ನವದೆಹಲಿ: ವಿರಾಟ್ ಕೊಹ್ಲಿ ಒಬ್ಬ ಅದ್ಭುತ ನಾಯಕನಾಗಿದ್ದು, ತಂಡದಲ್ಲಿ ಆಟಗಾರರ ಮನೋಬಲವನ್ನು ಕಾಪಾಡುವುದರಲ್ಲಿ ಸದಾ ಮುಂದಿರುತ್ತಾರೆ. ಶೀಘ್ರದಲ್ಲೇ ಅವರಿಂದ ದೊಡ್ಡ ಮೊತ್ತದ ಆಟ ಬರಲಿದೆ ಎಂದು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಭಾನುವಾರ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಭಾರತ ತಂಡ, ಸೋಮವಾರದಿಂದ ನಡೆಯಲಿರುವ ಜೋಹಾನ್ಸ್ಬರ್ಗ್ ಟೆಸ್ಟ್ ಪಂದ್ಯವನ್ನು ಗೆದ್ದ ಐತಿಹಾಸಿಕ ಟೆಸ್ಟ್ ಸರಣಿಯನ್ನು ಗೆಲ್ಲುವ ವಿಶ್ವಾಸದಲ್ಲಿದೆ.
-
💬 💬 Ahead of the second #SAvIND Test, #TeamIndia Head Coach Rahul Dravid speaks about the takeaways from the series opener in Centurion. pic.twitter.com/ly3blvbU98
— BCCI (@BCCI) January 2, 2022 " class="align-text-top noRightClick twitterSection" data="
">💬 💬 Ahead of the second #SAvIND Test, #TeamIndia Head Coach Rahul Dravid speaks about the takeaways from the series opener in Centurion. pic.twitter.com/ly3blvbU98
— BCCI (@BCCI) January 2, 2022💬 💬 Ahead of the second #SAvIND Test, #TeamIndia Head Coach Rahul Dravid speaks about the takeaways from the series opener in Centurion. pic.twitter.com/ly3blvbU98
— BCCI (@BCCI) January 2, 2022
ಕೊಹ್ಲಿ ಬದಲಿಗೆ ಮಾಧ್ಯಮಗೋಷ್ಟಿ ನಡೆಸಿದ ದ್ರಾವಿಡ್, ಹೊರಗಡೆ ಸಾಕಷ್ಟು ವಿಷಯಗಳು ಚರ್ಚೆಯಾಗುತ್ತಿದ್ದರೂ ತಂಡವನ್ನು ಉತ್ಸಾಹದಲ್ಲಿಡಲು ಹೇಗೆ ಸಾಧ್ಯವಾಗಿದೆ ಎಂದು ಪತ್ರಕರ್ತರು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ದ್ರಾವಿಡ್, " ಗುಂಪಿನ ಹೊರಗಡೆ ಸಾಕಷ್ಟು ಬೇರೆ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂಬುದು ನನಗೆ ಗೊತ್ತಿದೆ. ವಿವಾದಗಳಿದ್ದ ಸಂದರ್ಭದಲ್ಲಿ ಆತ್ಮಸ್ಥೈರ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವೇನಲ್ಲ. ಏಕೆಂದರೆ ಅದನ್ನು ನಾಯಕ ನೋಡಿಕೊಳ್ಳುತ್ತಾನೆ. ನಾವಿಲ್ಲಿಗೆ ಬಂದು 20 ದಿನಗಳಾಗಿವೆ, ಗೊಂದಲಗಳ ನಡುವೆಯೂ ವಿರಾಟ್ ಕೊಹ್ಲಿ ಅದ್ಭುತವಾಗಿ ಕಾಣುತ್ತಿದ್ದಾರೆ" ಎಂದು ಹೇಳಿದ್ದಾರೆ.
"ಅವರ ಸುತ್ತಮುತ್ತ ಸಾಕಷ್ಟು ವಿಷಯಗಳು ನಡೆಯುತ್ತಿದ್ದರೂ ಅವರೂ ತರಬೇತಿ ಮಾಡುವ ರೀತಿ ಮತ್ತು ಸಿದ್ಧವಾಗುವ ರೀತಿ, ತಂಡದೊಂದಿಗೆ ಸಂಪರ್ಕ ಸಾಧಿಸುವ ರೀತಿ ಅಮೋಘವಾಗಿದೆ. ಸಹಾಯಕ ಸಿಬ್ಬಂದಿಯಾಗಿ ನಾವು ತಂಡವನ್ನು ಉತ್ತಮ ಸ್ಥಾನದಲ್ಲಿರಿಸಲು ನೋಡುತ್ತಿದ್ದೇವೆ. ಆದರೆ ವಿರಾಟ್ ತಂಡವನ್ನು ಮುನ್ನಡೆಸಿದ ರೀತಿ ಅಸಾಧಾರಣವಾಗಿದೆ" ಎಂದು ದ್ರಾವಿಡ್ ಬಣ್ಣಿಸಿದ್ದಾರೆ.
ಕೊಹ್ಲಿ ಕಳೆದ ಎರಡು ವರ್ಷಗಳನ್ನ ಅಂತಾರಾಷ್ಟ್ರೀಯ ಶತಕವಿಲ್ಲದೆ ಮುಗಿಸಿರುವ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಟೀಂ ಇಂಡಿಯಾ ಮಾಜಿ ನಾಯಕ, " ಕೊಹ್ಲಿ ಉತ್ತಮ ಲಯದಲ್ಲಿದ್ದಾರೆ ಎಂದು ವೈಯಕ್ತಿಕವಾಗಿ ನಾನು ಭಾವಿಸುತ್ತೇನೆ. ಒಳ್ಳೆಯ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ಅವರಿಂದ ಆಗುತ್ತಿಲ್ಲ. ಆದರೆ ಶೀಘ್ರದಲ್ಲೇ ದೊಡ್ಡ ಮೊತ್ತ ಅವರಿಂದ ಬರಲಿದೆ ಎಂದು ನಾನು ಭಾವಿಸುತ್ತೇನೆ. ಗುಂಪಿನಲ್ಲಿ ಅವರನ್ನು ಗಮನಿಸಿದಂತೆ ಈ ಪಂದ್ಯದಲ್ಲಿ ದೊಡ್ಡ ಮೊತ್ತ ಗಳಿಸದಿದ್ದರೂ ಖಂಡಿತ ಮುಂದಿನ ಪಂದ್ಯದಲ್ಲಿ ಅವರು ಶತಕ ಸಿಡಿಸುವುದನ್ನು ನಾವೆಲ್ಲಾ ನೋಡಲಿದ್ದೇವೆ ಎಂದು ಟೀಂ ಇಂಡಿಯಾ ಕೋಚ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕೊಹ್ಲಿ ಮಾಧ್ಯಮಗೋಷ್ಟಿಯಲ್ಲಿ ಏಕೆ ಭಾಗಿಯಾಗ್ತಿಲ್ಲ? ಕೋಚ್ ದ್ರಾವಿಡ್ ಕೊಟ್ಟ ಕಾರಣ ಹೀಗಿದೆ..