ಲೀಡ್ಸ್: ಭಾರತ ತಂಡ 19 ವರ್ಷಗಳ ಬಳಿಕ ಹೆಡಿಂಗ್ಲೆಯಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದೆ. ಭಾರತದ ಸ್ಟಾರ್ಗಳಾದ ವಿರಾಟ್ ಕೊಹ್ಲಿ, ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ವೇಗಿ ಬುಮ್ರಾ ವಿಶೇಷ ಮೈಲಿಗಲ್ಲುಗಳನ್ನು ಸೃಷ್ಟಿಸಲಿದ್ದಾರೆ.
ವಿರಾಟ್ ಕೊಹ್ಲಿ 23,000 ರನ್
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 3ನೇ ಟೆಸ್ಟ್ ಪಂದ್ಯದಲ್ಲಿ 63 ರನ್ಗಳಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 23,000 ರನ್ ಪೂರ್ಣಗೊಳಿಸಿದ್ದಾರೆ. ರನ್ಮಷಿನ್ ಖ್ಯಾತಿಯ ವಿರಾಟ್ 437 ಅಂತಾರಾಷ್ಟ್ರೀಯ ಪಂದ್ಯಗಳಿಂದ 22, 937 ರನ್ಗಳಿಸಿದ್ದಾರೆ. 32 ವರ್ಷದ ಕೊಹ್ಲಿ ಈ 63 ರನ್ಗಳಿಸುವಲ್ಲಿ ಸಫಲವಾದರೆ, ಈ ಸಾಧನೆ ಮಾಡಿ ಭಾರತದ 3ನೇ ಹಾಗೂ ವಿಶ್ವದ 7ನೇ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದರೆ.
- ಸಚಿನ್ ತೆಂಡೂಲ್ಕರ್- 34, 357 ರನ್
- ಕುಮಾರ್ ಸಂಗಕ್ಕಾರ- 28,016
- ರಿಕಿ ಪಾಂಟಿಂಗ್ -27,483
- ಮಹೇಲಾ ಜಯವರ್ದನೆ- 25,927
- ಜಾಕ್ ಕಾಲೀಸ್- 25,534
- ರಾಹುಲ್ ದ್ರಾವಿಡ್ -24, 208
- ವಿರಾಟ್ ಕೊಹ್ಲಿ- 22,937
ರಿಷಭ್ ಪಂತ್- ವರ್ಷವೊಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ವಿಕೆಟ್ ಕೀಪರ್
ರಿಷಭ್ ಪಂತ್ 2018ರಲ್ಲಿ 16 ಸಿಕ್ಸರ್ ಸಿಡಿಸುವ ಮೂಲಕ ಧೋನಿಯನ್ನು(12) ಹಿಂದಿಕ್ಕಿ ಭಾರತ ತಂಡದ ಪರ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಬರೆದಿದ್ದಾರೆ. ಇದೀಗ 2021ರಲ್ಲಿ 15 ಸಿಕ್ಸರ್ ಸಿಡಿಸಿರುವ ಅವರು ಮುಂದಿನ ಟೆಸ್ಟ್ನಲ್ಲಿ 2 ಸಿಕ್ಸರ್ ಸಿಡಿಸಿದರೆ, ತಮ್ಮದೇ ದಾಖಲೆಯನ್ನು ಮುರಿಯಲಿದ್ದಾರೆ.
ಜಸ್ಪ್ರೀತ್ ಬುಮ್ರಾ 100 ವಿಕೆಟ್
ವೇಗಿ ಜಸ್ಪ್ರೀತ್ ಬುಮ್ರಾ 3ನೇ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಪಡೆದರೆ ವೇಗವಾಗಿ 100 ವಿಕೆಟ್ ಪಡೆದ ಭಾರತ ವೇಗದ ಬೌಲರ್ ದಾಖಲೆ ಎಂಬ ದಾಖಲೆಯನ್ನು ಸೃಷ್ಟಿಸಲಿದ್ದಾರೆ.
27 ವರ್ಷದ ವೇಗಿ 22 ಪಂದ್ಯಗಳಿಂದ 95 ವಿಕೆಟ್ ಪಡೆದಿದ್ದಾರೆ. ಇದರಲ್ಲಿ SENA ಮತ್ತು ವಿಂಡೀಸ್ ಪ್ರವಾಸದಲ್ಲೇ 91 ವಿಕೆಟ್ ಪಡೆದಿದ್ದಾರೆ.
ಇದನ್ನು ಓದಿ: ಸಿರಾಜ್ಗೆ ಯಾವುದೇ ಹಂತದಲ್ಲಿ ಯಾವುದೇ ಬ್ಯಾಟ್ಸ್ಮನ್ರನ್ನು ಔಟ್ ಮಾಡುವ ಸಾಮರ್ಥ್ಯವಿದೆ : ವಿರಾಟ್ ಕೊಹ್ಲಿ