ETV Bharat / sports

ನಾಯಕತ್ವಕ್ಕಾಗಿ ಹರಾಜಿನಲ್ಲಿ ಶ್ರೇಯಸ್​ ಅಯ್ಯರ್ ಖರೀದಿಸಲು ಎರಡು ತಂಡಗಳಿಂದ ಪೈಪೋಟಿ

author img

By

Published : Jan 10, 2022, 10:43 PM IST

2020ರಲ್ಲಿ ಶ್ರೇಯಸ್​ ಡೆಲ್ಲಿ ತಂಡವನ್ನು ಮುನ್ನಡೆಸಿ ಫೈನಲ್​ಗೆ ಕೊಂಡೊಯ್ದಿದ್ದರು. ಆದರೆ 2021ರ ಐಪಿಎಲ್​ಗೂ ಮುನ್ನ ಗಾಯಗೊಂಡಿದ್ದರಿಂದ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಡೆಲ್ಲಿ ತಂಡ ನಾಯಕನನ್ನಾಗಿ ನೇಮಿಸಿತ್ತು. ಶ್ರೇಯಸ್​ ಮರಳಿದ ಮೇಲು ಪಂತ್​ರನ್ನೇ ಫ್ರಾಂಚೈಸಿ ನಾಯಕನನ್ನಾಗಿ ಮುಂದುವರಿಸಿತ್ತು.

Shreyas Iyer
ಶ್ರೇಯಸ್​ ಅಯ್ಯರ್

ಕೋಲ್ಕತ್ತಾ: ನಾಯಕತ್ವದ ಅಕಾಂಕ್ಷೆಯಿಂದ ಡೆಲ್ಲಿ ಕ್ಯಾಪಿಟಲ್ಸ್​ ಬಿಟ್ಟು ಬಂದಿರುವ ಶ್ರೇಯಸ್​ ಅಯ್ಯರ್​​ ಅವರನ್ನು ಮುಂಬರುವ ಐಪಿಎಲ್ ಮೆಗಾ ಹರಾಜಿನಲ್ಲಿ ಖರೀದಿಸುವುದಕ್ಕೆ ಹಾಲಿ ರನ್ನರ್​ ಅಪ್​ ಕೋಲ್ಕತ್ತಾ ನೈಟ್​ ರೈಡರ್ಸ್ ಬಯಸಿದೆ ಮೂಲಗಳು ತಿಳಿಸಿವೆ.

2020ರಲ್ಲಿ ಶ್ರೇಯಸ್​ ಡೆಲ್ಲಿ ಮುನ್ನಡೆಸಿ ತಂಡವನ್ನು ಫೈನಲ್​ಗೆ ಕೊಂಡೊಯ್ದಿದ್ದರು. ಆದರೆ 2021ರ ಐಪಿಎಲ್​ಗೂ ಮುನ್ನ ಗಾಯಗೊಂಡಿದ್ದರಿಂದ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಡೆಲ್ಲಿ ತಂಡ ನಾಯಕನನ್ನಾಗಿ ನೇಮಿಸಿತ್ತು. ಶ್ರೇಯಸ್​ ಮರಳಿದ ಮೇಲು ಪಂತ್​ರನ್ನೇ ಫ್ರಾಂಚೈಸಿ ನಾಯಕನನ್ನಾಗಿ ಮುಂದುವರಿಸಿತ್ತು.

ಇತ್ತ ಕೆಕೆಆರ್​ 2021ರಲ್ಲಿ ನಾಯಕನಾಗಿದ್ದ ಇಯಾನ್ ಮಾರ್ಗನ್​ರನ್ನು ರಿಟೈನ್ ಮಾಡಿಕೊಂಡಿಲ್ಲ. ಫ್ರಾಂಚೈಸಿ ನೂತನ ನಾಯಕನಿಗಾಗಿ ಎದುರು ನೋಡುತ್ತಿದ್ದು, ಈಗಾಗಲೇ ತಂಡ ಮುನ್ನಡೆಸಿದ ಅನುಭವವಿರುವ ಶ್ರೇಯಸ್​ ಅಯ್ಯರ್​ ಅವರನ್ನು ನಾಯಕನ ಆಯ್ಕೆಗಾಗಿ ಖರಿದೀಸಲು ಬಯಸಿದೆ ಎಂದು ತಿಳಿದುಬಂದಿದೆ.

2020ರಲ್ಲಿ ಡೆಲ್ಲಿ ತಂಡದ ನಾಯಕನಾಗಿದ್ದ ಶ್ರೇಯಸ್​ ತಂಡವನ್ನು ಫೈನಲ್​ಗೆ ಕೊಂಡೊಯ್ಯುವುದರ ಜೊತೆಗೆ 519 ರನ್​ಗಳಿಸಿ 4ನೇ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದರು. 27 ವರ್ಷ ಮುಂಬೈ ಬ್ಯಾಟರ್​ ಐಪಿಎಲ್​ನಲ್ಲಿ 87 ಪಂದ್ಯಗಳಿಂದ 2375 ರನ್​ಗಳಿಸಿದ್ದಾರೆ. ಇದರಲ್ಲಿ 16 ಅರ್ಧಶತಕಗಳು ಸೇರಿವೆ.

ಮುಂಬೈ ತಂಡವೂ ಆಸಕ್ತಿ:

5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೂಡ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸುವುದಕ್ಕಾಗಿ ಯುವ ಆಟಗಾರನನ್ನು ಖರೀದಿಸುವ ಆಸಕ್ತಿ ಹೊಂದಿದೆ. ರೋಹಿತ್ ಶರ್ಮಾ ನಂತರ ತಂಡವನ್ನು ಮುನ್ನಡೆಸುವುದಕ್ಕಾಗಿ ಮುಂಬೈ ಸ್ಥಳೀಯ ಆಟಗಾರನ ಮೆಲೆ ಕಣ್ಣಿಟ್ಟಿದೆ ಎಂದು ತಿಳಿದುಬಂದಿದೆ.

ಕೆಕೆಆರ್​, ಮುಂಬೈ ಇಂಡಿಯನ್ಸ್ ಅಲ್ಲದೆ, ನಾಯಕನ ಹುಡುಕಾಟದಲ್ಲಿರುವ ಆರ್​ಸಿಬಿ ಕೂಡ ಹರಾಜಿನಲ್ಲಿ ಶ್ರೇಯಸ್​ ಅಯ್ಯರ್​ ಮೇಲೆ ಬಿಡ್​ ಮಾಡಿದರೂ ಆಶ್ಚರ್ಯವಿಲ್ಲ.

ಇದನ್ನೂ ಓದಿ:ಈ ಮೂವರು ಆಟಗಾರರ ಮೇಲೆ ಅಹ್ಮದಾಬಾದ್ ಕಣ್ಣು,​​ ಹಾರ್ದಿಕ್​ ಪಾಂಡ್ಯಗೆ ಕ್ಯಾಪ್ಟನ್​ ಪಟ್ಟ: ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.