ಇಂಗ್ಲೆಂಡ್: ಐಸಿಸಿ ಟಿ20 ವಿಶ್ವಕಪ್ ಆರಂಭಗೊಳ್ಳಲು ಕೇವಲ ಕೆಲ ದಿನಗಳು ಮಾತ್ರ ಬಾಕಿ ಉಳಿದಿರುವ ಬೆನ್ನಲ್ಲೇ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಸ್ಫೋಟಕ ಬ್ಯಾಟರ್ ಜಾನಿ ಬೈರ್ಸ್ಟೋವ್ ಮಹತ್ವದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಗಾಲ್ಫ್ ಆಡ್ತಿದ್ದ ವೇಳೆ ಗಾಯಗೊಂಡಿರುವ ಅವರು, ಮುಂಬರುವ ಟಿ20 ವಿಶ್ವಕಪ್ನಿಂದ ಹೊರಬಿದ್ದಿದ್ದಾರೆಂದು ಕ್ರಿಕೆಟ್ ಇಂಗ್ಲೆಂಡ್ ಮಾಹಿತಿ ನೀಡಿದೆ. ಇಂಗ್ಲೆಂಡ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಜಾನಿ ಬೈರ್ಸ್ಟೋವ್, ಸ್ಫೋಟಕ ಬ್ಯಾಟಿಂಗ್ನಿಂದ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದ್ದಾರೆ.
ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆಯೋಜನೆಗೊಳ್ಳಲಿದ್ದು, ಈ ಟೂರ್ನಿಯಿಂದ ಬೈರ್ಸ್ಟೋವ್ ಹೊರಗುಳಿಯಲಿದ್ದಾರೆ. ಮುಂದಿನ ವಾರ ವೈದ್ಯರನ್ನು ಭೇಟಿಯಾಗಲಿರುವ ಕ್ರಿಕೆಟರ್ ತಪಾಸಣೆಗೊಳಗಾಗಲಿದ್ದಾರೆ. ಗಾಲ್ಫ್ ಆಡ್ತಿದ್ದ ವೇಳೆ ಜಾರಿ ಬಿದ್ದಿರುವ ಕಾರಣ ಅವರ ಕಾಲಿಗೆ ಗಾಯವಾಗಿದ್ದು, ಆದಷ್ಟು ಬೇಗ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದೇನೆ ಎಂದಿದ್ದಾರೆ.
-
Squad 🙌 #T20WorldCup 🏏 🌏 🏆 pic.twitter.com/k539Gzd5Ka
— England Cricket (@englandcricket) September 2, 2022 " class="align-text-top noRightClick twitterSection" data="
">Squad 🙌 #T20WorldCup 🏏 🌏 🏆 pic.twitter.com/k539Gzd5Ka
— England Cricket (@englandcricket) September 2, 2022Squad 🙌 #T20WorldCup 🏏 🌏 🏆 pic.twitter.com/k539Gzd5Ka
— England Cricket (@englandcricket) September 2, 2022
ದಕ್ಷಿಣ ಆಫ್ರಿಕಾ ವಿರುದ್ಧ ಸದ್ಯ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದ ಬೈರ್ಸ್ಟೋವ್, 3ನೇ ಪಂದ್ಯಕ್ಕಾಗಿ ತಯಾರಾಗುತ್ತಿದ್ದರು. ಇದರ ಬೆನ್ನಲ್ಲೇ ಗಾಲ್ಫ್ ಕೋರ್ಸ್ನಲ್ಲಿ ಆಟವಾಡ್ತಿದ್ದ ವೇಳೆ ಗಾಯಕ್ಕೆ ತುತ್ತಾಗಿದ್ದಾರೆ.ವಿಶ್ವಕಪ್ ಟೂರ್ನಾಮೆಂಟ್ಗೋಸ್ಕರ ಇಂಗ್ಲೆಂಡ್ ಈಗಾಗಲೇ ತಂಡ ಪ್ರಕಟಿಸಿದ್ದು, ಸ್ಟಾರ್ ಓಪನರ್ ಜೇಸನ್ ರಾಯ್ಗೆ ಕೈಬಿಡಲಾಗಿದೆ.
ಇಂಗ್ಲೆಂಡ್ ತಂಡ ಇಂತಿದೆ: ಜೋಸ್ ಬಟ್ಲರ್(ಕ್ಯಾಪ್ಟನ್), ಮೊಯಿನ್ ಅಲಿ(ಉಪನಾಯಕ), ಹೆನ್ರಿ ಬ್ರೊಕ್ಸ್, ಸ್ಯಾಮ್ ಕರ್ರನ್, ಕ್ರಿಸ್ ಜೋರ್ಡನ್, ಲಿವಿಗ್ಸ್ಟೋನ್, ಡೇವಿಡ್ ಮಲನ್, ಆದಿಲ್ ರಾಶೀದ್, ಪಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ಟೊಪ್ಲೆ, ಡೆವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್
ಇನ್ನೂ ಆಸ್ಟ್ರೇಲಿಯಾ ತಂಡ ಕೂಡ ಪ್ರಕಟಗೊಂಡಿದ್ದು, ಬಲಿಷ್ಠ ಆಟಗಾರರಿಗೆ ಮಣೆ ಹಾಕಲಾಗಿದೆ. ಮುಂದಿನ ಕೆಲ ದಿನಗಳಲ್ಲಿ ಭಾರತ ತಂಡ ಸಹ ಪ್ರಕಟಗೊಳ್ಳುವ ಸಾಧ್ಯತೆ ಇದೆ.