರಕರಾಗಿರುವ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಭಾರತದಲ್ಲಿನ ಕೊರೊನಾ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ, ಅದರಲ್ಲೂ ಕಳೆದ 6 ತಿಂಗಳು ತುಂಬಾ ಕಳವಳಕಾರಿಯಾಗಿದೆ, ಹಾಗಾಗಿ ಕೊಹ್ಲಿ ಮತ್ತು ತಂಡ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಉತ್ತಮವಾಗಿ ಆಡಬೇಕಿದೆ ಎಂದು ಬಿಷಪ್ ಹೇಳಿದ್ದಾರೆ.
" ಇದು ವಿರಾಟ್ ಕೊಹ್ಲಿಗೆ ಬಹಳ ದೊಡ್ಡ ಗೌರವವಾಗಲಿದೆ. ಅತ ನಾಯಕನಾಗಿ ತಂಡವನ್ನು ಮುಂದೆ ನಿಂತು ನಡೆಸುವುದು ದೊಡ್ಡ ವಿಷಯವಾಗಿದೆ. ಕೇನ್ ವಿಲಿಯಮ್ಸನ್ ಜೊತೆಗೆ ಅವರು ವಿಶ್ವದ ಟಾಪ್ ಬ್ಯಾಟ್ಸ್ಮನ್ ಆಗಿದ್ದಾರೆ. ಅವರು ಪಂದ್ಯದಲ್ಲಿ ಆಡುವುದಕ್ಕೆ ಬೌಂಡರಿಯಿಂದಾಚೆಗೂ ಸಾಕಷ್ಟು ಕಾರಣಗಳಿವೆ. ಕಳೆದ ಕೆಲವು ತಿಂಗಳಿನಿಂದ ಉಂಟಾಗಿರುವ ಕೊರೊನಾ ಕೂಡ ಒಂದಾಗಿದೆ.
ದೇಶಕ್ಕಾಗಿ ಆಡುತ್ತೇವೆ ಎಂದು ಆಟಗಾರರು ಮಾತಾನಾಡುತ್ತಾರೆ. ಇದೀಗ ಅದಕ್ಕೆ ಒಳ್ಳೆಯ ಸಮಯ ಬಂದಿದೆ. ದೇಶದಲ್ಲಿ ಲಕ್ಷಾಂತರ ಮಂದಿ ಸಮಸ್ಯೆಗೀಡಾಗಿದ್ದಾರೆ, ಈ ಸಂದರ್ಭದಲ್ಲಿ ವಿರಾಟ್ಗೆ ಈ ಪ್ರಶಸ್ತಿ ಅನಿವಾರ್ಯವಾಗಬೇಕಾಗಿದೆ.
ಏಕೆಂದರೆ ಅವರ ಮಾಡಿರುವ ಎಲ್ಲ ಒಳ್ಳೆಯ ಕೆಲಸಗಳಿಗಾಗಿ, ಬೌಲರ್ಗಳ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ತನ್ನ ಡೈನಾಮಿಕ್ಸ್ ಬದಲಾಯಿಸಿಕೊಂಡಿದ್ದಕ್ಕಾಗಿ ಗೆಲ್ಲಬೇಕಿದೆ. ಅದರ ಅಗತ್ಯ ತಂಡಕ್ಕೆ ಮತ್ತು ದೇಶಕ್ಕಿದೆ ಎಂದು ಬಿಷಪ್ ಹೇಳಿದ್ದಾರೆ.
ಇದನ್ನು ಓದಿ:WTC ಫೈನಲ್ಗೆ ಭಾರತ ತಂಡ ಪ್ರಕಟ : 15ರ ಬಳಗದಲ್ಲಿ ಕನ್ನಡಿಗರಿಗಿಲ್ಲ ಅವಕಾಶ