ನವದೆಹಲಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೇವಲ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ದೇಶದ ಸೇನೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ನಿವೃತ್ತರಾದ ಲೆಫ್ಟಿನೆಂಟ್ ಜನರಲ್ ಕನ್ವಾಲ್ ಜೀತ್ ಸಿಂಗ್ ಧಿಲ್ಲೋನ್ ಅವರು ತಮ್ಮ ಸಂದರ್ಶನವೊಂದರಲ್ಲಿ ಆರ್ಟಿಕಲ್ 370 ರದ್ದು ಮಾಡಿದ ದಿನ ಧೋನಿ ಸೇನೆ ಜೊತೆಗಿದ್ದು, ಯಾವ ರೀತಿ ಸ್ಪಂದಿಸಿದ್ದರು ಎಂದು ಹೇಳಿಕೊಂಡಿದ್ದಾರೆ.
ಮೈದಾನದಲ್ಲಿ ಧೋನಿ ಬೌಂಡರಿ, ಸಿಕ್ಸರ್ ಬಾರಿಸುವುದನ್ನು ಜನ ಹಲವು ಬಾರಿ ನೋಡಿದ್ದಾರೆ. ಆದರೆ ಸೇನೆಯಲ್ಲಿಯೇ ಇದ್ದುಕೊಂಡು ದೇಶಕ್ಕಾಗಿ ತಮ್ಮ ಕರ್ತವ್ಯವನ್ನೂ ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ. 370ನೇ ವಿಧಿಯನ್ನು ತೆಗೆದ ದಿನ ಅಂದರೆ 5 ಆಗಸ್ಟ್ 2019ರ ದಿನ ಲೆಫ್ಟಿನೆಂಟ್ ಜನರಲ್ ಕನ್ವಾಲ್ ಜೀತ್ ಸಿಂಗ್ ಧಿಲ್ಲೋನ್ ಅವರು ಧೋನಿ ಜೊತೆಗಿದ್ದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಜಮ್ಮು-ಕಾಶ್ಮೀರದ ಇತಿಹಾಸ ಬದಲಿಸುವಲ್ಲಿ ಧೋನಿ ಪಾತ್ರ: 370 ನೇ ವಿಧಿಯ ಬಗ್ಗೆ ಮಾತುಕತೆಗಳು ತಮ್ಮ ಡ್ರಾಯಿಂಗ್ ರೂಮ್‌ನಲ್ಲಿ ನಡೆಯುತ್ತಿದ್ದವು. ಹೊರಗಡೆ ಬೇರೆ ಯಾರಿಗೂ ಇದರ ಬಗ್ಗೆ ತಿಳಿಯುವುದಿಲ್ಲ. 5 ಆಗಸ್ಟ್ 2019 ರಂದು ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಿತು. ಆ ಸಮಯದಲ್ಲಿ ಧೋನಿ ಸೇನಾ ಕಾರ್ಯಕ್ರಮದಲ್ಲಿಯೂ ನಿರತರಾಗಿದ್ದರು. 370 ನೇ ವಿಧಿಯನ್ನು ರದ್ದುಪಡಿಸಿದ ದಿನ, ಕೆಜೆಎಸ್ ಧಿಲ್ಲೋನ್ ಅವರು ತಮ್ಮ ಡ್ರಾಯಿಂಗ್ ರೂಮ್‌ನಲ್ಲಿ ಬೆಳಿಗ್ಗೆ ಧೋನಿ ಅವರೊಂದಿಗೆ ಚಹಾ ಸೇವಿಸಿದ್ದು ಮತ್ತು ಬಳಿಕ ಸಂಜೆ ಧೋನಿ ಜೊತೆ ಡಿನ್ನರ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ಕೂಲ್ ಆಗಿ ಕಾಣಬೇಕು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾಗಿ ಜನರಲ್ ಹೇಳಿದ್ದಾರೆ. ಗೌರವಾನ್ವಿತ 'ಲೆಫ್ಟಿನೆಂಟ್ ಕರ್ನಲ್' ಮಹೇಂದ್ರ ಸಿಂಗ್ ಧೋನಿಗೆ ಅವರ ಯೋಜನೆ ಬಗ್ಗೆ ಏನಾದರೂ ತಿಳಿದಿದೆಯೇ ಅಥವಾ ಇಲ್ಲವೇ ಎಂಬುದನ್ನು ಅವರು ತಮ್ಮ ಸಂದರ್ಶನದಲ್ಲಿ ಹೇಳಲ್ಲ. ಹೆಚ್ಚು ಅಧಿಕಾರಿಗಳೊಂದಿಗೆ ಸಭೆ ಮಾಡುವುದು ಓಡಾಡುವುದು ಗಮನಕ್ಕೆ ಬಂದರೆ ಇತರರಿಗೆ ಈ ಬಗ್ಗೆ ವಿಚಾರ ತಿಳಿಯುತ್ತದೆ ಎಂಬ ಕಾರಣಕ್ಕೆ ಧೋನಿಯೊಂದಿಗೆ ಸಮಯ ಕಳೆದೆ ಎಂದು ಹೇಳಿಕೊಂಡಿದ್ದಾರೆ.
2011 ರಲ್ಲಿ ಮಹೇಂದ್ರ ಸಿಂಗ್ ಧೋನಿಗೆ ಸೇನೆಯು 'ಲೆಫ್ಟಿನೆಂಟ್ ಕರ್ನಲ್' ಗೌರವವನ್ನು ನೀಡಿತು. ಎಂಎಸ್ ಧೋನಿ ಆಟಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿತ್ತು. ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್ ಅವರನ್ನು ಸಂದರ್ಶನದಲ್ಲಿ 370 ನೇ ವಿಧಿಯನ್ನು ತೆಗೆದುಹಾಕುವ ಮೊದಲು ಎಷ್ಟು ಜನರಿಗೆ ಅದರ ಬಗ್ಗೆ ತಿಳಿದಿತ್ತು ಎಂದು ಕೇಳಿದಾಗ, ಅರ್ಧದಷ್ಟು ಅಧಿಕಾರಿಗಳಿಗೆ ಮಾತ್ರ ತಿಳಿದಿತ್ತು ಎಂದು ಹೇಳಿದ್ದಾರೆ.
ಡ್ರಾಯಿಂಗ್ ರೂಮಿನಲ್ಲಿ 370ನೇ ವಿಧಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಏನೇ ಯೋಜನೆ ರೂಪಿಸಿದರೂ ಹೊರಗೆ ತಿಳಿಯದಂತೆ ನೋಡಿಕೊಳ್ಳಬೇಕಿತ್ತು. ರೂಮಿನಲ್ಲಿ ಆದ ಚರ್ಚೆಗಳು ಮತ್ತು ಯೋಜನೆಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದರ ಬಗ್ಗೆ ಸ್ವತಃ ಕಾಶ್ಮೀರದಲ್ಲಿ ಸ್ಥಳೀಯ ಸೇನಾ ಕಮಾಂಡ್ ಮುಖ್ಯಸ್ಥರಾಗಿದ್ದ ಕೆಜೆಎಸ್ ಧಿಲ್ಲೋನ್ ಅವರಿಗೂ ತಿಳಿದಿರಲಿಲ್ಲ. ಆದರೆ ಘಟನೆ ನಡೆದರೆ ಯಾವ ರೀತಿ ಕ್ರಮಕೈಗೊಳ್ಳಬೇಕು ಎಂಬ ಬಗ್ಗೆ ಯೋಜನೆ ರೂಪಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: 10 ವರ್ಷಗಳ ಐಸಿಸಿ ಕಪ್ ಬರ ನೀಗಿಸುತ್ತಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್?