ಹೈದರಾಬಾದ್: ಟೀಂ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಮನೆಗೆ ಹೊಸ ಸದಸ್ಯನ ಆಗಮನವಾಗುತ್ತಿದೆ.
ಕೃಷ್ಣಪ್ಪ ಗೌತಮ್ ಅವರ ಪತ್ನಿ ಅರ್ಚನಾ ಸುಂದರ್ ಗರ್ಭಿಣಿಯಾಗಿದ್ದು, 2022ರ ಜನವರಿ ವೇಳೆಗೆ ಮಗುವಿನ ಆಗಮನದ ವಿಚಾರ ಹಂಚಿಕೊಂಡಿದ್ದಾರೆ. ಈ ಖುಷಿ ಸಂಗತಿಯನ್ನು ತಿಳಿಸುತ್ತಿದ್ದಂತೆ ಅನೇಕ ಕ್ರಿಕೆಟರ್ಸ್ ದಂಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಗೌತಮ್- ಅರ್ಚನಾ ಫೋಟೋ ಶೇರ್ ಮಾಡಿ, ಶುಭಾಶಯ ತಿಳಿಸಿದೆ. ಈ ಜೋಡಿ 2019ರ ಡಿಸೆಂಬರ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ಮಿನಿ ಹರಾಜಿನಲ್ಲಿ ಕೆ.ಗೌತಮ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 9.25 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ ಈಗಾಗಲೇ ನಡೆದಿರುವ ಮೊದಲಾರ್ಧದ ಟೂರ್ನಿಯಲ್ಲಿ ಗೌತಮ್ ಯಾವುದೇ ಪಂದ್ಯಗಳನ್ನಾಡಿಲ್ಲ.
ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟೂರ್ನಿಗೋಸ್ಕರ ಕರ್ನಾಟಕ ಕ್ರಿಕೆಟ್ ಮಂಡಳಿ 35 ಆಟಗಾರರ ಪಟ್ಟಿ ರಿಲೀಸ್ ಮಾಡಿದೆ. ಈ ಪಟ್ಟಿಯಲ್ಲಿ ಕೆ. ಗೌತಮ್ ಅವಕಾಶ ಪಡೆದುಕೊಂಡಿದ್ದಾರೆ.