ETV Bharat / sports

ಮತ್ತೆ ಬ್ಯಾಟಿಂಗ್​​ ವೈಫಲ್ಯ ಕಂಡ ರಾಹುಲ್​ ಟ್ರೋಲ್​: ತಂಡದಿಂದ ಕೈಬಿಡುವಂತೆ ಆಕ್ರೋಶ

ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲೂ ರನ್​ ಗಳಿಸಲು ರಾಹುಲ್​ ಪರದಾಟ ನಡೆಸಿದ್ದರಿಂದ ಅಭಿಮಾನಿಗಳು ಮತ್ತೆ ಮುಗಿಬಿದ್ದಿದ್ದಾರೆ. ಟ್ವಿಟರ್​ನಲ್ಲಿ ತಹರೇವಾರಿ ಮೀಮ್ಸ್​ ಮೂಲಕ ಟ್ರೋಲ್​ ಮಾಡುತ್ತಿದ್ದಾರೆ.

KL Rahul brutally trolled following his failure against Netherlands
ಟಿ20 ವಿಶ್ವಕಪ್: ಮತ್ತೆ ಬ್ಯಾಟಿಂಗ್​​ ವೈಫಲ್ಯ.. ಟ್ರೋಲ್​ಗೆ ತುತ್ತಾ ಕೆಎಲ್​ ರಾಹುಲ್​
author img

By

Published : Oct 27, 2022, 1:53 PM IST

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡದ ಆರಂಭಿಕ ಆಟಗಾರ, ಕನ್ನಡಿಗ ಕೆಎಲ್​ ರಾಹುಲ್​ ಬ್ಯಾಟಿಂಗ್​ ವೈಫಲ್ಯ ಮುಂದುವರೆದಿದೆ. ಪಾಕ್​ ವಿರುದ್ಧ ಕಳಪೆ ಆಟವಾಡಿದ್ದ ರಾಹುಲ್​ ಇಂದು ನೆದರ್ಲ್ಯಾಂಡ್ಸ್​ ಜೊತೆಗಿನ ಪಂದ್ಯದಲ್ಲೂ ಬಹುಬೇಗ ಪೆವಿಲಿಯನ್ ಸೇರಿಕೊಂಡಿದ್ದು, ಕ್ರಿಕೆಟ್​ಪ್ರಿಯರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ಸಿಡ್ನಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್​ ವಿರುದ್ಧ ಟಾಸ್​ ಗೆದ್ದ ಭಾರತ ಬ್ಯಾಟಿಂಗ್​ ಆಯ್ದುಕೊಂಡಿದೆ. ನಾಯಕ ರೋಹಿತ್​ ಜೊತೆ ಇನ್ನಿಂಗ್ಸ್​ ಆರಂಭಿಸಿದ ರಾಹುಲ್​ 12 ಎಸೆತಗಳಲ್ಲಿ 9 ರನ್​ ಬಾರಿಸಿ ಔಟಾದರು. ಅವರ ಬ್ಯಾಟ್​​ನಿಂದ ಏಕೈಕ ಬೌಂಡರಿ ಮೂಡಿಬಂದಿತ್ತು.

ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಪಾಕ್​ ವಿರುದ್ಧವೂ ಕೂಡ ವಿಫಲರಾಗಿದ್ದ ರಾಹುಲ್​, 8 ಎಸೆತಗಳನ್ನು ಎದುರಿಸಿ ಕೇವಲ 4 ರನ್​ ಗಳಿಸಿದ್ದರು. ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧದ ಕಳಪೆ ಪ್ರದರ್ಶನದಿಂದ ಕೆಎಲ್ ವಿರುದ್ಧ​ ಕ್ರೀಡಾಭಿಮಾನಿಗಳು ಕಿಡಿಕಾರಿದ್ದರು.

ಇಂದಿನ ಪಂದ್ಯದಲ್ಲೂ ರನ್​ ಗಳಿಸಲು ರಾಹುಲ್​ ಪರದಾಡಿದ್ದರಿಂದ ಅಭಿಮಾನಿಗಳು ಮತ್ತೆ ಮುಗಿಬಿದ್ದಿದ್ದಾರೆ. ಟ್ವಿಟರ್​ನಲ್ಲಿ ತಹರೇವಾರಿ ಮೀಮ್ಸ್​ ಮೂಲಕ ಟ್ರೋಲ್​ ಮಾಡಲಾಗುತ್ತಿದೆ. ಕೆಲವರು ತಂಡದಿಂದ ಕೈಬಿಡುವಂತೆಯೂ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್: ಹರಿಣಗಳ ದಾಳಿಗೆ ತತ್ತರಿಸಿದ ಬಾಂಗ್ಲಾ ಟೈಗರ್ಸ್​ಗೆ ಹೀನಾಯ ಸೋಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.