ಲಂಡನ್: ಇಂಗ್ಲೆಂಡ್ ಎದುರು ಭಾರತ ಇಂದು ಓವಲ್ನಲ್ಲಿ ನಾಲ್ಕನೇ ಟೆಸ್ಟ್ ಪಂದ್ಯವನ್ನಾಡಲಿದೆ. ಈ ಟೆಸ್ಟ್ ಪಂದ್ಯದ ನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರಿಗೆ ಮಹತ್ವದ್ದಾಗಿದೆ.
ವಿರಾಟ್ ಕೊಹ್ಲಿ 23,000 ರನ್
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 4ನೇ ಟೆಸ್ಟ್ ಪಂದ್ಯದಲ್ಲಿ ಕೇವಲ 1 ರನ್ ಗಳಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 23,000 ರನ್ ಪೂರ್ಣಗೊಳಿಸಲಿದ್ದಾರೆ. ರನ್ಮಷಿನ್ ಖ್ಯಾತಿಯ ವಿರಾಟ್ 434 ಅಂತಾರಾಷ್ಟ್ರೀಯ ಪಂದ್ಯಗಳಿಂದ 22,999 ರನ್ ಗಳಿಸಿದ್ದಾರೆ.
32 ವರ್ಷದ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ12,169, ಟೆಸ್ಟ್ ಕ್ರಿಕೆಟ್ನಲ್ಲಿ 7671 ಮತ್ತು ಟಿ20ಯಲ್ಲಿ 3159 ರನ್ ಗಳಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಒಂದು ರನ್ ಗಳಿಸಿದರೆ 23 ಸಾವಿರ ಅಂತಾರಾಷ್ಟ್ರೀಯ ರನ್ ಗಳಿಸಿದ ಭಾರತದ 3ನೇ ಹಾಗೂ ವಿಶ್ವದ 7ನೇ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದಾರೆ.
- ಸಚಿನ್ ತೆಂಡೂಲ್ಕರ್- 34,357 ರನ್
- ಕುಮಾರ್ ಸಂಗಕ್ಕಾರ- 28,016
- ರಿಕಿ ಪಾಂಟಿಂಗ್ -27,483
- ಮಹೇಲಾ ಜಯವರ್ದನೆ- 25,927
- ಜಾಕ್ ಕಾಲೀಸ್- 25,534
- ರಾಹುಲ್ ದ್ರಾವಿಡ್ -24,208
- ವಿರಾಟ್ ಕೊಹ್ಲಿ- 22,999
ರೋಹಿತ್ ಶರ್ಮಾ 15,000 ರನ್
ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಇಂದಿನ ಪಂದ್ಯದಲ್ಲಿ 22 ರನ್ ಗಳಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 15 ಸಾವಿರ ಮೈಲಿಗಲ್ಲನ್ನು ತಲುಪಲಿದ್ದಾರೆ. ರೋಹಿತ್ ಪ್ರಸ್ತುತ 380 ಅಂತಾರಾಷ್ಟ್ರೀಯ ಪಂದ್ಯಗಳಿಂದ 14,978 ರನ್ ಗಳಿಸಿದ್ದಾರೆ. ಹಿಟ್ಮ್ಯಾನ್ 227 ಏಕದಿನ ಪಂದ್ಯಗಳಲ್ಲಿ 9205ರನ್, 42 ಟೆಸ್ಟ್ ಪಂದ್ಯಗಳಿಂದ 2909ರನ್ ಮತ್ತು 111 ಟಿ20 ಪಂದ್ಯಗಳಿಂದ 2864 ರನ್ ಗಳಿಸಿದ್ದಾರೆ.
ಜಸ್ಪ್ರೀತ್ ಬುಮ್ರಾ 100 ವಿಕೆಟ್
ವೇಗಿ ಜಸ್ಪ್ರೀತ್ ಬುಮ್ರಾ 3ನೇ ಟೆಸ್ಟ್ ಪಂದ್ಯದಲ್ಲಿ 3 ವಿಕೆಟ್ ಪಡೆದರೆ ವೇಗವಾಗಿ 100 ವಿಕೆಟ್ ಪಡೆದ ಭಾರತ ವೇಗದ ಬೌಲರ್ ಎಂಬ ದಾಖಲೆಯನ್ನು ಸೃಷ್ಟಿಸಲಿದ್ದಾರೆ.
27 ವರ್ಷದ ವೇಗಿ 23 ಪಂದ್ಯಗಳಿಂದ 97 ವಿಕೆಟ್ ಪಡೆದಿದ್ದಾರೆ. ಇದರಲ್ಲಿ SENA ಮತ್ತು ವಿಂಡೀಸ್ ಪ್ರವಾಸದಲ್ಲೇ 91 ವಿಕೆಟ್ ಪಡೆದಿದ್ದಾರೆ.