ಹೈದರಾಬಾದ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಕ್ರಿಕೆಟ್ನಲ್ಲಿ ಟೀಂ ಇಂಡಿಯಾ 3-0 ಅಂತರದಿಂದ ಸರಣಿ ಸೋಲು ಕಂಡಿದ್ದು, ಈ ಮೂಲಕ ಹರಿಣಗಳ ನಾಡಲ್ಲಿ ಮುಖಭಂಗಕ್ಕೊಳಗಾಗಿದೆ. ರೋಹಿತ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿದ್ದ ಕನ್ನಡಿಗ ರಾಹುಲ್ ಈ ವಿಚಾರವಾಗಿ ಮಾತನಾಡಿದ್ದಾರೆ.
![KL Rahul on Team india](https://etvbharatimages.akamaized.net/etvbharat/prod-images/768-512-11157150-122-11157150-1616678052318_2401newsroom_1643041506_800.jpg)
ಕಳೆದ ನಾಲ್ಕೈದು ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ಉತ್ತಮ ಕ್ರಿಕೆಟ್ ಆಡುತ್ತಿದೆ. ಆದರೆ, ವೈಟ್ ಬಾಲ್(ಸೀಮಿತ ಓವರ್) ಕ್ರಿಕೆಟ್ನಲ್ಲಿ ತುರ್ತು ಬದಲಾವಣೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ಟೌನ್ ಮೈದಾನದಲ್ಲಿ ನಡೆದ ಕೊನೆ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ 4 ರನ್ಗಳ ಅಂತರದ ಸೋಲು ಕಂಡಿದೆ. ಇದರ ಬೆನ್ನಲ್ಲೇ ಮಾತನಾಡಿರುವ ರಾಹುಲ್ ಸೀಮಿತ ಓವರ್ಗಳ ಕ್ರಿಕೆಟ್ನ ಕೂಲಂಕಷವಾಗಿ ಪರಿಶೀಲನೆ ಮಾಡುವ ಅಗತ್ಯವಿದೆ ಎಂದಿದ್ದಾರೆ.
ಟೀಂ ಇಂಡಿಯಾ ಮುನ್ನಡೆಸಿರುವುದು ಒಂದು ದೊಡ್ಡ ಗೌರವ. ನನ್ನ ದೇಶವನ್ನ ಪ್ರತಿನಿಧಿಸುವುದು ಮತ್ತು ತಂಡ ಮುನ್ನಡೆಸುವ ಕನಸು ನನಸಾಗಿದೆ. ಫಲಿತಾಂಶ ನಾವು ಊಹೆ ಮಾಡಿದ ರೀತಿಯಲ್ಲಿ ಬಂದಿಲ್ಲ. ಇದೊಂದು ಕಲಿಕಾ ಹಂತವಾಗಿದೆ ಎಂದು ನಾನು ಭಾವಿಸುತ್ತೇನೆ. ಮುಂಬರುವ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಇದೀಗ ಉತ್ತಮವಾಗಿ ರೂಪುಗೊಳ್ಳಬೇಕಾಗಿದೆ ಎಂದಿರುವ ಅವರು, ತುರ್ತು ಪರಿವರ್ತನೆ ಅಗತ್ಯವಾಗಿದೆ ಎಂದರು.
![KL Rahul on Team india](https://etvbharatimages.akamaized.net/etvbharat/prod-images/14270173_thumbnail_2x1_wdfdfdfd---copy_2401newsroom_1643041506_611.jpg)
ನನ್ನ ನಾಯಕತ್ವ ಕೌಶಲ್ಯದ ಬಗ್ಗೆ ವಿಶ್ವಾಸ..ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಕೈಚೆಲ್ಲಿದ ಬೆನ್ನಲ್ಲೇ ನನ್ನ ನಾಯಕತ್ವದ ಬಗ್ಗೆ ಅನೇಕ ರೀತಿಯ ಮಾತು ಕೇಳಿ ಬಂದಿವೆ. ಆದರೆ, ನನ್ನ ನಾಯಕತ್ವದ ಮೇಲೆ ನನಗೆ ಸಂಪೂರ್ಣವಾದ ನಂಬಿಕೆ ಇದೆ. ತಂಡ ಮುನ್ನಡೆಸುವಾಗ ಅನೇಕ ಪಾಠ ಕಲಿತಿದ್ದೇನೆ. ಗೆಲುವಿನೊಂದಿಗೆ ಅಭಿಯಾನ ಆರಂಭಿಸುವುದಕ್ಕಿಂತಲೂ ಸೋಲು ಹೆಚ್ಚು ಬಲಶಾಲಿಯಾಗಿರುತ್ತದೆ. ನನ್ನ ವೃತ್ತಿ ಜೀವನದಲ್ಲಿ ಎಲ್ಲವನ್ನೂ ನಿಧಾನವಾಗಿ ಪಡೆದುಕೊಂಡಿದ್ದೇನೆ. ನನ್ನ ಆಟಗಾರರಿಂದ ಅತ್ಯುತ್ತಮವಾಗಿರುವುದನ್ನ ನಾವು ಹೊರತರಬಲ್ಲೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ