ETV Bharat / sports

Asia Cup 2023: ಏಷ್ಯಾಕಪ್​ನ ಗುಂಪು ಹಂತದ ಪಂದ್ಯಗಳಿಗೆ ರಾಹುಲ್​ ಅಲಭ್ಯ: ಕೋಚ್​ ದ್ರಾವಿಡ್​ ಸ್ಪಷ್ಟನೆ - ರೋಹಿತ್ ಶರ್ಮಾ

KL Rahul ruled out of India vs Pakistan clash: ನಾಳೆಯಿಂದ ಏಷ್ಯಾಕಪ್​ನ ಪಂದ್ಯಗಳು ಆರಂಭವಾಗಲಿವೆ. ಭಾರತ ಲಂಕಾ ಪ್ರವಾಸ ಕೈಗೊಳ್ಳುವ ಮುನ್ನ ಮಾಧ್ಯಮಗೋಷ್ಟಿ ನಡೆಸಿದ ದ್ರಾವಿಡ್ ರಾಹುಲ್​ ಸಪ್ಟೆಂಬರ್​ 4ರ ವರೆಗೆ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಅಭ್ಯಾಸದಲ್ಲಿರಲಿದ್ದಾರೆ ಎಂದಿದ್ದಾರೆ.

Asia Cup 2023
Asia Cup 2023
author img

By ETV Bharat Karnataka Team

Published : Aug 29, 2023, 4:02 PM IST

ಆಲೂರ್ (ಬೆಂಗಳೂರು): ಕೆಎಲ್ ರಾಹುಲ್ ಏಷ್ಯಾಕಪ್​ನ ಗುಂಪು ಹಂತದ ಪಂದ್ಯಗಳಿಗೆ ಲಭ್ಯ ಇರುವುದಿಲ್ಲ ಎಂದು ಕೋಚ್​ ರಾಹುಲ್​ ದ್ರಾವಿಡ್​ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಭಾರತ ಮಧ್ಯಮ ಕ್ರಮಾಂಕದ ಬಗ್ಗೆ ಗೊಂದಲ ಇದೆ ಎಂದು ಹೇಳುತ್ತಿದ್ದಾರೆ. ಆದರೆ, 18-20 ತಿಂಗಳ ಮೊದಲೇ ಯಾರು ಆಡುತ್ತಾರೆ ಎಂಬುದರ ಬಗ್ಗೆ ನನಗೆ ಅರಿವಿತ್ತು ಎಂದು ದ್ರಾವಿಡ್​ ಹೇಳಿದ್ದಾರೆ.

ನಾಳೆಯಿಂದ (ಆಗಸ್ಟ್​​ 30) ಏಷ್ಯಾಕಪ್​​ ಪಂದ್ಯಾವಳಿ ಆರಂಭವಾಗಲಿದೆ. ಮೊದಲ ಪಂದ್ಯ ಪಾಕಿಸ್ತಾನವು ನೇಪಾಳದ ನಡುವೆ ಮುಲ್ತಾನ್​ನಲ್ಲಿ ನಡೆಯಲಿದೆ. ಭಾರತಕ್ಕೆ ಮೊದಲ ಪಂದ್ಯ ಪಾಕಿಸ್ತಾನದ ಜೊತೆಗೆ ಸೆಪ್ಟೆಂಬರ್​ 2 ರಂದು ಕ್ಯಾಂಡಿಯಲ್ಲಿ ಇರಲಿದೆ. ಭಾರತ ಸೆ.4 ರಂದು ನೇಪಾಳ ವಿರುದ್ಧ ಆಡಲಿದೆ. ಈ ಎರಡು ಪಂದ್ಯಗಳಿಗೆ ರಾಹುಲ್​ ಇರುವುದಿಲ್ಲ.

ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಆಲೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ, ಕೆ ಎಲ್ ರಾಹುಲ್ ಗಾಯದಿಂದ ಚೇತರಿಸಿಕೊಂಡ ನಂತರ ಉತ್ತಮ ಪ್ರಗತಿಯಲ್ಲಿದ್ದಾರೆ. ಸೆಪ್ಟೆಂಬರ್ 4ರ ವರೆಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

"ಕೆಎಲ್ ರಾಹುಲ್ ಈ ವಾರ ಉತ್ತಮ ಚೇತರಿಕೆ ಕಂಡಿದ್ದಾರೆ. ಅವರು ತಂಡದಲ್ಲಿ ಪಾಲ್ಗೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ, ಲಂಕಾ ಪ್ರವಾಸದಲ್ಲಿ ಅವರು ನಮ್ಮೊಂದಿಗೆ ತೆರಳುವುದಿಲ್ಲ. ಕ್ಯಾಂಡಿಯಲ್ಲಿ ನಡೆಯುವ ಎರಡು ಪಂದ್ಯಗಳಿಗೆ ರಾಹುಲ್​ ಲಭ್ಯ ಇರುವುದಿಲ್ಲ. ನಾವು ಲಂಕಾದಲ್ಲಿದ್ದಾಗ ಅವರು ಎನ್​ಸಿಎಯಲ್ಲಿ ಅಭ್ಯಾಸದಲ್ಲಿರುತ್ತಾರೆ. ರಾಹುಲ್​ ಅವರನ್ನು ಸೆಪ್ಟೆಂಬರ್ 4 ರಂದು ಮರುಮೌಲ್ಯಮಾಪನ ಮಾಡಿ ನಂತರ ತಂಡಕ್ಕೆ ಸೇರಿಸಿಕೊಳ್ಳುತ್ತೇವೆ. ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಏಷ್ಯಾ ಕಪ್​ನಲ್ಲಿ ಉತ್ತಮ ಕಮ್​ಬ್ಯಾಕ್​ ಆಗುವ ಸಾಧ್ಯತೆ ಇದೆ. ಶ್ರೇಯಸ್​ ಅಯ್ಯರ್​​ ಸಂಪೂರ್ಣ ಫಿಟ್​ ಆಗಿದ್ದು, ಅಭ್ಯಾಸದ ವೇಳೆ ಬ್ಯಾಟಿಂಗ್​ನಿಂದ ಹಿಡಿದು ಎಲ್ಲ ರೀತಿಯ ಪರೀಕ್ಷೆಗಳಲ್ಲಿ ಸಂಪೂರ್ಣ ಪಾಸ್​ ಆಗಿದ್ದಾರೆ"ಎಂದು ದ್ರಾವಿಡ್​ ಹೇಳಿದ್ದಾರೆ.

  • Rahul Dravid said "People talk a lot about experimentation but even before 18-20 months, I could have told who were the candidates for the number 4 & 5 - it was always between KL, Pant & Iyer but unfortunately all got injured together". [Star Sports] pic.twitter.com/NKldutIZ9U

    — Johns. (@CricCrazyJohns) August 29, 2023 " class="align-text-top noRightClick twitterSection" data=" ">

ಮಧ್ಯಮ ಕ್ರಮಾಂಕದ ಗೊಂದಲದ ಬಗ್ಗೆ ಅಗುತ್ತಿರುವ ಚರ್ಚೆಯ ಬಗ್ಗೆ ಮಾತನಾಡಿದ ಕೋಚ್​, "ಜನರು ಪ್ರಯೋಗದ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಆದರೆ 18-20 ತಿಂಗಳುಗಳ ಮುಂಚೆಯೇ, 4 ಮತ್ತು 5 ನೇ ಸಂಖ್ಯೆಯ ಅಭ್ಯರ್ಥಿಗಳು ಯಾರು ಎಂದು ನಾನು ಹೇಳಬಹುದಿತ್ತು. ಅದು ಯಾವಾಗಲೂ ಕೆ ಎಲ್ ರಾಹುಲ್​, ರಿಷಬ್​ ಪಂತ್ ಮತ್ತು ಶ್ರೇಯಸ್​ ಅಯ್ಯರ್ ಆಗಿದ್ದರು. ಆದರೆ ದುರದೃಷ್ಟವಶಾತ್ ಮೂವರು ಒಂದೇ ಸಮಯಕ್ಕೆ ಗಾಯಗೊಂಡರು" ಎಂದಿದ್ದಾರೆ.

ಪಾಕಿಸ್ತಾನ, ಭಾರತ ಮತ್ತು ನೇಪಾಳವು ಎ ಗುಂಪಿನಲ್ಲಿದ್ದರೆ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾವು ಬಿ ಗುಂಪಿನಲ್ಲಿದೆ. ಪಂದ್ಯಾವಳಿಯು ಹೈಬ್ರಿಡ್ ಮಾದರಿಯನ್ನು ಅನುಸರಿಸಲಾಗುತ್ತಿದೆ. ಪಾಕಿಸ್ತಾನವು ಎರಡು ಸ್ಥಳಗಳಲ್ಲಿ ನಾಲ್ಕು ಪಂದ್ಯಗಳನ್ನು ಆಯೋಜಿಸುತ್ತದೆ ಮತ್ತು ಶ್ರೀಲಂಕಾ ಉಳಿದ ಪಂದ್ಯಗಳನ್ನು ಆಯೋಜಿಸುತ್ತದೆ. ಆರು ಗುಂಪು-ಹಂತದ ಪಂದ್ಯಗಳ ನಂತರ 6 ರಲ್ಲಿ ಎರಡು ತಂಡ ಹೊರ ಬೀಳಲಿದೆ. ಸೆಪ್ಟೆಂಬರ್ 6 ರಿಂದ ಸೂಪರ್ ಫೋರ್ಸ್ ಹಂತದ ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯವನ್ನು ಸೆಪ್ಟೆಂಬರ್ 17 ರಂದು ಕೊಲಂಬೊದಲ್ಲಿ ನಡೆಯಲಿದೆ. ಸೂಪರ್ ಫೋರ್​ನಲ್ಲಿ ಅಗ್ರ ಎರಡು ತಂಡಗಳು ಫೈನಲ್​ನಲ್ಲಿ ಮುಖಾಮುಖಿ ಆಗಲಿವೆ.

ಏಷ್ಯಾಕಪ್​ನ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ. (ಎಎನ್​ಐ)

ಇದನ್ನೂ ಓದಿ: ಯುರೋಪಿಯನ್ನರು ಪ್ರಾಬಲ್ಯ ಸಾಧಿಸಿದ ಕ್ರೀಡೆಯಲ್ಲಿ ನೀರಜ್, ನಾನು​ ಮೊದಲಿಗರೆಂಬುದು ಹೆಮ್ಮೆ: ಅರ್ಷದ್ ನದೀಮ್‌

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.