ಮುಂಬೈ: ಭಾರತ ತಂಡದ ಕ್ರಿಕೆಟಿಗ, ಕನ್ನಡಿಗ ಮಯಾಂಕ್ ಅಗರ್ವಾಲ್ ಬುಧವಾರ 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತವರಿನಲ್ಲಿ 80+ ಸರಾಸರಿಯಲ್ಲಿ ರನ್ಗಳಿಸಿರುವ ಭಾರತದ ಬ್ರಾಡ್ಮನ್ಗೆ ಭಾರತ ತಂಡದ ಉಪನಾಯಕ ಕೆಎಲ್ ರಾಹುಲ್ ಶುಭಾಶಯ ಕೋರಿದ್ದಾರೆ.
ಚಿಕ್ಕಂದಿನಿಂದ ಒಟ್ಟಿಗೆ ಕ್ರಿಕೆಟ್ ಆಡುವುದರಿಂದ ಹಿಡಿದು ದೇಶವನ್ನು ಪ್ರತಿನಿಧಿಸುವವರೆಗೆ ನಾವಿಬ್ಬರು ಬಹಳ ದೂರ ಒಟ್ಟಿಗೆ ಬಂದಿದ್ದೇವೆ. ಜನ್ಮದಿನದ ಶುಭಾಶಯಗಳು ಸಹೋದರ ಎಂದು ಕೆಎಲ್ ರಾಹುಲ್ ತಮ್ಮ ಜೊತೆಗಾರನಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.
-
From playing cricket together as kids to representing the country. We have come a long way, brother. Wishing you a happy birthday. 🤗🥳@mayankcricket
— K L Rahul (@klrahul11) February 16, 2022 " class="align-text-top noRightClick twitterSection" data="
">From playing cricket together as kids to representing the country. We have come a long way, brother. Wishing you a happy birthday. 🤗🥳@mayankcricket
— K L Rahul (@klrahul11) February 16, 2022From playing cricket together as kids to representing the country. We have come a long way, brother. Wishing you a happy birthday. 🤗🥳@mayankcricket
— K L Rahul (@klrahul11) February 16, 2022
ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ಶಾಲಾ ದಿನಗಳಿಂದಲೂ ಒಟ್ಟಿಗೆ ಕ್ರಿಕೆಟ್ ಆಡುತ್ತಿದ್ದಾರೆ, ಅಂಡರ್ 19 ವಿಶ್ವಕಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಈ ಜೋಡಿ ನಂತರ ಕರ್ನಾಟಕ ತಂಡ, ಭಾರತ ಟೆಸ್ಟ್ ತಂಡದಲ್ಲೂ ಆರಂಭಿಕರಾಗಿ ಜೊತೆಯಾಗಿ ಆಡಿದ್ದರು. ಕಳೆದ ಎರಡೂ ವರ್ಷಗಳ ಕಾಲ ಪಂಜಾಬ್ ಕಿಂಗ್ಸ್ ತಂಡದಲ್ಲಿ ಆಡಿದ್ದ ಈ ಜೋಡಿ ಈ ಬಾರಿ ಬೇರೆಯಾಗಿದೆ. ಮಯಾಂಕ್ ಪಂಜಾಬ್ ತಂಡದಲ್ಲೇ ಇದ್ದರೆ, ರಾಹುಲ್ ನೂತನ ಫ್ರಾಂಚೈಸಿ ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿ ಆಡಲಿದ್ದಾರೆ.
ಬಿಸಿಸಿಐ ಮತ್ತು ಐಸಿಸಿ ಕೂಡ ಭಾರತೀಯ ಆರಂಭಿಕ ಬ್ಯಾಟರ್ ಜನ್ಮದಿನಕ್ಕೆ ಶುಭಾಶಯ ಕೋರಿದೆ. ಮಯಾಂಕ್ ಅಗರ್ವಾಲ್ ಭಾರತದ ಪರ 19 ಟೆಸ್ಟ್ ಪಂದ್ಯಗಳಲ್ಲಿ 2 ದ್ವಿಶತಕ ಸೇರಿ ಒಟ್ಟು 4 ಶತಕ ಮತ್ತು 6 ಅರ್ಧಶತಕ ಸೇರಿದಂತೆ 1429 ರನ್ಗಳಿಸಿದ್ದಾರೆ.
-
🔹 1429 runs in 19 Tests
— ICC (@ICC) February 16, 2022 " class="align-text-top noRightClick twitterSection" data="
🔹 Four centuries and six fifties
🔹 Batting average of 43.30
Happy birthday to Mayank Agarwal 🎂 pic.twitter.com/7sX6UAoVab
">🔹 1429 runs in 19 Tests
— ICC (@ICC) February 16, 2022
🔹 Four centuries and six fifties
🔹 Batting average of 43.30
Happy birthday to Mayank Agarwal 🎂 pic.twitter.com/7sX6UAoVab🔹 1429 runs in 19 Tests
— ICC (@ICC) February 16, 2022
🔹 Four centuries and six fifties
🔹 Batting average of 43.30
Happy birthday to Mayank Agarwal 🎂 pic.twitter.com/7sX6UAoVab
-
Here's wishing #TeamIndia batter, @mayankcricket, a very happy birthday. 🎂 👏
— BCCI (@BCCI) February 16, 2022 " class="align-text-top noRightClick twitterSection" data="
On his special day, let's relive his spectacular 1⃣5⃣0⃣-run knock against New Zealand. 📽️ 👇
">Here's wishing #TeamIndia batter, @mayankcricket, a very happy birthday. 🎂 👏
— BCCI (@BCCI) February 16, 2022
On his special day, let's relive his spectacular 1⃣5⃣0⃣-run knock against New Zealand. 📽️ 👇Here's wishing #TeamIndia batter, @mayankcricket, a very happy birthday. 🎂 👏
— BCCI (@BCCI) February 16, 2022
On his special day, let's relive his spectacular 1⃣5⃣0⃣-run knock against New Zealand. 📽️ 👇
ಇದನ್ನೂ ಓದಿ:ಐಸಿಸಿ ಟಿ-20 ರ‍್ಯಾಂಕಿಂಗ್ : 4ರಲ್ಲಿ ರಾಹುಲ್, 10ರಲ್ಲಿ ಕೊಹ್ಲಿ ತಟಸ್ಥ; ODI ಶ್ರೇಯಾಂಕದಲ್ಲಿ ಅಯ್ಯರ್-ಪಂತ್ ಏರಿಕೆ