ದುಬೈ : ಜುಲೈನಲ್ಲಿ ನಡೆದಿದ್ದ ಶ್ರೀಲಂಕಾ ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಕನ್ನಡಿಗ ಯುವ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಭಾರತ ತಂಡಕ್ಕಾಗಿ ಆಡುವಾಗ ಕನ್ನಡಿಗರೆಲ್ಲಾ ಕನ್ನಡದಲ್ಲೇ ಮಾತನಾಡುತ್ತೇವೆ ಎಂದು ಆರ್ಸಿಬಿ ಭಾನುವಾರ ಬಿಡುಗಡೆ ಮಾಡಿರುವ ಬೋಲ್ಡ್ ಡೈರೀಸ್ ಚಿಟ್ಚಾಟ್ನಲ್ಲಿ ಹೇಳಿಕೊಂಡಿದ್ದಾರೆ.
ಕ್ರಿಕೆಟ್ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಬಗ್ಗೆ ಮತ್ತು ತಮ್ಮ ಕುಟುಂಬ ತಮಗೆ ನೀಡುತ್ತಿರುವ ಬೆಂಬಲದ ಬಗ್ಗೆ ಆರ್ಸಿಬಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ನನ್ನನ್ನು ಕ್ರಿಕೆಟಿಗನನ್ನಾಗಿಯೇ ಮಾಡಬೇಕೆಂದು ನಮ್ಮ ಪೋಷಕರು ಮಹತ್ವದ ಮತ್ತು ಧೈರ್ಯದ ನಿರ್ಧಾರ ತೆಗೆದುಕೊಂಡಿದ್ದಾರೆ. ಹೈದರಾಬಾದ್ನಿಂದ ಬೆಂಗಳೂರಿಗೆ ಮನೆಯನ್ನು ಬದಲಾಯಿಸಿದ್ದಾರೆ ಎಂದು ತಮಗೆ ಪೋಷಕರು ನೀಡಿದ ಪ್ರೋತ್ಸಾಹವನ್ನು ಹೇಳಿಕೊಂಡಿದ್ದಾರೆ.
-
Bold Diaries: Devdutt Padikkal’s Kannada Chat
— Royal Challengers Bangalore (@RCBTweets) September 26, 2021 " class="align-text-top noRightClick twitterSection" data="
🎙️ @devdpd07 : "ನಾವು ಕನ್ನಡಿಗರೆಲ್ಲ, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲಿಯೇ ಮಾತಾಡೋದು - ಗೌತಮ್ ಇರಲಿ ರಾಹುಲ್ ಸಾರ್ ಇರಲಿ, ನಾವೆಲ್ಲರೂ ಕನ್ನಡದಲ್ಲಿಯೇ ಮಾತನಾಡುತ್ತೇವೆ."#PlayBold #WeAreChallengers #ನಮ್ಮRCB #IPL2021 pic.twitter.com/8GFQOvnPzB
">Bold Diaries: Devdutt Padikkal’s Kannada Chat
— Royal Challengers Bangalore (@RCBTweets) September 26, 2021
🎙️ @devdpd07 : "ನಾವು ಕನ್ನಡಿಗರೆಲ್ಲ, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲಿಯೇ ಮಾತಾಡೋದು - ಗೌತಮ್ ಇರಲಿ ರಾಹುಲ್ ಸಾರ್ ಇರಲಿ, ನಾವೆಲ್ಲರೂ ಕನ್ನಡದಲ್ಲಿಯೇ ಮಾತನಾಡುತ್ತೇವೆ."#PlayBold #WeAreChallengers #ನಮ್ಮRCB #IPL2021 pic.twitter.com/8GFQOvnPzBBold Diaries: Devdutt Padikkal’s Kannada Chat
— Royal Challengers Bangalore (@RCBTweets) September 26, 2021
🎙️ @devdpd07 : "ನಾವು ಕನ್ನಡಿಗರೆಲ್ಲ, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲಿಯೇ ಮಾತಾಡೋದು - ಗೌತಮ್ ಇರಲಿ ರಾಹುಲ್ ಸಾರ್ ಇರಲಿ, ನಾವೆಲ್ಲರೂ ಕನ್ನಡದಲ್ಲಿಯೇ ಮಾತನಾಡುತ್ತೇವೆ."#PlayBold #WeAreChallengers #ನಮ್ಮRCB #IPL2021 pic.twitter.com/8GFQOvnPzB
ಕನ್ನಡಿಗರಲ್ಲರು ಕನ್ನಡದಲ್ಲೇ ಮಾತಾಡ್ತೀವಿ
ಭಾರತ ತಂಡದಲ್ಲಿ ಪದಾರ್ಪಣೆ ಮಾಡಿದ್ದ ಬಗ್ಗೆ ಮಾತನಾಡಿದ ಪಡಿಕ್ಕಲ್ ಅದೊಂದು ಅತ್ಯಂತ ಗೌರವಯುತ ಕ್ಷಣವಾಗಿತ್ತು ಎಂದು ಹೇಳಿದ್ದಾರೆ. ಅಂತಹ ಕ್ಷಣ ಯಾರಿಗೂ ಬೇಗ ಸಿಗಲ್ಲ, ನನಗೆ ಸಿಕ್ಕಿತ್ತು, ಕೋಚ್ಗಳೊಂದಿಗೆ, ಸೀನಿಯರ್ಗಳೊಂದಿಗೆ ಉತ್ತಮವಾಗಿ ಚರ್ಚೆ ಮಾಡಿದ್ದೆ, ಹೊಸ ಸ್ನೇಹಿತರು ಸಿಕ್ಕರು ಎಂದು ತಿಳಿಸಿದರು.
ಕನ್ನಡಿಗರು ಹೇಗಿರುತ್ತೀರಿ ಎಂದು ಕೇಳಿದ್ದಕ್ಕೆ, ದ್ರಾವಿಡ್ ಸರ್, ಗೌತಮ್ ಇರಲಿ ನಾವೆಲ್ಲಾ ಕನ್ನಡಿಗರು ಒಟ್ಟಾಗಿದ್ದರೆ ಕನ್ನಡದಲ್ಲೇ ಮಾತನಾಡೋದು. ಬೇರೆ ರಾಜ್ಯದವರಿದ್ದರೆ ಮಾತ್ರ ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಮಾತನಾಡುತ್ತೇವೆ. ನಾವಿಬ್ಬರೇ ಇದ್ದಾಗ ಕನ್ನಡದಲ್ಲೇ ಮಾತನಾಡುತ್ತೇವೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಚಹಾಲ್ರನ್ನು ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳಿ: ಅಭಿಮಾನಿಗಳಿಂದ ಬಿಸಿಸಿಐಗೆ ಮನವಿ