ETV Bharat / sports

ವಿಶ್ವ ಟೆಸ್ಟ್​ ಸರಣಿ ಮುಗಿಯುತ್ತಿದ್ದಂತೆ ಭಾರತೀಯ ಆಟಗಾರರಿಗೆ ಬಯೋಬಬಲ್​ನಿಂದ ಮುಕ್ತಿ

ಆಗಸ್ಟ್​ 4ರಿಂದ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿ ಆರಂಭವಾಗಲಿದೆ. ಸೆಪ್ಟೆಂಬರ್​ 14ರಂದು ಮುಗಿಯಲಿದ್ದು, ಬಳಿಕ ಐಪಿಎಲ್​ ಪುನಾರಂಭಕ್ಕಾಗಿ ಟೀಮ್ ಇಂಡಿಯಾ ನೇರವಾಗಿ ಯುಎಇಯ ಬಯೋಬಬಲ್‌ಗೆ ಪ್ರವೇಶಿಸಲಿದೆ ಎಂದು ಬಿಸಿಸಿಐ ಮೂಲ ತಿಳಿಸಿದೆ.

ಭಾರತ ತಂಡಕ್ಕೆ ಬಯೋಬಬಲ್ ಬಿಡುವು
ಭಾರತ ತಂಡಕ್ಕೆ ಬಯೋಬಬಲ್ ಬಿಡುವು
author img

By

Published : Jun 8, 2021, 3:38 PM IST

ನವದೆಹಲಿ: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಮುಗಿಯುತ್ತಿದ್ದಂತೆ ಭಾರತೀಯ ಕ್ರಿಕೆಟಿಗರಿಗೆ 20 ದಿನಗಳ ಕಾಲ ಬಯೋಬಬಲ್​ನಿಂದ ಮುಕ್ತರಾಗಲಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗೆ ಮತ್ತೆ ಬಯೋಬಬಲ್​ಗೆ ಒಳಗಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಸ್ತುತ ಭಾರತ ತಂಡ ಇಂಗ್ಲೆಂಡ್​ನ ಸೌತಾಂಪ್ಟನ್​ನಲ್ಲಿ WTC ಫೈನಲ್​ಗಾಗಿ ಬಯೋಬಬಲ್​ ಸೇರಿದೆ. ಜೂನ್ 18ರಿಂದ 22 ರವರೆಗೆ ನ್ಯೂಜಿಲ್ಯಾಂಡ್​ ವಿರುದ್ಧ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ 23 ಮೀಸಲು ದಿನವಾಗಿದೆ. ಮಳೆ ಅಥವಾ ಇನ್ಯಾವುದೇ ಅಡಚಣೆಯಿಂದ ಫೈನಲ್​ನಲ್ಲಿ ತೊಂದರೆಯಾದರೆ ಈ ದಿನ ಆಡಿಸಲಾಗುತ್ತದೆ. 24ರಿಂದ ಜುಲೈ 13 ರವರೆಗೆ ಭಾರತ ತಂಡಕ್ಕೆ ಬಬಲ್​ ಬಿಡುವು ನೀಡಲಾಗಿದೆ. ಮತ್ತೆ ಜುಲೈ 14ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗಾಗಿ ಬಯೋಬಬಲ್ ಸೇರಲಿದೆ.

ಆಗಸ್ಟ್​ 4ರಿಂದ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿ ಆರಂಭವಾಗಲಿದೆ. ಸೆಪ್ಟೆಂಬರ್​ 14ರಂದು ಮುಗಿಯಲಿದ್ದು, ಬಳಿಕ ಐಪಿಎಲ್​ ಪುನಾರಂಭಕ್ಕಾಗಿ ಟೀಮ್ ಇಂಡಿಯಾ ನೇರವಾಗಿ ಯುಎಇಯ ಬಯೋಬಬಲ್‌ಗೆ ಪ್ರವೇಶಿಸಲಿದೆ ಎಂದು ಬಿಸಿಸಿಐ ಮೂಲ ತಿಳಿಸಿದೆ.

ಭಾರತ ತಂಡದ ನಾಯಕ ಕೊಹ್ಲಿ ಕೂಡ WTC ಫೈನಲ್​ ಮುಗಿಯುತ್ತಿದ್ದಂತೆ ತಂಡಕ್ಕೆ ಫ್ರೆಶ್ ಆಗಲು ಮತ್ತು ಮುಂದಿನ ಟೆಸ್ಟ್​ ಸರಣಿಗೆ ತಂಡವನ್ನು ಪುನರ್​ರಚಿಸಲು ಇದು ಈ ಬಿಡುವು ಉತ್ತಮ ಅವಕಾಶ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಇದನ್ನು ಓದಿ:ಮಗಳ ಹುಟ್ಟುಹಬ್ಬದ ದಿನ ಬಡ ಹೆಣ್ಣುಮಕ್ಕಳಿಗೆ ಸ್ಪೆಷಲ್‌ ಗಿಫ್ಟ್‌ ಕೊಟ್ಟ ಜಡೇಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.