ಕಳಪೆ ಪ್ರದರ್ಶನ ನೀಡುತ್ತಿರುವ ಕೆ.ಎಲ್. ರಾಹುಲ್ ಮೇಲೆ ಟೀಕೆಗಳು ಕೇಳಿ ಬರುತ್ತಿದೆ. ಅಲ್ಲದೇ ಉಪನಾಯಕನ ಸ್ಥಾನ ನೀಡಿರುವುದರಿಂದ ಆಡುವ 11ರಲ್ಲಿ ಕೈಬಿಡಲಾಗುತ್ತಿಲ್ಲ ಎಂಬ ಅಭಿಪ್ರಾಯಗಳು ಬಂದ ಹಿನ್ನೆಲೆ ರಾಹುಲ್ ಉಪನಾಯಕನ ಸ್ಥಾನ ಕಳೆದುಕೊಂಡಿದ್ದಾರೆ. ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಗೆ ಮಾತ್ರ ಟೀಮ್ ಘೋಷಿಸಿತ್ತು. ಎರಡನೇ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ ನಂತರ ಮೂರು ಮತ್ತು ನಾಲ್ಕನೇ ಟೆಸ್ಟ್ ಹಾಗೂ ಏಕದಿನ ಸರಣಿಯ ತಂಡವನ್ನು ಪ್ರಕಟಿಸಿದೆ.
ಮುಂದಿನ ಎರಡು ಟೆಸ್ಟ್ ಪಂದ್ಯಕ್ಕೆ ಪ್ರಕಟಿಸಿರುವ ತಂಡದಲ್ಲಿ ಉಪನಾಯಕನ ಸ್ಥಾನವನ್ನು ತಂಡ ಪ್ರಕಟಿಸಿಲ್ಲ. ಉಪನಾಯಕನ ಸ್ಥಾನ ಕೊಟ್ಟಿರುವುದರಿಂದ 11ರ ಬಳಗದಿಂದ ಕೈ ಬಿಡಲಾಗುತ್ತಿಲ್ಲ ಎಂಬ ಟೀಕೆ ಇದಕ್ಕೆ ಕಾರಣವೇ ಎಂಬ ಅನುಮಾನ ಹುಟ್ಟಿದೆ. ತಂಡದಲ್ಲಿ ರಾಹುಲ್ ಪರ್ಯಾಯ ವಿಕೆಟ್ ಕೀಪರ್ ಇದ್ದರೂ ಭರತ್ ಜೊತೆಗೆ ಇಶನ್ ಕಿಶನ್ಗೆ ಸ್ಥಾನ ದೊರೆತಿದೆ.
ಸೌರಾಷ್ಟ್ರ ತಂಡ ರಣಜಿ ಫೈನಲ್ ಪ್ರವೇಶ ಪಡೆದ ಕಾರಣ ಜಯದೇವ್ ಉನಾದ್ಕತ್ಗೆ ಎರಡನೇ ಟೆಸ್ಟ್ನಿಂದ ಬಿಸಿಸಿಐ ಬಿಡುಗಡೆ ನೀಡಿತ್ತು. ಸೌರಾಷ್ಟ್ರ ಎರಡನೇ ಬಾರಿ ರಣಜಿ ಕಪ್ ಗೆದ್ದ ನಂತರ ಮತ್ತೆ ಉನಾದ್ಕತ್ರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಬೌಲಿಂಗ್ ಪಡೆಯಲ್ಲಿ ಮತ್ತಾವುದೇ ಬದಲಾವಣೆ ಮಾಡಲಾಗಿಲ್ಲ. ಆಲ್ರೌಡರ್ ಮತ್ತು ಸ್ಪಿನ್ ವಿಭಾಗವನ್ನು ಜಡೇಜ, ಅಶ್ವಿನ್ ಮತ್ತು ಅಕ್ಷರ್ ಉತ್ತಮವಾಗಿ ನಿಭಾಯಿಸುತ್ತಿದ್ದು, ಮಿಕ್ಕೆರಡು ಪಂದ್ಯಕ್ಕೂ ಅವರೇ ಮುಂದುವೆರೆಯುವ ಸಾಧ್ಯತೆ ಹೆಚ್ಚಿದೆ.
-
🚨 NEWS 🚨: India squads for last two Tests of Border-Gavaskar Trophy and ODI series announced. #TeamIndia | #INDvAUS | @mastercardindia
— BCCI (@BCCI) February 19, 2023 " class="align-text-top noRightClick twitterSection" data="
More Details 🔽https://t.co/Mh8XMabWei
">🚨 NEWS 🚨: India squads for last two Tests of Border-Gavaskar Trophy and ODI series announced. #TeamIndia | #INDvAUS | @mastercardindia
— BCCI (@BCCI) February 19, 2023
More Details 🔽https://t.co/Mh8XMabWei🚨 NEWS 🚨: India squads for last two Tests of Border-Gavaskar Trophy and ODI series announced. #TeamIndia | #INDvAUS | @mastercardindia
— BCCI (@BCCI) February 19, 2023
More Details 🔽https://t.co/Mh8XMabWei
ಮಾರ್ಚ್ 1ರಿಂದ 5ರ ವರೆಗೆ ಮೂರನೇ ಟೆಸ್ಟ್ ಪಂದ್ಯ ಇಂದೋರ್ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೂರನೇ ಪಂದ್ಯವನ್ನು ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಿಲಾಗಿತ್ತು. ಆದರೆ ಔಟ್ ಫೀಲ್ಡ್ ಇನ್ನೂ ಹುಲ್ಲುಹಾಸು ಸರಿಯಾಗಿ ಬೆಳೆದಿರದ ಹಿನ್ನೆಲೆ ಪಂದ್ಯವನ್ನು ಹೋಳ್ಕರ್ ಸ್ಟೇಡಿಯಂಗೆ ಸ್ಥಳಾಂತರಿಸಲಾದೆ. ನಾಲ್ಕನೇ ಪಂದ್ಯ ಮಾರ್ಚ್ 9 ರಿಂದ 13ರ ವರೆಗೆ ಅಹಮದಾಬಾದ್ನಲ್ಲಿ ಆಯೋಜನೆಗೊಳ್ಳಲಿದೆ.
ಆಸ್ಟ್ರೇಲಿಯಾಕ್ಕೆ ಮರಳಿರುವ ಕಮಿನ್ಸ್: ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಕೌಟುಂಬಿಕ ಅನಾರೋಗ್ಯದ ಕಾರಣ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಆದರೆ ಮೂರನೇ ಟೆಸ್ಟ್ ಆರಂಭಕ್ಕೂ ಮುನ್ನ ಭಾರತಕ್ಕೆ ಹಿಂತಿರುಗುವ ನಿರೀಕ್ಷೆಯಿದೆ. ಮಾರ್ಚ್ 1 ರಂದು ಇಂದೋರ್‌ನಲ್ಲಿ ಪ್ರಾರಂಭವಾಗಲಿರುವ ಮೂರನೇ ಟೆಸ್ಟ್‌ಗೆ ಮುಂಚಿತವಾಗಿ ತಂಡವನ್ನು ಸೇರಲಿದ್ದಾರೆ ಎಂದು ಹೇಳಲಾಗಿದೆ.
ಏಕದಿನ ಪಂದ್ಯಕ್ಕೂ ತಂಡ ಪ್ರಕಟ: ಮಾರ್ಚ್ 17ರಿಂದ ಆಸ್ಟ್ರೇಲಿಯಾದ ವಿರುದ್ಧ ಆರಂಭವಾಗಲಿರುವ ಮೂರು ಏಕದಿನ ಪಂದ್ಯಗಳಿಗೆ ಬಿಸಿಸಿಐ ತಂಡ ಪ್ರಕಟಿಸಿದೆ. ಏಕದಿನ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದು, ಟೆಸ್ಟ್ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ಅಕ್ಷರ್ ಪಟೇಲ್ಗೆ ಮತ್ತು ಗಾಯದಿಂದ ಚೇತರಿಸಿಕೊಂಡಿರುವ ಜಡೇಜ ಅವರಿಗೆ ಸ್ಥಾನ ದೊರೆತಿದೆ. 10 ವರ್ಷಗಳ ನಂತರ ಜಯದೇವ್ ಉನಾದ್ಕತ್ ಏಕದಿನ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಶ್ರೀಕರ್ ಭರತ್ ಮತ್ತು ಶಹಬಾಜ್ ಅಹಮದ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ಮೊದಲ ಪಂದ್ಯಕ್ಕೆ ರೋಹಿತ್ ಅಲಭ್ಯ, ಹಾರ್ದಿಕ್ಗೆ ಜವಾಬ್ದಾರಿ: ಮೊದಲ ಏಕದಿನ ಪಂದ್ಯಕ್ಕೆ ರೋಹಿತ್ ಶರ್ಮಾ ಅಲಭ್ಯರಾಗಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಕೌಟುಂಬಿಕ ಕಾರಣದಿಂದ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡುವುದಿಲ್ಲ, ಅವರ ಬದಲಾಗಿ ಉಪನಾಯಕ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
3ನೇ ಮತ್ತು 4ನೇ ಟೆಸ್ಟ್ ಪಂದ್ಯದ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಉಮೇಶ್ ಯಾದವ್, ಜಯದೇವ್ ಉನದ್ಕತ್.
ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಜಯದೇವ್ ಉನದ್ಕತ್
ಇದನ್ನೂ ಓದಿ: ಭಾರತ ವಿರುದ್ಧ 2ಪಂದ್ಯ ಸೋತಿರುವ ಕಾಂಗರೂ ಪಡೆ.. ತಂಡದ ವಿರುದ್ಧ ತಿರುಗಿ ಬಿದ್ದ ಆಸ್ಟ್ರೇಲಿಯಾ ಮಾಜಿ ಆಟಗಾರರು!