ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಭಾರತದಲ್ಲಿ ಕೋವಿಡ್ 19 ಹೋರಾಟಕ್ಕಾಗಿ 2 ಕೋಟಿ ರೂ ದೇಣಿಗೆ ನೀಡಿ, ಕೋವಿಡ್ ನಿಧಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ.
ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಕೇವಲ 24 ಗಂಟೆಗಳಲ್ಲಿ 3.6 ಕೋಟಿ ದೇಣಿಗೆ ಸಂಗ್ರಹವಾಗಿದೆ. ಇದನ್ನು ಸ್ವತಃ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ದೇಣಿಗೆ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ ತಮ್ಮ 7 ಕೋಟಿ ಟಾರ್ಗೆಟ್ನಲ್ಲಿ ಒಂದೆ ದಿನ ಅರ್ಧ ಮೊತ್ತ ಸಂಗ್ರಹವಾಗಿದ್ದು, ಗುರಿಯತ್ತ ಮುನ್ನುಗ್ಗೋಣ ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಶುಕ್ರವಾರ ಅಭಿಯಾನಕ್ಕೆ ಚಾಲನೆ ನೀಡಿದ್ದ ಕೊಹ್ಲಿ ದಂಪತಿ'' ಕೋವಿಡ್-19 ಎರಡನೇ ಅಲೆಯಿಂದ ಭಾರತ ಕಷ್ಟದ ದಿನಗಳನ್ನು ಎದುರಿಸುತ್ತಿದೆ. ಈ ಸಮಯದಲ್ಲಿ ನಾವೆಲ್ಲರೂ ಒಟ್ಟಾಗಬೇಕಿದೆ. ಅವಶ್ಯವಿರುವವರಿಗೆ ನಾವೆಲ್ಲರೂ ನೆರವಿನ ಹಸ್ತ ಚಾಚಬೇಕಿದೆ. ಅವಶ್ಯವಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ನಿಧಿ ಸಂಗ್ರಹ ಅಭಿಯಾನವನ್ನು ಶುರು ಮಾಡಿದ್ದೇವೆ. ಈ ಪ್ರಾರ್ಥನೆಗೆ ನೀವೆಲ್ಲರೂ ಜೊತೆಯಾಗಿ'' ಎಂದು ವಿರುಷ್ಕಾ ಕೇಳಿಕೊಂಡಿದ್ದಾರೆ.
ದೇಣಿಗೆ ಮೂಲಕ ಸಂಗ್ರಹವಾದ 7 ಕೋಟಿ ರೂ ಹಣವನ್ನು ಆಕ್ಸಿಜನ್ , ಕೋವಿಡ್ ಲಸಿಕೆ ಔಷಧ ಮತ್ತು ತುರ್ತು ಬಳಕೆಗೆ ಉಪಯೋಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.