ಶಾರ್ಜಾ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 2ನೇ ಕ್ವಾಲಿಫೈಯರ್ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಆಡಳಿತ ಮಂಡಳಿ ಛೀಮಾರಿ ಹಾಕಿ ಎಚ್ಚರಿಕೆ ನೀಡಿದೆ.
ಉಲ್ಲಂಘನೆಯ ನಿಖರ ಸ್ವರೂಪವನ್ನು ಐಪಿಎಲ್ ಮಂಡಳಿ ನಿರ್ಧಿಷ್ಟಪಡಿಸಿಲ್ಲವಾದರೂ ಕಾರ್ತಿಕ್, ಬುಧವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಹಿರಿಯ ಬ್ಯಾಟರ್ ಔಟಾದ ಹತಾಶೆಯಲ್ಲಿ ಸ್ಟಂಪ್ಗಳನ್ನು ಕೈಯಿಂದ ಹೊಡೆದು ಬೀಳಿಸಿದ್ದರು.
ಕೋಲ್ಕತ್ತಾ ನೈಟ್ ರೈಡರ್ಸ್ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ಶಾರ್ಜಾದಲ್ಲಿ 13ನೇ ಅಕ್ಟೋಬರ್, ಬುಧವಾರದಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತನ್ನ ತಂಡದ 2ನೇ ಕ್ವಾಲಿಫೈಯರ್ ವೇಳೆ ಮಾಡಿದ ಉಲ್ಲಂಘನೆಗಾಗಿ ಛೀಮಾರಿ ಹಾಕಲಾಗಿದೆ ಎಂದು ಐಪಿಎಲ್ ಬುಧವಾರ ರಾತ್ರಿ ಹೇಳಿಕೆ ಬಿಡುಗಡೆ ಮಾಡಿದೆ.
ಕಾರ್ತಿಕ್ ಐಪಿಎಲ್ ನೀತಿ ಸಂಹಿತೆಯ ಮೊದಲ ಹಂತದ ಉಲ್ಲಂಘನೆ (ಅಪರಾಧ 2.2) ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಅಪರಾಧಕ್ಕಾಗಿ ಮ್ಯಾಚ್ ರೆಫ್ರಿಗೆ ಶಿಕ್ಷೆ ನೀಡಲಿದ್ದಿ, ಇದಕ್ಕೆ ಮಂಡಳಿ ಸಂಪೂರ್ಣ ಬದ್ಧವಾಗಿರಲಿದೆ ಎಂದು ಹೇಳಿಕೆಯಲ್ಲಿ ಮಂಡಳಿ ತಿಳಿಸಿದೆ.
ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 135 ರನ್ಗಳಿಸಿದ್ದರು. ಈ ಮೊತ್ತವನ್ನು ಕೆಕೆಆರ್ ಇನ್ನೂ ಒಂದು ಎಸೆತ ಉಳಿದಿರುವಂತೆ ಟಾರ್ಗೆಟ್ ತಲುಪಿ ಫೈನಲ್ ಪ್ರವೇಶಿಸಿತು.
ಇದನ್ನು ಓದಿ:ಎಲ್ಲಾ ಮಾದರಿಗೂ ಸಲ್ಲುವ ಕೆ.ಎಲ್.ರಾಹುಲ್ರನ್ನು ಹೊಂದಿರುವುದು ಭಾರತದ ಅದೃಷ್ಟ: ಸಬಾ ಕರೀಮ್