ಸೆಂಚುರಿಯನ್(ದಕ್ಷಿಣ ಆಫ್ರಿಕಾ): ಇಲ್ಲಿನ ಸೂಪರ್‌ಸ್ಪೋರ್ಟ್ ಪಾರ್ಕ್ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಮೊದಲ ದಿನ ಬ್ಯಾಟಿಂಗ್ ಮಾಡಲು ಭಾರತ ಪರದಾಡಿತಾದರೂ, ಕನ್ನಡಿಗ ಕೆ.ಎಲ್.ರಾಹುಲ್ ಮಾತ್ರ ಬೌನ್ಸಿ ಪಿಚ್ನಲ್ಲಿ ಹರಿಣಗಳ ಬೌಲಿಂಗ್ ದಾಳಿಗೆ ದಿಟ್ಟವಾಗಿ ಬ್ಯಾಟ್ ಬೀಸುವಲ್ಲಿ ಯಶಸ್ವಿಯಾದರು. ಮೊದಲ ದಿನದ ರಾಹುಲ್ ಆಟಕ್ಕೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಭಾರತ ತಂಡಕ್ಕೆ ರಾಹುಲ್ ಬಿಕ್ಕಟ್ಟಿನಿಂದ ಪಾರು ಮಾಡುವ ವ್ಯಕ್ತಿಯಾಗುತ್ತಿದ್ದಾರೆ" ಎಂದು ಹೇಳಿದ್ದಾರೆ.
ಎರಡನೇ ದಿನದಾಟದ ಆರಂಭಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಥೋಡ್, "ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದರಿಂದ ಪಿಚ್ ಟ್ರಿಕ್ಕಿ ಆಗಿತ್ತು. ಇದರ ಜೊತೆಗೆ ದಕ್ಷಿಣ ಆಫ್ರಿಕಾದಲ್ಲಿ ಬ್ಯಾಟಿಂಗ್ ಮಾಡುವುದು ಕಠಿಣ ಸವಾಲು. ಹಾಗೆ ನೋಡಿದರೆ ದಿನದಾಟದ ಅಂತ್ಯಕ್ಕೆ ತಂಡ ಉತ್ತಮ ಸ್ಕೋರ್ ಮಾಡಿದೆ. ಆದರೆ ನಮ್ಮ ಬಳಿ ವಿಕೆಟ್ಗಳಿಲ್ಲ ಅಷ್ಟೇ" ಎಂದರು.
- " class="align-text-top noRightClick twitterSection" data="">
ಕೆ.ಎಲ್.ರಾಹುಲ್ ಮೊದಲ ದಿನದಾಟದ ಅಂತ್ಯಕ್ಕೆ 70 ರನ್ ಗಳಿಸಿ ಅಜೇಯವಾಗಿದ್ದರು. ಈ ಬಗ್ಗೆ ಮಾತನಾಡುತ್ತಾ, "ರಾಹುಲ್ ತಮ್ಮ ಜವಾಬ್ದಾರಿ ಅರಿತು ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರು ತಂಡಕ್ಕೆ ಬಿಕ್ಕಟ್ಟಿನಿಂದ ಪಾರು ಮಾಡುವ ವ್ಯಕ್ತಿಯಾಗುತ್ತಿದ್ದಾರೆ. ಅವರು ತಮ್ಮ ಗೇಮ್ ಪ್ಲಾನ್ ಅನ್ನು ಉತ್ತಮವಾಗಿ ಕಾರ್ಯರೂಪಕ್ಕೆ ತಂದರು. ಅಲ್ಲದೇ ಶಾಟ್ ಸೆಲೆಕ್ಷನ್ನಲ್ಲಿಯೂ ಎಡವಲಿಲ್ಲ" ಎಂದು ತಿಳಿಸಿದರು.
ಪಿಚ್ ತೇವಾಂಶದಿಂದ ಕೂಡಿದೆ ಎಂಬ ಕಾರಣಕ್ಕೆ ತೆಂಬಾ ಬವುಮಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಭಾರತದ ಬ್ಯಾಟಿಂಗ್ ಬಲವನ್ನು ಮೊದಲ ಸೆಷನ್ನಲ್ಲೇ ಕುಸಿಯುವಂತೆ ಅವರ ಬೌಲರ್ಗಳು ನೋಡಿಕೊಂಡರು. ಭಾರತದ ಆರಂಭಿಕ ಮೂವರು ಬ್ಯಾಟರ್ಗಳು ತಂಡ 24 ರನ್ ತಲುಪುವಷ್ಟರಲ್ಲೇ ಪೆವಿಲಿಯನ್ ಹಾದಿ ಹಿಡಿದಿದ್ದರು. ವಿರಾಟ್, ಅಯ್ಯರ್, ಅಶ್ವಿನ್, ಶಾರ್ದೂಲ್ ಮತ್ತು ಬುಮ್ರಾ ವಿಕೆಟ್ ಸಹ ತಂಡ ಕಳೆದುಕೊಂಡಿತು. ಆದರೆ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ರಾಹುಲ್ ಕೆಳ ಕ್ರಮಾಂಕದ ಜತೆಯಾಟ ಸಿಗದಿದ್ದರೂ ತಮ್ಮ ಇನ್ನಿಂಗ್ಸ್ ಕಟ್ಟಿದರು.
ಮೊದಲ ದಿನದಾಟದ ಅಂತ್ಯಕ್ಕೆ ಅಜೇಯ 70 ರನ್ ಗಳಿಸಿದ್ದ ರಾಹುಲ್, ಎರಡನೇ ದಿನ ಅದನ್ನು ಶತಕವಾಗಿ ಪರಿವರ್ತಿಸಿದರು. ರಾಹುಲ್ ಅವರ 101 ರನ್ಗಳ ಸಹಾಯದಿಂದ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ ಮುಕ್ತಾಯಕ್ಕೆ 245 ರನ್ ಗಳಿಸಿತು.
ಇದನ್ನೂ ಓದಿ: ಅಫ್ಘಾನ್ ಟಿ20 ಸರಣಿಗೂ ಪಾಂಡ್ಯ ಇರಲ್ಲ: ಐಪಿಎಲ್ಗೆ ಫಿಟ್ ಆಗುವ ನಿರೀಕ್ಷೆ