ದುಬೈ : ಮುಂಬೈ ಇಂಡಿಯನ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಆರ್ಸಿಬಿ 54 ರನ್ಗಳಿಂದ ಭರ್ಜರಿ ಜಯ ಸಾಧಿಸಿದೆ. ಸತತ 2 ಸೋಲುಗಳಿಂದ ಕಂಗೆಟ್ಟಿದ್ದ ಆರ್ಸಿಬಿ ಬಲಿಷ್ಠ ಮುಂಬೈ ವಿರುದ್ಧ ಸುಲಭ ಜಯ ಸಾಧಿಸಿದ್ದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿತ್ತು. ಇನ್ನು, ನಾಯಕ ಕೊಹ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಇಶಾನ್ ಕಿಶನ್ರನ್ನು ಮೈದಾನದಲ್ಲಿ ಮಾತನಾಡಿಸಿ ಸಂತೈಸಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ 165 ರನ್ಗಳಿಸಿತ್ತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಆರ್ಸಿಬಿ ಬೌಲಿಂಗ್ ದಾಳಿಗೆ ಸಿಲುಕಿ 111ಕ್ಕೆ ಆಲ್‌ಔಟ್ ಆಗುವ ಮೂಲಕ 54 ರನ್ಗಳಿಂದ ಸೋಲುಂಡಿತ್ತು.
ಮುಂಬುರುವ ಟಿ20 ವಿಶ್ವಕಪ್ಗೆ ಆಯ್ಕೆಯಾಗಿರುವ ಮುಂಬೈ ಇಂಡಿಯನ್ಸ್ ತಂಡದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಕೇವಲ 9 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇದಕ್ಕು ಮುನ್ನ ನಡೆದಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 14 ಮತ್ತು ಸಿಎಸ್ಕೆ ವಿರುದ್ಧ 11 ರನ್ಗಳಿಸಿ ಔಟಾಗಿದ್ದರು.
-
Ishu almost cried 😕 pic.twitter.com/82LUj7GVcg
— Neil💫 (@RohitsBoy) September 26, 2021 " class="align-text-top noRightClick twitterSection" data="
">Ishu almost cried 😕 pic.twitter.com/82LUj7GVcg
— Neil💫 (@RohitsBoy) September 26, 2021Ishu almost cried 😕 pic.twitter.com/82LUj7GVcg
— Neil💫 (@RohitsBoy) September 26, 2021
ಕಳೆದ ವರ್ಷ 500+ ರನ್ ಬಾರಿಸಿ ಮುಂಬೈ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಿಶನ್ ಈ ವರ್ಷ ಭಾರಿ ವೈಫಲ್ಯ ಅನುಭವಿಸುತ್ತಿದ್ದಾರೆ. ಈ ಕಾರಣದಿಂದ ಕ್ರಿಕೆಟ್ ತಜ್ಞರು ಮತ್ತು ಅಭಿಮಾನಿಗಳು ಇವರನ್ನು ಟಿ20 ವಿಶ್ವಕಪ್ಗೆ ಆಯ್ಕೆ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ಕಾರಣದಿಂದ ನಿನ್ನೆಯ ಪಂದ್ಯದ ವೈಫಲ್ಯದ ನಂತರ ಕಿಶನ್ ತುಂಬಾ ದುಃಖಕ್ಕೆ ಒಳಗಾಗಿ ಕುಳಿತಿದ್ದರು.
ಆದರೆ, ವಿರಾಟ್ ಕೊಹ್ಲಿ ಪಂದ್ಯ ಮುಗಿದ ಬಳಿಕ ಆತನನ್ನು ಕರೆದು ಮಾತನಾಡಿಸಿ ಸಂತೈಸಿದರು. ಸದಾ ಕೊಹ್ಲಿಯ ಆಕ್ರಮಣಕಾರಿ ಮನೋಭಾವನ್ನು ಹೆಚ್ಚಾಗಿ ಕಂಡಿರುವ ಅಭಿಮಾನಿಗಳು ನಿನ್ನೆ ಕಿಶನ್ ಜೊತೆಗೆ ನಡೆದುಕೊಂಡ ರೀತಿಗೆ ಫಿದಾ ಆಗಿದ್ದಾರೆ.
ಕೊಹ್ಲಿಗೂ ಮುನ್ನ ಮುಂಬೈ ತಂಡದ ನಾಯಕ ಹಾಗೂ ಭಾರತ ತಂಡದ ಉಪನಾಯಕ ರೋಹಿತ್ ಕೂಡ ಇಶಾನ್ ಪರ ಮಾತನಾಡಿದ್ದರು. ತಾವು ಅವರಿಗೆ ಹೆಚ್ಚು ಒತ್ತಡವನ್ನುಂಟು ಮಾಡಲು ಬಯಸಿಲ್ಲ. ಹಾಗಾಗಿ, ಸೂರ್ಯಕುಮಾರ್ ಯಾದವ್ ಬದಲಿಗೆ 3ನೇ ಕ್ರಮಾಂಕದಲ್ಲಿ ಆಡಿಸುತ್ತಿದ್ದೇವೆ.
ಆತ ಈಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಹಾದಿಯಲ್ಲಿದ್ದು, ಆತನಿಗೆ ಇಷ್ಟದ ರೀತಿಯಲ್ಲಿ ಆಡುವ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದೇವೆ. ಮುಂಬರುವ ಪಂದ್ಯಗಳಲ್ಲಿ ಕಮ್ಬ್ಯಾಕ್ ಮಾಡುವ ವಿಶ್ವಾಸವಿದೆ ಎಂದಿದ್ದರು.
ಇದನ್ನು ಓದಿ:watch : ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ ಎಬಿಡಿ.. ಮಗನ ರಿಯಾಕ್ಷನ್ ಹೀಗಿತ್ತು ನೋಡಿ..