ETV Bharat / sports

'ಸೆಮೀಸ್​ ಹಂತದಲ್ಲಿ ಎಲ್ಲವೂ ಮೊದಲಿನಿಂದ ಆರಂಭವಾದಂತೆ, ಇಲ್ಲಿ ಏನು ಬೇಕಾದರೂ ಆಗಬಹುದು': ಕೇನ್ ವಿಲಿಯಮ್ಸನ್ - ETV Bharath Karnataka

ಏಕದಿನ ಕ್ರಿಕೆಟ್​ ಚಾಂಪಿಯನ್​ ಆಗಲು ನಾಲ್ಕು ತಂಡಗಳಿಗೆ ಕೇವಲ ಎರಡು ಹೆಜ್ಜೆ ಬಾಕಿ ಇದೆ. ಸೆಮೀಸ್​ ಮತ್ತು ಫೈನಲ್​ನಲ್ಲಿ ಗೆದ್ದ ತಂಡ 2023ರ ವಿಶ್ವಕಪ್​ ಎತ್ತಿ ಹಿಡಿಯಲಿದೆ. ಮೊದಲ ಸೆಮೀಸ್​ ಫೈಟ್​ಗೆ ಭಾರತ ಮತ್ತು ನ್ಯೂಜಿಲೆಂಡ್​ ಸಿದ್ಧವಾಗಿದ್ದು, ಮುಂಬೈನ ವಾಂಖೆಡೆ ಮೈದಾನದಲ್ಲಿ ನಾಳೆ (ನ.16) ಪಂದ್ಯ ನಡೆಯಲಿದೆ.

Kane Williamson
Kane Williamson
author img

By ETV Bharat Karnataka Team

Published : Nov 14, 2023, 6:46 PM IST

ಮುಂಬೈ (ಮಹಾರಾಷ್ಟ್ರ): 2019ರ ವಿಶ್ವಕಪ್​ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್​ ಸೆಮೀಸ್​ನಲ್ಲಿ ಮುಖಾಮುಖಿ ಆಗಿತ್ತು. ಅಂದು ಟೀಮ್​ ಇಂಡಿಯಾ 18 ರನ್​ಗಳಿಂದ ಕಿವೀಸ್​ ವಿರುದ್ಧ ಸೋಲು ಕಂಡಿತ್ತು. ನಾಲ್ಕು ವರ್ಷಗಳ ನಂತರ ಉಭಯ ತಂಡಗಳು ಅದೇ ಹಂತದಲ್ಲಿ ಮುಖಾಮಖಿ ಆಗುತ್ತಿದ್ದು, ಕುತೂಹಲ ಹೆಚ್ಚಾಗಿದೆ. ಪಂದ್ಯಕ್ಕೂ ಮುನ್ನಾದಿನ ಮಾತನಾಡಿದ ಕಿವೀಸ್ ನಾಯಕ ಕೇನ್​ ವಿಲಿಯಮ್ಸನ್​ "ಲೀಗ್​ ವರೆಗೆ ಒಂದು ಲೆಕ್ಕಾಚಾರ, ಸೆಮೀಸ್ ಹಂತದಲ್ಲಿ ಎಲ್ಲ ಹೊಸತು" ಎಂದು ಹೇಳಿದ್ದಾರೆ.

"ಇದು ಕಠಿಣ ಸವಾಲಾಗಲಿದೆ. ಭಾರತ ಉತ್ತಮವಾಗಿ ಆಡುತ್ತಿರುವ ತಂಡವಾಗಿದೆ. ಆದರೆ, ಫೈನಲ್​​​​​ ಸಮಯ ಬರುತ್ತದೆ ಎಂದು ನಮಗೆ ತಿಳಿದಿದೆ. ಹೀಗಾಗಿ ಎಲ್ಲವೂ ಮತ್ತೆ ಆರಂಭವಾಗುತ್ತದೆ ಹಾಗೇ ಪ್ರತಿ ಪಂದ್ಯವೂ ಆ ದಿನಕ್ಕೆ ಅನುಗುಣವಾಗಿರುತ್ತದೆ. ಇಲ್ಲಿ ಯಾರು ಯಾರನ್ನು ಬೇಕಾದರೂ ಮಣಿಸಬಹುದು. ಎರಡೂ ಕಡೆಯ ಗುಣಮಟ್ಟ ಮತ್ತು ಪರಿಸ್ಥಿತಿಗಳು ಬದಲಾಗಿರುತ್ತದೆ" ಎಂದು ಕೇನ್​ ಹೇಳಿದ್ದಾರೆ.

ಗಾಯದಿಂದ ಮರಳಿ ಮತ್ತೆ ಗಾಯಕ್ಕೆ ತುತ್ತಾದ ವಿಲಿಯಮ್ಸನ್​ ಭಾರತದ ವಿಶ್ವಕಪ್​ ಪಯಣ ಸ್ಮರಣೀಯ ಎಂದು ಹೇಳಿದ್ದಾರೆ. "ಖಚಿತವಾಗಿ ಒಂದು ಆಸಕ್ತಿದಾಯಕ ಪ್ರಯಾಣ. ಗಾಯದಿಂದ ಮರಳಿ ಮತ್ತೆ ಹೆಬ್ಬೆರಳು ಮುರಿದುಕೊಂಡೆ, ಇದು ತಮಾಷೆ ಅಲ್ಲ. ಎಲ್ಲಾ ನೆನಪಿನಲ್ಲಿ ಉಳಿಯುವಂತಹದ್ದು. ಹೀಗಾಗಿ ತಂಡವಾಗಿ ಹಾಗೇ ವೈಯಕ್ತಿಕವಾಗಿಯೂ ವಿಶೇಷವಾಗಿದೆ. ವಿಶ್ವ ಮಟ್ಟದ ಟೂರ್ನಮೆಂಟ್​​​​ನಲ್ಲಿ​ ಭಾರತ ಉತ್ತಮವಾಗಿ ಆಯೋಜಿಸಿದೆ" ಎಂದರು.

ಭಾರತ ಸಮತೋಲನ ಕಳೆದುಕೊಂಡಿದೆ: ಟೀಮ್​ ಇಂಡಿಯಾ ಹಾರ್ದಿಕ್​ ಪಾಂಡ್ಯ ಹೊರಗುಳಿದ ನಂತರ ಸಮತೋಲನ ಕಳೆದುಕೊಂಡಂತೆ ಕಾಣುತ್ತದೆ ಎಂದು ಕೇನ್​ ಹೇಳಿದ್ದಾರೆ."ಪ್ರತಿ ತಂಡವು ಸ್ವಲ್ಪ ವಿಭಿನ್ನ ಸಮತೋಲನವನ್ನು ಹೊಂದಿದ್ದು, ಭಾರತ ಹಾರ್ದಿಕ್ ಪಾಂಡ್ಯ ಮೇಲೆ ಅವಲಂಬಿತವಾಗಿತ್ತು, ಹೀಗಾಗಿ ಅವರ ಸಮತೋಲನವು ಸ್ವಲ್ಪಮಟ್ಟಿಗೆ ಬದಲಾಗಿದೆ. ಆದರೆ, ಅವರ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ತಂಡ ಉತ್ತಮವಾಗಿ ಹೊಂದಿಕೊಂಡಿದೆ. ನಮ್ಮ ತಂಡವೂ ಲೀಗ್​ ಹಂತದಲ್ಲಿ ಉತ್ತಮವಾಗಿ ಆಡಿದೆ" ಎಂದಿದ್ದಾರೆ.

"ನೀವು ಫೈನಲ್‌ ಹಂತಕ್ಕೆ ಬಂದಾಗ ಪಂದ್ಯಗಳು ಹೊಸದಾಗಿ ಆರಂಭವಾದಂತೆ. 6 ವಾರಗಳ ಕಾಲ ರೌಂಡ್​ - ರಾಬಿನ್​ ಸುತ್ತಿನಲ್ಲಿ ಕ್ರಿಕೆಟ್​ ಮೇಲೆಯೇ ಹೆಚ್ಚು ಕೇಂದ್ರಕರಿಸಿದ್ದೇವೆ. ಒಂದೊಂದು ಮುಖಾಮುಖಿಯೂ ಕಷ್ಟವಾಗಿತ್ತು. ಎದುರಾಗುವ ಪರಿಸ್ಥಿತಿ ಮತ್ತು ತಂಡಗಳ ಮೇಲೆ ಆಟ ನಿರ್ಣಯ ಆಗುತ್ತದೆ. ಪ್ರತಿ ಪಂದ್ಯದ ದಿನವೂ ವಿಭಿನ್ನವಾಗಿರುತ್ತದೆ" ಎಂದು ಅವರು ಹೇಳಿದ್ದಾರೆ.

"ಈ ಆಟವು ಸ್ವಲ್ಪ ವಿಭಿನ್ನವಾಗಿರುತ್ತದೆ. ಪಂದ್ಯ ಒಂದು ದಿನ ಅಥವಾ ಎರಡು ದಿನ ನಡೆಯಬಹುದು ಎಲ್ಲ ಹವಾಮಾನದ ಮೇಲೆ ನಿಂತಿದೆ. ಉಭಯ ತಂಡಗಳು ಈ ಹಂತಕ್ಕೆ ಶ್ರಮ ಪಟ್ಟು ಬಂದಿವೆ. ಸುದೀರ್ಘ ಅವಧಿಯಲ್ಲಿ ತಂಡಗಳು ಕ್ರಿಕೆಟ್​ ಆಡಿಕೊಂಡು ಬಂದಿದೆ. ಇನ್ನಷ್ಟು ಉತ್ತಮವಾದ ಕ್ರಿಕೆಟ್​ ಆಡುವುದು ನಮ್ಮ ಮುಂದಿರುವ ಸವಾಲಾಗಿದೆ" ಎಂದಿದ್ದಾರೆ.

ಪ್ರೇಕ್ಷಕರ ಒಲವು ಹೆಚ್ಚಿರುವ ಕಡೆ ಪಂದ್ಯಗಳು ವಾಲುತ್ತಿದೆ ಎಂದು ಕೇನ್​ ಟಿ-20 ಕ್ರಿಕೆಟ್ ಮಾನ್ಯತೆ ಬಗ್ಗೆ ಹೇಳಿಕೊಂಡಿದ್ದಾರೆ. "ಭವಿಷ್ಯವನ್ನು ಊಹಿಸುವುದು ಕಷ್ಟ, ಆದರೆ, ನಾವು ವಿಶ್ವ ಮಟ್ಟದಲ್ಲಿ ಉಭಯ ದೇಶಗಳ ನಡುವೆ ನಡೆಯುವ ಪಂದ್ಯವಳಿಯಲ್ಲೂ ಈಗ ಟಿ-20 ಕ್ರಿಕೆಟ್​ಗೆ ಹೆಚ್ಚು ಆದ್ಯತೆ ಕೊಡುತ್ತಿದ್ದೇವೆ. ಇದು ಪ್ರೇಕ್ಷಕರು ಯಾವುದನ್ನು ಹೆಚ್ಚು ಇಷ್ಟ ಪಡುತ್ತಾರೆ ಎಂಬುದರ ಮೇಲೆ ಇರುತ್ತದೆ. ಅಂತಿಮವಾಗಿ ನೋಡುಗನ ಇಚ್ಛೆ ಏನು ಅದನ್ನೇ ಮಾಡಬೇಕಲ್ಲವೇ ಎಂದಿದ್ದಾರೆ.

ಇದನ್ನೂ ಓದಿ: ಭಾರತ vs ನ್ಯೂಜಿಲೆಂಡ್​ ಸೆಮೀಸ್​ ಫೈಟ್​: ನಕಲಿ ಟಿಕೆಟ್​ ಬಗ್ಗೆ ಇರಲಿ ಎಚ್ಚರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.