ದುಬೈ: ಐಸಿಸಿ ಟಿ-20 ಬ್ಯಾಟಿಂಗ್ ವಿಭಾಗದ ಶ್ರೇಯಾಂಕ ರಿಲೀಸ್ ಆಗಿದ್ದು, ಟೀಂ ಇಂಡಿಯಾ ಆರಂಭಿಕ ಆಟಗಾರ ಕೆ.ಎಲ್ ರಾಹುಲ್ 6ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ 5ನೇ ಸ್ಥಾನಕ್ಕೆ ಮರಳಿದ್ದಾರೆ.
-
🔺 After entering the top 10 last week, @windiescricket opener Evin Lewis moves up a spot on the @MRFWorldwide ICC Men's T20I Batting Rankings. pic.twitter.com/TugCjFugmb
— ICC (@ICC) July 7, 2021 " class="align-text-top noRightClick twitterSection" data="
">🔺 After entering the top 10 last week, @windiescricket opener Evin Lewis moves up a spot on the @MRFWorldwide ICC Men's T20I Batting Rankings. pic.twitter.com/TugCjFugmb
— ICC (@ICC) July 7, 2021🔺 After entering the top 10 last week, @windiescricket opener Evin Lewis moves up a spot on the @MRFWorldwide ICC Men's T20I Batting Rankings. pic.twitter.com/TugCjFugmb
— ICC (@ICC) July 7, 2021
ಇಂಗ್ಲೆಂಡ್ನ ಡೇವಿಡ್ ಮಲನ್ (888 ಪಾಯಿಂಟ್), ಆಸ್ಟ್ರೇಲಿಯಾ ನಾಯಕ ಆ್ಯರೋನ್ ಫಿಂಚ್(830 ಪಾಯಿಂಟ್) ಪಾಕಿಸ್ತಾನ ಕ್ಯಾಪ್ಟನ್ ಬಾಬರ್ ಆಜಂ (828 ಪಾಯಿಂಟ್) ಹಾಗೂ ನ್ಯೂಜಿಲ್ಯಾಂಡ್ನ ಓಪನರ್ ಕಾನ್ವೆ(774 ಪಾಯಿಂಟ್) ಮೊದಲ ನಾಲ್ಕು ಸ್ಥಾನದಲ್ಲಿದ್ದು, 762 ಪಾಯಿಂಟ್ನೊಂದಿಗೆ ವಿರಾಟ್ ಕೊಹ್ಲಿ ನಂತರದ ಸ್ಥಾನದಲ್ಲಿದ್ದಾರೆ. ಉಳಿದಂತೆ ರಾಹುಲ್ 743 ಪಾಯಿಂಟ್ ಹೊಂದಿದ್ದು, 6ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿರಿ: 40ನೇ ಹುಟ್ಟುಹಬ್ಬದ ಸಂಭ್ರಮ: ಮಹೇಂದ್ರ ಸಿಂಗ್ ಧೋನಿ ಯಶೋಗಾಥೆ
ಟಾಪ್ 10 ಪಟ್ಟಿಯಲ್ಲಿ ಭಾರತದ ರಾಹುಲ್ ಮತ್ತು ಕೊಹ್ಲಿ ಮಾತ್ರ ಕಾಣಿಸಿಕೊಂಡಿದ್ದು, ಉಳಿದ ಯಾವುದೇ ಬ್ಯಾಟ್ಸ್‌ಮನ್ ಅಥವಾ ಆಲ್ರೌಂಡರ್ ಇಲ್ಲ. ಏಕದಿನ ಶ್ರೇಯಾಂಕದಲ್ಲಿ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟಾಪ್ 5ರಲ್ಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ 690 ಪಾಯಿಂಟ್ಗಳೊಂದಿಗೆ 6ನೇ ಸ್ಥಾನದಲ್ಲಿದ್ದು, ನ್ಯೂಜಿಲ್ಯಾಂಡ್ನ ಬೌಲ್ಟ್ 737 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಆಲ್ರೌಂಡರ್ ವಿಭಾಗದಲ್ಲಿ ರವೀಂದ್ರ ಜಡೇಜಾ 245 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದ್ದು, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ 387 ಪಾಯಿಂಟ್ ಪಡೆದು ಅಗ್ರ ಸ್ಥಾನದಲ್ಲಿದ್ದಾರೆ.