ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ನ 2022ನೇ ಆವೃತ್ತಿಗಾಗಿ ಎಲ್ಲ ಫ್ರಾಂಚೈಸಿಗಳು ತಮ್ಮಿಷ್ಟದ ಕೆಲ ಆಟಗಾರರನ್ನ ರಿಟೈನ್ ಮಾಡಿಕೊಂಡಿದ್ದಾರೆ. ಈ ಹಿಂದೆ ಅನೇಕ ವರ್ಷಗಳಿಂದ ವಿವಿಧ ತಂಡದ ಭಾಗವಾಗಿದ್ದ ಪ್ಲೇಯರ್ಸ್ಗಳಿಗೆ ಕೊಕ್ ನೀಡಲಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿ ಬೇರೆ ತಂಡದ ಪರ ಕಣಕ್ಕಿಳಿಯಲಿದ್ದಾರೆ.
2018ರಿಂದಲೂ ಪಂಜಾಬ್ ಕಿಂಗ್ಸ್ ತಂಡದ ಭಾಗವಾಗಿದ್ದ ಕನ್ನಡಿಗ ಕೆ ಎಲ್ ರಾಹುಲ್ ಮುಂದಿನ ಆವೃತ್ತಿಯಲ್ಲಿ ಬೇರೆ ಫ್ರಾಂಚೈಸಿ ಪರ ಬ್ಯಾಟ್ ಬೀಸಲಿದ್ದಾರೆ. ಇದೇ ವಿಚಾರವಾಗಿ ರಾಹುಲ್ ಟ್ವೀಟ್ ಮಾಡಿದ್ದಾರೆ. 'ಪಂಜಾಬ್ ತಂಡದೊಂದಿಗೆ ಪ್ರಯಾಣ ಉತ್ತಮವಾಗಿತ್ತು. ಪ್ರೀತಿಗೆ ಧನ್ಯವಾದಗಳು.. ಮುಂದಿನ ಆವೃತ್ತಿಯಲ್ಲಿ ಎದುರಾಳಿಯಾಗಿ ನೋಡೋಣ' ಎಂದಿದ್ದಾರೆ.
-
It was a good ride, thank you for the love ❤️ see you on the other side 🙌🏻 @PunjabKingsIPL pic.twitter.com/fFKtlOqghR
— K L Rahul (@klrahul11) December 1, 2021 " class="align-text-top noRightClick twitterSection" data="
">It was a good ride, thank you for the love ❤️ see you on the other side 🙌🏻 @PunjabKingsIPL pic.twitter.com/fFKtlOqghR
— K L Rahul (@klrahul11) December 1, 2021It was a good ride, thank you for the love ❤️ see you on the other side 🙌🏻 @PunjabKingsIPL pic.twitter.com/fFKtlOqghR
— K L Rahul (@klrahul11) December 1, 2021
2020ರಲ್ಲಿ ಪಂಜಾಬ್ ತಂಡದ ಕ್ಯಾಪ್ಟನ್ ಆಗಿದ್ದ ರಾಹುಲ್ ಎರಡು ಆವೃತ್ತಿಯಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. ಆದರೆ, ಈ ಸಲ ತಾವು ಫ್ರಾಂಚೈಸಿಯಿಂದ ಹೊರ ಹೋಗಲು ನಿರ್ಧಾರ ಮಾಡಿರುವ ಕಾರಣ ಫ್ರಾಂಚೈಸಿ ಕೈಬಿಟ್ಟಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಹೊಸ ತಂಡ ಲಖನೌಗೆ ರಾಹುಲ್ ನಾಯಕನಾಗಲಿದ್ದು, ದೊಡ್ಡ ಮೊತ್ತದ ಹಣ ನೀಡಿ ಅವರನ್ನ ಖರೀದಿ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.
ಕೆ ಎಲ್ ರಾಹುಲ್ ಅವರನ್ನ ಕೈಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ತಂಡದ ಕೋಚ್ ಅನಿಲ್ ಕುಂಬ್ಳೆ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ರಾಹುಲ್ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲು ಇಷ್ಟಪಟ್ಟಿರುವ ಕಾರಣ ತಂಡದಿಂದ ಕೈಬಿಡಲಾಗಿದೆ ಎಂದಿದ್ದಾರೆ.
ಇದನ್ನೂ ಓದಿರಿ: ಕನ್ನಡಿಗನಿಗೆ ಜಾಕ್ಪಾಟ್: 1 ಕೋಟಿಯಿಂದ 12 ಕೋಟಿ ರೂ.ಗೆ ರಿಟೈನ್ ಆದ ಮಯಾಂಕ್
2018ರಲ್ಲಿ ಪಂಜಾಬ್ ತಂಡಕ್ಕೆ ಹರಾಜುಗೊಂಡಿದ್ದ ರಾಹುಲ್ಗೆ ದಾಖಲೆಯ 11 ಕೋಟಿ ರೂ. ನೀಡಲಾಗಿತ್ತು. ಈ ವೇಳೆ 659ರನ್ಗಳಿಕೆ ಮಾಡಿದ್ದ ರಾಹುಲ್ 2019ರಲ್ಲೂ 593ರನ್ ಸಿಡಿಸಿದ್ದರು.
ಇನ್ನು ತಂಡದ ನಾಯಕನಾಗಿ ಆಯ್ಕೆಯಾಗಿದ್ದ ವೇಳೆ ಕ್ರಮವಾಗಿ 2020ರಲ್ಲಿ 670 ಹಾಗೂ 2021ರಲ್ಲಿ 626ರನ್ಗಳಿಸಿದ್ದಾರೆ. ಮುಂದಿನ ಆವೃತ್ತಿಗಾಗಿ ಪಂಜಾಬ್ ಕನ್ನಡಿಗ ಮಯಾಂಕ್ ಅಗರವಾಲ್ಗೆ 12 ಕೋಟಿ ಹಾಗೂ ಅರ್ಷದೀಪ್ಗೆ 4ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿದೆ.