ETV Bharat / sports

T-20 ವಿಶ್ವಕಪ್: ಭಾರತ ರಾಹುಲ್​ನನ್ನು ಬ್ಯಾಟಿಂಗ್​ನ ಪ್ರಮುಖ ಅಸ್ತ್ರವನ್ನಾಗಿಸಲಿ: ಕೊಹ್ಲಿಗೆ ಬ್ರೇಟ್​ ಲೀ ಸಲಹೆ

ಐಸಿಸಿ ಟಿ-20 ವಿಶ್ವಕಪ್​ನಲ್ಲಿ ಕನ್ನಡಿಗ ಕೆ.ಎಲ್​ ರಾಹುಲ್​ ಅತಿ ಹೆಚ್ಚು ರನ್​ಗಳಿಕೆ ಮಾಡುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್​​ ಬ್ರೇಟ್​ ಲೀ ಅಭಿಪ್ರಾಯಪಟ್ಟಿದ್ದಾರೆ.

Team india
Team india
author img

By

Published : Oct 14, 2021, 3:53 PM IST

ಸಿಡ್ನಿ(ಆಸ್ಟ್ರೇಲಿಯಾ): ಐಸಿಸಿ ಟಿ-20 ವಿಶ್ವಕಪ್​ ಆರಂಭಗೊಳ್ಳಲು ಈಗಾಗಲೇ ದಿನಗಣನೇ ಆರಂಭಗೊಂಡಿದ್ದು, ಕೇವಲ ಮೂರು ದಿನ ಮಾತ್ರ ಬಾಕಿ ಉಳಿದುಕೊಂಡಿದೆ. ಅಕ್ಟೋಬರ್​​ 24ರಂದು ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕ್​ ವಿರುದ್ಧ ಸೆಣಸಾಟ ನಡೆಸುವ ಮೂಲಕ ತನ್ನ ಅಭಿಯಾನ ಆರಂಭ ಮಾಡಲಿದೆ.

ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಪ್ರಬಲ ಸ್ಪರ್ಧಿಯಾಗಲಿದೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್​ ಬ್ರೆಟ್​ ಲೀ ಅಭಿಪ್ರಾಯಪಟ್ಟಿದ್ದಾರೆ. ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಭಾರತ ತಂಡ ಟಿ - 20 ವಿಶ್ವಕಪ್​ನಲ್ಲಿ ಇನ್​​ - ಫಾರ್ಮ್​ ಬ್ಯಾಟರ್​​ ಕೆ.ಎಲ್​ ರಾಹುಲ್​​ನನ್ನ ಇನ್ನಿಂಗ್ಸ್​​ನ ಆಧಾರಸ್ತಂಭವನ್ನಾಗಿಸಬೇಕು ಎಂದು ಬ್ರೆಟ್​ ಲೀ ಸಲಹೆ ನೀಡಿದ್ದಾರೆ.

ಸುದ್ದಿ ವಾಹಿನಿವೊಂದಕ್ಕೆ ಸಂದರ್ಶನ ನೀಡಿರುವ ಲೀ, ಅನುಭವದ ಆಧಾರದ ಮೇಲೆ ಇಂಗ್ಲೆಂಡ್​​ ಇತರ ತಂಡಗಳಿಗೆ ದೊಡ್ಡ ಸವಾಲು ಆಗಬಹುದು ಎಂದಿರುವ ಅವರು, ಭಾರತ ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿಯಾಗಲಿದ್ದಾರೆ ಎಂದಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ನಿಂದಾಗಿ ಭಾರತ ಅನೇಕ ಯುವ ಪ್ಲೇಯರ್ಸ್​ ಹೊಂದಿದ್ದು, ಅವರಲ್ಲಿ ಪ್ರಮುಖ ವೇಗದ ಬೌಲರ್​​ಗಳಿದ್ದಾರೆ. ಜೊತೆಗೆ ಟೀಂ ಇಂಡಿಯಾ ಅಗ್ರ ಬ್ಯಾಟಿಂಗ್​ ಕ್ರಮಾಂಕ ಅತ್ಯುತ್ತಮವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ ದಿನೇಶ್​ ಕಾರ್ತಿಕ್​ಗೆ ಛೀಮಾರಿ

ಕನ್ನಡಿಗನ ಗುಣಗಾನ

ಈಗಾಗಲೇ ಐಪಿಎಲ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ರಾಹುಲ್​, ವಿಶ್ವಕಪ್​​ನಲ್ಲೂ ಅತಿ ಹೆಚ್ಚು ರನ್​ಗಳಿಕೆ ಮಾಡುವ ಆಟಗಾರನಾಗಬಹುದು ಎಂದಿರುವ ಲೀ, ಕೊಹ್ಲಿ ಮೇಲಿನ ಒತ್ತಡ ಕಡಿಮೆ ಮಾಡಲು ರಾಹುಲ್​ಗೆ ಬ್ಯಾಟಿಂಗ್​ ಅಸ್ತ್ರವನ್ನಾಗಿ ಬಳಕೆ ಮಾಡಿಕೊಳ್ಳಲಿ. ಈ ವೇಳೆ ಕೊಹ್ಲಿ ಮೇಲಿನ ಒತ್ತಡ ಕಡಿಮೆಯಾಗಲಿದ್ದು, ಈ ವೇಳೆ ತಮ್ಮ ಸಹಜ ಬ್ಯಾಟಿಂಗ್​ ಪ್ರದರ್ಶನ ನೀಡಲು ಸಹಕಾರಿಯಾಗುತ್ತದೆ ಎಂದಿದ್ದಾರೆ.

ಉಳಿದಂತೆ ಸೂರ್ಯಕುಮಾರ್ ಯಾದವ್​ ಟೀಂ ಇಂಡಿಯಾ ಮುಂದಿನ ಸ್ಟಾರ್​ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದ್ದು, ಉತ್ತಮ ಪ್ಲೇಯರ್​ ಆಗಿ ಮಿಂಚಲಿದ್ದಾರೆ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾ ಕೂಡ ಉತ್ತಮ ಪ್ಲೇಯರ್​ ಆಯ್ಕೆ ಮಾಡಿರುವ ಕಾರಣ, ಟೂರ್ನಿಯಲ್ಲಿ ತೀವ್ರ ಪೈಪೋಟಿ ನೀಡಬಹುದು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.