ETV Bharat / sports

ಕರುಣ್ ನಾಯರ್ ಅಜೇಯ 152: ಜಮ್ಮು & ಕಾಶ್ಮೀರ ವಿರುದ್ಧ ಕರ್ನಾಟಕ ಮೊದಲ ದಿನ 268/8 - ರಣಜಿ ಟ್ರೋಪಿ 2021-22

3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ ಇಳಿದಿದ್ದ ಕರುಣ್ ನಾಯರ್​ ದಿನದ ಕೊನೆಯ ಓವರ್​ವರೆಗೂ ಏಕಾಂಗಿ ಹೋರಾಟ ನಡೆಸಿ 267 ಎಸೆತಗಳಲ್ಲಿ 21 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ ಅಜೇಯ 152 ರನ್​ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.

Karun unbeaten century
ಕರುಣ್ ನಾಯರ್ ಶತಕ
author img

By

Published : Feb 24, 2022, 5:40 PM IST

ಚೆನ್ನೈ: ಅನುಭವಿ ಬ್ಯಾಟರ್ ಕರುಣ್ ನಾಯರ್ ಅವರ ಏಕಾಂಗಿ ಹೋರಾಟದ ಶತಕದ ನೆರವಿನಿಂದ ಕರ್ನಾಟಕ ತಂಡ ಜಮ್ಮ ಮತ್ತು ಕಾಶ್ಮೀರ ವಿರುದ್ಧದ ರಣಜಿ ಪಂದ್ಯದಲ್ಲಿ ಮೊದಲ ದಿನ 8 ವಿಕೆಟ್​ ಕಳೆದುಕೊಂಡು 268 ರನ್​ಗಳಿಸಿದೆ. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ ಇಳಿದಿದ್ದ ಕರುಣ್ ನಾಯರ್​ ದಿನದ ಕೊನೆಯ ಓವರ್​ವರೆಗೂ ಏಕಾಂಗಿ ಹೋರಾಟ ನಡೆಸಿ 267 ಎಸೆತಗಳಲ್ಲಿ 21 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ ಅಜೇಯ 152 ರನ್​ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.

ಕರುಣ್ ಹೊರರುಪಡಿಸಿದರೆ ಮಯಾಂಕ್ ಗೈರಿನಲ್ಲಿ ಇನ್ನಿಂಗ್ಸ್​ ಆರಂಭಿಸಿದ್ದ ರವಿಕುಮಾರ್ ಸಮರ್ಥ್​ 45 ರನ್​ಗಳಿಸಿ ಕರ್ನಾಟಕ ಪರ 2ನೇ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಉಳಿದಂತೆ ದೇವದತ್ ಪಡಿಕ್ಕಲ್ 8 ರನ್, ಸಿದ್ಧಾರ್ಥ್​ ಕೆವಿ 16, ನಾಯಕ ಮನೀಶ್ ಪಾಂಡೆ 1, ಬಿಆರ್ ಶರತ್​ 11, ಶ್ರೇಯಸ್ ಗೋಪಾಲ್ 7, ಕೆ. ಗೌತಮ್​ 2. ರೋನಿತ್ ಮೋರೆ 23 ರನ್​ಗಳಿಸಿ ವಿಕೆಟ್​ ಒಪ್ಪಿಸಿದರು.

ಜಮ್ಮ-ಕಾಶ್ಮೀರ ಪರ ಉಮ್ರಾನ್ ಮಲಿಕ್ 35ಕ್ಕೆ2, ಪರ್ವೇಜ್ ರಸೂಲ್ 51ಕ್ಕೆ 2, ಮುಜ್ತಾಬಾ ಯೂಸುಫ್​ 44ಕ್ಕೆ2 , ಅಬ್ದುಲ್ ಸಮದ್​ 32ಕ್ಕೆ 1, ಆಕಿಬ್ ನಬಿ 52ಕ್ಕೆ 1 ವಿಕೆಟ್ ಪಡೆದರು.

ಇದನ್ನೂ ಓದಿ:ಆರ್​ಸಿಬಿ ನಾಯಕತ್ವ ತ್ಯಜಿಸಿದ್ದಕ್ಕೆ ಕೊನೆಗೂ ಕಾರಣ ಬಹಿರಂಗ ಪಡಿಸಿದ ವಿರಾಟ್​ ಕೊಹ್ಲಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.