ETV Bharat / sports

ಲಖನೌ ಸೂಪರ್​ ಜೈಂಟ್ಸ್​ನಲ್ಲಿ ಕೆಎಲ್​ ರಾಹುಲ್​ಗೆ ಸಾಥ್​ ನೀಡಲಿದ್ದಾರೆ ಮತ್ತಿಬ್ಬರು ಕನ್ನಡಿಗರು - ಕೆಎಲ್ ರಾಹುಲ್ ನಾಯಕತ್ವದ ಎಲ್​ಎಸ್​ಜಿ

ಶನಿವಾರ ನಡೆದ ಮೊದಲ ದಿನದ ಹರಾಜಿನಲ್ಲಿ ಮನೀಶ್ ಪಾಂಡೆಯನ್ನು ಲಖನೌ ಸೂಪರ್ ಜೈಂಟ್ಸ್​ 4.6 ಕೋಟಿ ರೂ ನೀಡಿ ಖರೀದಿಸಿತು. ಭಾನುವಾರ ಆಲ್​ರೌಂಡರ್​ ಕೃಷ್ಣಪ್ಪ ಗೌತಮ್​ ಅವರನ್ನು 90 ಲಕ್ಷಕ್ಕೆ ಖರೀದಿಸುವ ಮೂಲಕ ನಾಯಕನ ಜೊತೆಗೆ ಮತ್ತಿಬ್ಬರು ಕನ್ನಡಿಗರು ಆಡುವ ಅವಕಾಶ ಮಾಡಿಕೊಟ್ಟಿದೆ..

Karnataka players  Manish pandey and K Gowtham join KL Rahul's LSG
ಮನೀಶ್ ಪಾಂಡೆ, ಕೆಎಲ್ ರಾಹುಲ್ , ಲಖನೌ ಸೂಪರ್ ಜೈಂಟ್ಸ್​
author img

By

Published : Feb 13, 2022, 7:21 PM IST

ಬೆಂಗಳೂರು : ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವ ವಹಿಸಿಕೊಂಡಿರುವ ಲಖನೌ ಸೂಪರ್ ಜೈಂಟ್ಸ್​ ತಂಡಕ್ಕೆ ಕರ್ನಾಟಕದ ಮನೀಶ್​ ಪಾಂಡೆ ಮತ್ತು ಕೃಷ್ಣಪ್ಪ ಗೌತಮ್​ ಕೂಡ ಸೇರಿದ್ದಾರೆ. ಶನಿವಾರ ನಡೆದ ಮೊದಲ ದಿನದ ಹರಾಜಿನಲ್ಲಿ ಮನೀಶ್ ಪಾಂಡೆಯನ್ನು ಲಖನೌ ಸೂಪರ್ ಜೈಂಟ್ಸ್​ 4.6 ಕೋಟಿ ರೂ. ನೀಡಿ ಖರೀದಿಸಿತು.

ಭಾನುವಾರ ಆಲ್​ರೌಂಡರ್​ ಕೃಷ್ಣಪ್ಪ ಗೌತಮ್​ ಅವರನ್ನು 90 ಲಕ್ಷಕ್ಕೆ ಖರೀದಿಸುವ ಮೂಲಕ ನಾಯಕನ ಜೊತೆಗೆ ಮತ್ತಿಬ್ಬರು ಕನ್ನಡಿಗರು ಆಡುವ ಅವಕಾಶ ಮಾಡಿಕೊಟ್ಟಿದೆ.

ಮನೀಶ್ ಪಾಂಡೆ 2018ರಿಂದ 2021ರವರೆಗೆ 11 ಕೋಟಿ ರೂಪಾಯಿ ಪಡೆದು 4 ವರ್ಷ ಆಡಿದ್ದರು. ಕಳೆದ ಆವೃತ್ತಿಯಲ್ಲಿ ನಿಧಾನಗತಿಯ ಬ್ಯಾಟಿಂಗ್​ನಿಂದ ಟೀಕೆಗೆ ಗುರಿಯಾಗಿದ್ದ ಅವರನ್ನು ಹೈದರಾಬಾದ್​ ರಿಟೈನ್ ಮಾಡಿಕೊಂಡಿರಲಿಲ್ಲ. ಮೆಗಾ ಹರಾಜಿನಲ್ಲಿ 1 ಕೋಟಿ ಮೂಲ ಬೆಲೆಯಿದ್ದ ಅವರನ್ನು ಲಖನೌ ಸೂಪರ್ ಜೈಂಟ್ಸ್​, ಡೆಲ್ಲಿ ಮತ್ತು ಹೈದರಾಬಾದ್​ ತಂಡಗಳ ಜೊತೆಗೆ ಪೈಪೋಟಿ ನಡೆಸಿ ಖರೀದಿಸಿತು.

ಇನ್ನು ಆಲ್​ರೌಂಡರ್​ ಕೆ.ಗೌತಮ್​ ಹಿಂದಿನ 2018ರಿಂದ 2020ರವರೆಗೆ 6.2 ಕೋಟಿ ಮತ್ತು 2021ರ ಹರಾಜಿನಲ್ಲಿ 9.25 ಕೋಟಿ ರೂ. ಪಡೆದಿದ್ದರು. ಆದರೆ, ಈ ಬಾರಿ ಕೇವಲ 90 ಲಕ್ಷ ರೂ.ಗಳಿಗೆ ಲಖನೌ ಫ್ರಾಂಚೈಸಿ ಪಾಲಾದರು.

ಗೌತಮ್​ ಈ ಹಿಂದೆ 2020ರಲ್ಲಿ ಪಂಜಾಬ್​ ಕಿಂಗ್ಸ್​ನಲ್ಲಿ ರಾಹುಲ್ ಜೊತೆಯಾಗಿ ಆಡಿದ್ದರು. ಇದೀಗ ಮತ್ತೆ ರಾಹುಲ್ ಜೊತೆಗೆ ಸೇರಿಕೊಂಡಿದ್ದಾರೆ. ಲಖನೌ ಫ್ರಾಂಚೈಸಿ ಕೆಎಲ್ ರಾಹುಲ್​ರನ್ನು 17 ಕೋಟಿ ರೂ., ಮಾರ್ಕಸ್ ಸ್ಟೋಯ್ನಿಸ್​ರನ್ನು 9.2 ಕೋಟಿ ರೂ. ಮತ್ತು ಯುವ ಸ್ಪಿನ್ನರ್​ ರವಿ ಬಿಷ್ಣೋಯ್​ ಅವರನ್ನು 4 ಕೋಟಿ ರೂ.ಗಳಿಗೆ ರಿಟೈನ್ ಮಾಡಿಕೊಂಡಿದೆ.

ಲಖನೌ ಸೂಪರ್ ಜೈಂಟ್ಸ್​ ಖರೀದಿಸಿರುವ ಆಟಗಾರರ ಪಟ್ಟಿ ಮತ್ತು ಹಣ

  • ಕ್ವಿಂಟನ್ ಡಿ ಕಾಕ್ - ವಿದೇಶಿ ವಿಕೆಟ್ ಕೀಪರ್ ₹6,75,00,000
  • ಮನೀಶ್ ಪಾಂಡೆ- ಭಾರತೀಯ ಬ್ಯಾಟ್ಸ್‌ಮನ್ ₹4,60,00,000
  • ಜೇಸನ್ ಹೋಲ್ಡರ್- ವಿದೇಶಿ ಆಲ್ ರೌಂಡರ್ ₹8,75,00,000
  • ದೀಪಕ್ ಹೂಡಾ- ಭಾರತೀಯ ಆಲ್ ರೌಂಡರ್ ₹5,75,00,000
  • ಕೃನಾಲ್ ಪಾಂಡ್ಯ -ಭಾರತೀಯ ಆಲ್ ರೌಂಡರ್ ₹8,25,00,000
  • ಮಾರ್ಕ್ ವುಡ್- ವಿದೇಶಿ ಬೌಲರ್ ₹7,50,00,000
  • ಅವೇಶ್ ಖಾನ್- ಭಾರತೀಯ ಬೌಲರ್ ₹10,00,00,000
  • ಅಂಕಿತ್ ಸಿಂಗ್ ರಜ್‌ಪೂತ್- ಭಾರತೀಯ ಬೌಲರ್ ₹50,00,000
  • ಕೆ.ಗೌತಮ್- ಭಾರತೀಯ ಆಲ್ ರೌಂಡರ್ ₹90,00,000
  • ದುಷ್ಮಂತ ಚಮೀರ- ವಿದೇಶಿ ಬೌಲರ್ ₹2,00,00,000
  • ಶಹಬಾಜ್ ನದೀಮ್ -ಭಾರತೀಯ ಬೌಲರ್ ₹50,00,000
  • ಮನನ್ ವೋಹ್ರಾ- ಭಾರತೀಯ ಬ್ಯಾಟ್ಸ್‌ಮನ್ ₹20,00,000
  • ಮೊಹ್ಸಿನ್ ಖಾನ್ -ಭಾರತೀಯ ಬೌಲರ್ ₹20,00,000
  • ಆಯುಷ್ ಬದೋನಿ- ಭಾರತೀಯ ಆಲ್ ರೌಂಡರ್ ₹20,00,000
  • ಕೈಲ್ ಮೇಯರ್ಸ್- ವಿದೇಶಿ ಆಲ್ ರೌಂಡರ್ ₹50,00,000
  • ಕರಣ್ ಶರ್ಮಾ- ಭಾರತೀಯ ಆಲ್ ರೌಂಡರ್ ₹20,00,000

ಇದನ್ನೂ ಓದಿ:2018ರಲ್ಲಿ 6.2 ಕೋಟಿ, 2021ರಲ್ಲಿ 9.27ಕೋಟಿ: ಈ ಬಾರಿ 90 ಲಕ್ಷಕ್ಕೆ ಮಾರಾಟವಾದ ಕನ್ನಡಿಗ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.