ETV Bharat / sports

ಕೆಕೆಆರ್​ಗೆ ಮಾಜಿ ಆಟಗಾರರೇ ವಿಲನ್ಸ್​.. ಸೋಲುಂಡ ಮೂರು ಪಂದ್ಯಗಳಲ್ಲೂ ಎಕ್ಸ್‌ಪ್ಲೇಯರ್​ಗಳೇ ಕಂಟಕ! - ರಾಹುಲ್ ತ್ರಿಪಾಠಿ

ಕಳೆದ 3-4 ಆವೃತ್ತಿಗಳಲ್ಲಿ ಕೆಕೆಆರ್​ ಪರ ಆಡಿದ್ದ ದಿನೇಶ್ ಕಾರ್ತಿಕ್​, ಕುಲ್ದೀಪ್ ಯಾದವ್ ಮತ್ತು ರಾಹುಲ್ ತ್ರಿಪಾಠಿ 15ನೇ ಆವೃತ್ತಿಯಲ್ಲಿ ಕೆಕೆಆರ್ ಸೋಲು ಕಂಡಿರುವ ಮೂರು ಪಂದ್ಯಗಳಲ್ಲಿ ಅತ್ಯುತ್ತಮವಾಗಿ ಆಡಿದ್ದಾರೆ. ಅದರಲ್ಲೂ ಕುಲದೀಪ್ ಮತ್ತು ತ್ರಿಪಾಠಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ..

KKR lost 3 matches in 2022 IPL due to ex player performance
ಕೆಕೆಆರ್​ಗೆ ಮಾಜಿ ಆಟಗಾರರೇ ವಿಲನ್ಸ್​
author img

By

Published : Apr 16, 2022, 6:04 PM IST

ಮುಂಬೈ : ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 15ನೇ ಆವೃತ್ತಿಯಲ್ಲಿ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಇದರಲ್ಲಿ 2 ಪಂದ್ಯಗಳಲ್ಲಿ ತನ್ನ ಮಾಜಿ ಆಟಗಾರರ ಅದ್ಭುತ ಪ್ರದರ್ಶನ ಸೋಲಿಗೆ ಪ್ರಮುಖ ಕಾರಣವಾಗಿದೆ. ಕೆಕೆಆರ್ ಮೊದಲ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ 3 ವಿಕೆಟ್ ಸೋಲು ಕಂಡಿತ್ತು.

ಆ ಪಂದ್ಯದಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಕೇವಲ 128ಕ್ಕೆ ಸರ್ವಪತನ ಕಂಡಿತ್ತು. ಈ ಪಂದ್ಯದಲ್ಲಿ ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡದಲ್ಲಿ ದಿನೇಶ್ ಕಾರ್ತಿಕ್ 20ನೇ ಓವರ್​ನಲ್ಲಿ ಬೌಂಡರಿ ಮತ್ತು ಸಿಕ್ಸರ್ ಸಿಡಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದರು.

2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 44 ರನ್​ಗಳ ಹೀನಾಯ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಕಳೆದ 2-3 ವರ್ಷಗಳಿಂದ ತಂಡದಲ್ಲಿದ್ದರೂ ಕಡೆಗಣನೆಗೆ ಒಳಗಾಗಿ ಈ ವರ್ಷ ಡೆಲ್ಲಿ ಸೇರಿದ್ದ ಕುಲದೀಪ್ ಯಾದವ್​ 4 ವಿಕೆಟ್ ಪಡೆದು ತಮ್ಮ ಮಾಜಿ ತಂಡಕ್ಕೆ ಆಘಾತಕಾರಿ ಸೋಲುಣಿಸಿದ್ದರು. ಡೆಲ್ಲಿ ನೀಡಿದ್ದ 216ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಕೆಕೆಆರ್ ಕುಲ್ದೀಪ್ ದಾಳಿಗೆ ಸಿಲುಕಿ 171ಕ್ಕೆ ಆಲೌಟ್ ಆಗಿತ್ತು.

ಇನ್ನು ಶುಕ್ರವಾರ ನಡೆದ ಸನ್​ರೈಸರ್ಸ್​ ವಿರುದ್ಧದ ಪಂದ್ಯದಲ್ಲಿ ಕಳೆದ ಬಾರಿ ಮೆಗಾ ಹರಾಜಿನಲ್ಲಿ ರಿಟೈನ್ ಮಾಡಿಕೊಳ್ಳದೆ ಕೈಬಿಟ್ಟಿದ್ದ ರಾಹುಲ್ ತ್ರಿಪಾಠಿಯ ಅಬ್ಬರಕ್ಕೆ ಮಂಕಾಗಿ ಸೋಲನುಭವಿಸಿತು. ಕೆಕೆಆರ್ ನೀಡಿದ 176 ರನ್​ಗಳ ಗುರಿಯನ್ನು ಹೈದರಾದ್​ 17.5 ಓವರ್​ಗಳಲ್ಲೇ ಚೇಸ್ ಮಾಡಿ ಮುಗಿಸಿತ್ತು. ತ್ರಿಪಾಠಿ ಕೇವಲ 37 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 71 ರನ್​ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇದನ್ನೂ ಓದಿ: ಇಂಗ್ಲೆಂಡ್​ ತಂಡದ ನಾಯಕತ್ವಕ್ಕೆ ಈತನೇ ಸೂಕ್ತ : ಆಲ್​ರೌಂಡರ್​ ಪರ ವಾನ್, ಹುಸೇನ್ ಬ್ಯಾಟಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.