ETV Bharat / sports

ಬಲತೊಡೆ ಶಸ್ತ್ರಚಿಕಿತ್ಸೆ ಯಶಸ್ವಿ: ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಕೆ.ಎಲ್​ ರಾಹುಲ್​ - ಕೆಎಲ್​ ರಾಹುಲ್​ ಶಸ್ತ್ರಚಿಕಿತ್ಸೆ ಕುರಿತು ಮಾಹಿತಿ

ಬಲತೊಡೆ ಗಾಯದಿಂದಾಗಿ ಕೆ.ಎಲ್​ ರಾಹುಲ್​ ಭಾರತ ಹಾಗೂ ದಕ್ಷಣ ಆಫ್ರಿಕ ನಡುವಿನ ಟಿ-20 ಸರಣಿಯಿಂದ ಹೊರಬಿದ್ದಿದ್ದರು ಇದೀಗ ಅವರ ಬಲತೊಡೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಈ ಕುರಿತು ’ಕೂ‘ ನಲ್ಲಿ ಪೋಸ್ಟ್​​ ಹಂಚಿಕೊಂಡಿದ್ದಾರೆ ಕೆ ಎಲ್​ ರಾಹುಲ್​

kl rahul
ಬಲತೊಡೆ ಶಸ್ತ್ರಚಿಕಿತ್ಸೆ ಯಶಸ್ವಿ ನಂತರ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಕೆ.ಎಲ್​ ರಾಹುಲ್​
author img

By

Published : Jun 30, 2022, 11:08 AM IST

Updated : Jun 30, 2022, 11:29 AM IST

ಬರ್ಲಿನ್​(ಜರ್ಮನಿ): ಭಾರತದ ಓಪನರ್ ಕೆಎಲ್ ರಾಹುಲ್ ಅವರ ಇತ್ತೀಚೆಗೆ ಬಲತೊಡೆ ಶಸ್ತ್ರಚಿಕಿತ್ಸಗೆ ಒಳಗಾಗಿದ್ದಾರೆ. ಇದೀಗ ಅವರಿಗೆ ನಡೆಸಿದ ಚಿಕಿತ್ಸೆ ಯಶಸ್ವಿಯಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.

ಜೂನ್​ 8ರಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 5 ಪಂದ್ಯಗಳ ಟಿ-20 ಸರಣಿಗಾಗಿ ಕೆ.ಎಲ್​ ರಾಹುಲ್​ ಅಭ್ಯಾಸ ನಡೆಸಿದ್ದರು. ಈ ವೇಳೆ ಬಲತೊಡೆಗೆ ಗಂಭೀರ ಗಾಯವಾದ ಕಾರಣ ಸರಣಿಯಿಂದ ಹೊರ ಬಿದ್ದಿದ್ದರು. ಗಾಯದ ಹಿನ್ನೆಲೆ ಶಸ್ತ್ರಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದರು.

ಅಭಿಮಾನಿಗಳಿಗೆ ಕೆ ಎಲ್​​​ ರಾಹುಲ್​ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ತಮ್ಮ ಬಲತೊಡೆ ಗಾಯದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವ ಕುರಿತು ಕೂ ಆ್ಯಪ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕಳೆದೆರೆಡು ವಾರ ಕಠಿಣ ದಿನಗಳನ್ನು ಎದುರಿಸಿದ್ದೇನೆ. ನಿಮ್ಮೆಲ್ಲರ ಪ್ರಾರ್ಥನೆಯಿಂದಾಗಿ ನನ್ನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ನಾನು ಚೇತರಿಕೆ ಹಾದಿಯಲ್ಲಿದ್ದೇನೆ ಆದಷ್ಟು ಬೇಗ ನಿಮ್ಮನ್ನು ಕಾಣುವೆ. ನನ್ನ ಚಿಕಿತ್ಸೆಗಾಗಿ ಪ್ರಾರ್ಥಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದು ರಾಹುಲ್​ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಇದೀಗ ಟೀ ಇಂಡಿಯಾ ಮರು ನಿಗದಿಪಡಿಸಲಾದ 5ನೇ ಪಂದ್ಯಕ್ಕಾಗಿ ಇಂಗ್ಲೆಂಡ್​ ತಲುಪಿದ್ದು, ಅಭ್ಯಾಸ ನಡೆಸಿದೆ. ನಾಳೆ ಭಾರತ ಇಂಗ್ಲೆಂಡ್​ ನಡುವೆ ಎಡ್ಜ್‌ಬಾಸ್ಟನ್​ನಲ್ಲಿ 5ನೇ ಪಂದ್ಯ ನಡೆಯಲಿದೆ. ಸದ್ಯ ಟೆಸ್ಟ್​ ಸರಣಿಯಲ್ಲಿ 2-1 ಅಂತರದಿಂದ ಭಾರತ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ: ಆಂಗ್ಲರ ವಿರುದ್ಧದ ಟೆಸ್ಟ್​ನಿಂದ ರೋಹಿತ್ ಔಟ್; ನಾಯಕತ್ವದ ಜವಾಬ್ದಾರಿ ಬುಮ್ರಾ ಹೆಗಲಿಗೆ!

Last Updated : Jun 30, 2022, 11:29 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.