ETV Bharat / sports

ದಕ್ಷಿಣ ಆಫ್ರಿಕಾ-ಭಾರತ ಕ್ರಿಕೆಟ್‌ ಸರಣಿಯಿಂದ ರಾಹುಲ್, ಕುಲದೀಪ್ ಔಟ್; ಪಂತ್​ಗೆ ನಾಯಕತ್ವ - ಗಾಯಗೊಂಡ ಕೆಎಲ್​ ರಾಹುಲ್​ ಕುಲದೀಪ್​ ಯಾದವ್​

ನೆಟ್ಸ್​​ನಲ್ಲಿ ಅಭ್ಯಾಸದ ಸಂದರ್ಭದಲ್ಲಿ ಗಾಯಗೊಂಡ ಕೆ.ಎಲ್.ರಾಹುಲ್​ ಮತ್ತು ಸ್ಪಿನ್ನರ್​ ಕುಲದೀಪ್​ ಯಾದವ್​ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಬಿದ್ದಿದ್ದಾರೆ.

kl-rahul-and-kuldeep-yadav-ruled-out
ಗಾಯಗೊಂಡ ರಾಹುಲ್, ಕುಲದೀಪ್​ ಯಾದವ್​​ ದಕ್ಷಿಣ ಆಫ್ರಿಕಾದ ವಿರುದ್ಧದ ಸರಣಿಯಿಂದ ಔಟ್
author img

By

Published : Jun 8, 2022, 7:30 PM IST

ಮುಂಬೈ (ಮಹಾರಾಷ್ಟ್ರ): ಗಾಯದ ಸಮಸ್ಯೆಯಿಂದಾಗಿ ಬ್ಯಾಟರ್ ಕೆ.ಎಲ್.ರಾಹುಲ್ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ನಾಳೆಯಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಯಿಂದ ಹೊರಬಿದ್ದಿದ್ದಾರೆ. ವಿಕೆಟ್​ ಕೀಪರ್​ ರಿಷಬ್​ ಪಂತ್​ಗೆ ನಾಯಕತ್ವದ ಹೊಣೆ ನೀಡಲಾಗಿದೆ.

  • NEWS 🚨- KL Rahul and Kuldeep Yadav ruled out of #INDvSA series owing to injury.

    The All-India Senior Selection Committee has named wicket-keeper Rishabh Pant as Captain and Hardik Pandya as vice-captain for the home series against South Africa @Paytm #INDvSA

    — BCCI (@BCCI) June 8, 2022 " class="align-text-top noRightClick twitterSection" data=" ">

ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ತಂಡದ ನಾಯಕನಾಗಿ ಬಡ್ತಿ ಪಡೆದಿದ್ದ ಕರ್ನಾಟಕದ ಕೆ.ಎಲ್. ರಾಹುಲ್​ಗೆ ಅದೃಷ್ಟ ಕೈಕೊಟ್ಟಿದೆ. ಅವರು ನೆಟ್ಸ್​ನಲ್ಲಿ ಅಭ್ಯಾಸದ ವೇಳೆ ತೊಡೆಸಂದು ಗಾಯಕ್ಕೀಡಾಗಿದ್ದಾರೆ. ವರ್ಷಗಳ ಬಳಿಕ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಸ್ಪಿನ್ನರ್​ ಕುಲದೀಪ್​ ಯಾದವ್​ ಬ್ಯಾಟಿಂಗ್​ ಮಾಡುವ ವೇಳೆ ಬಲಗೈಗೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಇಬ್ಬರೂ ಆಟಗಾರರು ಸರಣಿಯಿಂದಲೇ ಹೊರಗುಳಿಯಬೇಕಾಗಿದೆ ಎಂದು ಬಿಸಿಸಿಐ ತಿಳಿಸಿದೆ.

ಐಪಿಎಲ್​ನಲ್ಲಿ ಗುಜರಾತ್​ ತಂಡವನ್ನು ಚಾಂಪಿಯನ್​ ಮಾಡಿದ ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯರನ್ನು ಉಪನಾಯಕನನ್ನಾಗಿ ಮಾಡಲಾಗಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ 5 ಪಂದ್ಯಗಳ ಟಿ-20 ಸರಣಿಗೆ ನಾಳೆ ಚಾಲನೆ ಸಿಗಲಿದೆ.

ನಿರ್ಮಾಣವಾಗುತ್ತಾ ದಾಖಲೆ?: ನಾಳಿನ ಪಂದ್ಯದಲ್ಲಿ ಗೆಲುವು ಸಾಧಿಸಿದಲ್ಲಿ ಟಿ-20ಯಲ್ಲಿ ಸತತ 13 ಗೆಲುವು ಸಾಧಿಸಿದ ಮೊದಲ ತಂಡ ಎಂಬ ಸಾಧನೆಗೆ ಭಾರತ ಪಾತ್ರವಾಗಲಿದೆ.

ಇದನ್ನೂ ಓದಿ: ರಣಜಿ ಟ್ರೋಫಿ: ಕ್ವಾರ್ಟರ್​ ಫೈನಲ್​​ನಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದ ಕರ್ನಾಟಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.