ETV Bharat / sports

2022ರ ಐಪಿಎಲ್​ನಲ್ಲಿ ಕನ್ನಡಿಗ ಕೆ ಎಲ್​ ರಾಹುಲ್​ ಅತ್ಯಂತ ದುಬಾರಿ ಆಟಗಾರ!

ಲಖನೌ ತಂಡ ರಾಹುಲ್ ಜೊತೆಗೆ ಆಸ್ಟ್ರೇಲಿಯಾದ ಆಲ್​ರೌಂಡರ್​ ಮಾರ್ಕಸ್​ ಸ್ಟೋಯ್ನಿಸ್​ ಮತ್ತು ಯುವ ಸ್ಪಿನ್ನರ್​ ರವಿ ಬಿಷ್ಣೋಯ್​ ಅವರನ್ನು ರಿಟೈನ್ ಮಾಡಿಕೊಂಡಿದೆ. ಇವರಿಬ್ಬರು ಕ್ರಮವಾಗಿ ₹9.2 ಕೋಟಿ ಮತ್ತು 4 ಕೋಟಿ ರೂ. ಪಡೆದುಕೊಂಡಿದ್ದಾರೆ. ಇನ್ನು ಫ್ರಾಂಚೈಸಿ ಬಳಿ ಮೆಗಾ ಹರಾಜಿಗಾಗಿ 59.89 ಕೋಟಿ ರೂ. ಉಳಿದಿದೆ..

KL Rahul becomes most expensive IPL player in 2022 IPL
ಕೆಎಲ್ ರಾಹುಲ್ 17 ಕೋಟಿ ರೂ
author img

By

Published : Jan 22, 2022, 12:03 PM IST

Updated : Jan 22, 2022, 12:20 PM IST

ಮುಂಬೈ : ಭಾರತ ತಂಡದಲ್ಲಿ ಹಂಗಾಮಿ ನಾಯಕನಾಗಿರುವ ಕನ್ನಡಿಗ ಕೆ ಎಲ್​ ರಾಹುಲ್‌ಗೆ ನೂತನ ಫ್ರಾಂಚೈಸಿ ಲಖನೌ ಬರೋಬ್ಬರಿ 17 ಕೋಟಿ ರೂ. ನೀಡಿದ್ದಲ್ಲದೆ, ತಂಡದ ನಾಯಕತ್ವವನ್ನು ನೀಡಿದೆ. ರಾಹುಲ್​ 17 ಕೋಟಿ ರೂ. ಪಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ದುಬಾರಿ ಆಟಗಾರ ಎಂಬ ದಾಖಲೆಯನ್ನು ವಿರಾಟ್​ ಕೊಹ್ಲಿ ಜೊತೆಗೆ ಹಂಚಿಕೊಂಡಿದ್ದಾರೆ.

2017ರಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿರಾಟ್​ ಕೊಹ್ಲಿಯನ್ನು 17 ಕೋಟಿ ರೂ.ಗಳಿಗೆ ರಿಟೈನ್ ಮಾಡಿಕೊಂಡಿತ್ತು. ಅವರು ಸತತ 5 ಆವೃತ್ತಿಗಳಲ್ಲಿ 17 ಕೋಟಿ ರೂ. ಪಡೆದಿದ್ದರು.

ಇನ್ನು ಲಖನೌ ತಂಡ ರಾಹುಲ್ ಜೊತೆಗೆ ಆಸ್ಟ್ರೇಲಿಯಾದ ಆಲ್​ರೌಂಡರ್​ ಮಾರ್ಕಸ್​ ಸ್ಟೋಯ್ನಿಸ್​ ಮತ್ತು ಯುವ ಸ್ಪಿನ್ನರ್​ ರವಿ ಬಿಷ್ಣೋಯ್​ ಅವರನ್ನು ರಿಟೈನ್ ಮಾಡಿಕೊಂಡಿದೆ. ಇವರಿಬ್ಬರು ಕ್ರಮವಾಗಿ 9.2 ಕೋಟಿ ಮತ್ತು 4 ಕೋಟಿ ರೂ. ಪಡೆದುಕೊಂಡಿದ್ದಾರೆ. ಇನ್ನು ಫ್ರಾಂಚೈಸಿ ಬಳಿ ಮೆಗಾ ಹರಾಜಿಗಾಗಿ 59.89 ಕೋಟಿ ರೂ. ಉಳಿದಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಮತ್ತೊಂದು ನೂತನ ಐಪಿಎಲ್ ಫ್ರಾಂಚೈಸಿಯಾಗಿರುವ ಅಹ್ಮದಾಬಾದ್​ ತಂಡ ಸ್ಥಳೀಯ ಆಟಗಾರ ಹಾರ್ದಿಕ್ ಪಾಂಡ್ಯ, ಆಫ್ಘನ್ ಸ್ಪಿನ್ನರ್​ ರಶೀದ್​ ಖಾನ್​ ಮತ್ತು ಶುಬ್ಮನ್ ಗಿಲ್​ರನ್ನು ಡ್ರಾಪ್ಟ್​ ಮಾಡಿಕೊಂಡಿದೆ. ರಶೀದ್​ ಮತ್ತು ಪಾಂಡ್ಯ ತಲಾ 15 ಕೋಟಿ ರೂ. ಪಡೆದುಕೊಂಡಿದ್ದರೆ, ಗಿಲ್​ 8 ಕೋಟಿ ರೂ.ಪಡೆದುಕೊಂಡಿದ್ದಾರೆ. ಮೆಗಾ ಹರಾಜಿಗೆ ತಂಡದ ಬಳಿ 52 ಕೋಟಿ ರೂ. ಉಳಿದಿದೆ. ಹಾರ್ದಿಕ್ ಪಾಂಡ್ಯ ತಂಡನ ನಾಯಕನಾಗಿ ಆಯ್ಕೆಯಾಗಿದ್ದಾರೆ. ಫೆಬ್ರವರಿ 12-13ರಂದು ಮೆಗಾ ಹರಾಜು ನಡೆಯಲಿದೆ.

ಇದನ್ನೂ ಓದಿ:IPL 2022: ಹಾರ್ದಿಕ್ ಪಾಂಡ್ಯಗೆ ಅಹಮದಾಬಾದ್ ಫ್ರಾಂಚೈಸಿ ನಾಯಕತ್ವ

Last Updated : Jan 22, 2022, 12:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.