ನವದೆಹಲಿ: ಟಿ20 ವಿಶ್ವಕಪ್ನಲ್ಲಿ ಅಮೋಘವಾಗಿ ಬ್ಯಾಟ್ ಮಾಡುತ್ತಿರುವ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಚುಟುಕು ಮಾದರಿಯ ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್ ಗಳಿಸಿದ ಸರದಾರ ಎಂಬ ದಾಖಲೆ ಬರೆದರು. ಚಾಲ್ತಿಯಲ್ಲಿರುವ ವಿಶ್ವಕಪ್ನಲ್ಲಿ ಆಡಿರುವ 4 ಪಂದ್ಯಗಳಲ್ಲಿ 3 ಅರ್ಧಶತಕ ಸೇರಿ 220 ರನ್ ಗಳಿಸಿದ್ದಾರೆ. ಇದು ವಿಶ್ವ ಕ್ರಿಕೆಟ್ ಅನ್ನೇ ನಿಬ್ಬೆರಗಾಗಿದೆ. ಇದರಲ್ಲಿ ಒಮ್ಮೆ ಮಾತ್ರ ಔಟ್ ಆಗಿ ಮೂರು ಬಾರಿ ಅಜೇಯರಾಗಿ ಉಳಿದಿದ್ದಾರೆ.
ವಿರಾಟ್ ಕೊಹ್ಲಿಯ ಈ ಬಿರುಗಾಳಿ ಬ್ಯಾಟಿಂಗ್ಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವ್ಯಾಟ್ಸನ್ ಫಿದಾ ಆಗಿದ್ದಾರೆ. ಫಿಟ್ನೆಸ್ ಫ್ರೀಕ್ ಆಗಿರುವ ವಿರಾಟ್ ದಾಖಲೆಗಳ 'ಸೂಪರ್ ಫ್ರೀಕಿಶ್' ಆಗಿದ್ದಾರೆ. ಕೊಹ್ಲಿಯ ಆಟವೇ ಅದ್ಭುತ ಎಂದು ಬಣ್ಣಿಸಿದ್ದಾರೆ.
ಸವಾಲಿನ ಗೇಮ್ನಲ್ಲಿ ದಾಖಲೆ: ಚುಟುಕು ಮಾದರಿಯ ಕ್ರಿಕೆಟ್ ಸವಾಲಿನದ್ದಾಗಿದೆ. ಇಂತಹ ಹೈ ರಿಸ್ಕ್ ಗೇಮ್ನಲ್ಲಿ ವಿರಾಟ್ ಲೀಲಾಜಾಲವಾಗಿ ಬ್ಯಾಟ್ ಮಾಡುತ್ತಿದ್ದಾರೆ. ಅದರಲ್ಲೂ ವಿಶ್ವಕಪ್ನಲ್ಲಿ ವಿಶ್ವದಾಖಲೆಯ ರನ್ ಗಳಿಸಿರುವುದು ಅವರ 'ಕ್ರಿಕೆಟ್ ಹುಚ್ಚುತನ'ಕ್ಕೆ ಸಾಕ್ಷಿ ಎಂದೆಲ್ಲ ಹೊಗಳಿಸಿದ್ದಾರೆ.
ವಿರಾಟ್ ಬರೆದ ದಾಖಲೆಗಳ ಕಡೆಗೆ ನಾನು ಅಪ್ಪಿತಪ್ಪಿಯೂ ತಲೆಹಾಕಲ್ಲ. ಆತನ ಆಟದಿಂದ ದಾಖಲೆಗಳು ಪುಡಿಯಾಗುವುದರ ಜೊತೆಗೆ ತಂಡಕ್ಕೆ ಗೆಲುವಿನ ಕಾಣಿಕೆ ಸಿಗುತ್ತದೆ. ಎದುರಾಳಿಗಳು ಉಡೀಸ್ ಆಗುತ್ತಾರೆ. ವಿರಾಟ್ ಕೊಹ್ಲಿ ಅಂತಹ ಅದ್ಭುತ ಕ್ರಿಕೆಟರ್ ಎಂದು ಹೇಳಿದ್ದಾರೆ.
ಇನ್ನು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಶ್ವದಾಖಲೆಗೆ ಪಾತ್ರರಾದರು. ಟಿ 20 ವಿಶ್ವಕಪ್ನಲ್ಲಿ ಶ್ರೀಲಂಕಾದ ಲೆಜೆಂಡರಿ ಕ್ರಿಕೆಟರ್ ಮಹೇಲಾ ಜಯವರ್ಧನೆ ಹೆಸರಲ್ಲಿದ್ದ ಅತಿಹೆಚ್ಚು ರನ್ ದಾಖಲೆ ಮುರಿದರು. ಜಯವರ್ಧನೆ 34 ಪಂದ್ಯಗಳಲ್ಲಿ 1016 ಗಳಿಸಿದರೆ, ವಿರಾಟ್ ಕೊಹ್ಲಿ ಕೇವಲ 23 ಇನಿಂಗ್ಸ್ಗಳಲ್ಲಿ 80 ರ ಸರಾಸರಿಯಲ್ಲಿ 1065 ರನ್ ಗಳಿಸಿ ಅತಿಹೆಚ್ಚು ರನ್ ಗಳಿಸಿದ ಸರದಾರ ಎಂಬ ದಾಖಲೆ ಸೃಷ್ಟಿಸಿದರು.
ವಿಶ್ವಕಪ್ನಲ್ಲಿ ವಿರಾಟ್ ಬ್ಯಾಟಿಂಗ್ ವೈಭವಕ್ಕೆ ಸಾಕ್ಷಿ ಎಂಬಂತೆ ಪಾಕಿಸ್ತಾನದ ವಿರುದ್ಧದ ಮೊದಲ ಪಂದ್ಯದಲ್ಲಿ ಔಟಾಗದೇ 84, ನೆದರ್ಲ್ಯಾಂಡ್ಸ್ ವಿರುದ್ಧ ಅಜೇಯ 62, ದಕ್ಷಿಣ ಆಫ್ರಿಕಾ ವಿರುದ್ಧ 12, ಬಾಂಗ್ಲಾದೇಶದೆದುರು ಅಜೇಯ 64 ರನ್ ಗಳಿಸಿ ಮುನ್ನುಗ್ಗುತ್ತಿದ್ದಾರೆ.
ಓದಿ: ಟಿ20 ವಿಶ್ವಕಪ್: ಕೊಹ್ಲಿ 'ಫೇಕ್ ಫೀಲ್ಡಿಂಗ್' ಮಾಡಿದ್ದಾರೆಂದು ಆರೋಪಿಸಿದ ಬಾಂಗ್ಲಾ ಕ್ರಿಕೆಟಿಗ!