ETV Bharat / sports

ಕೊಹ್ಲಿ ಅಲ್ಲ.. ಈತ ಕ್ರಿಕೆಟ್ ಜಗತ್ತಿನಲ್ಲಿ​ ಅತಿ ಹೆಚ್ಚು ವೇತನ ಪಡೆಯುತ್ತಿರುವ ಕ್ಯಾಪ್ಟನ್​

author img

By

Published : May 23, 2021, 6:57 PM IST

ವರದಿಯ ಪ್ರಕಾರ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಪ್ರತಿ ವರ್ಷ 8.97 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ಆಟಗಾರ ಮತ್ತು ಟೆಸ್ಟ್​ ತಂಡದಲ್ಲಿ ನಾಯಕನಾಗಿರುವ ರೂಟ್ ವಾರ್ಷಿಕವಾಗಿ ಇಷ್ಟು ಮೊತ್ತವನ್ನು ಪಡೆಯುತ್ತಿದ್ದಾರೆ.

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಮುಂಬೈ: ಪ್ರಸ್ತುತ ಕ್ರಿಕೆಟ್​ ಜಗತ್ತಿನಲ್ಲಿ ಹೆಚ್ಚು ಸಂಪಾದಿಸುತ್ತಿರುವ ಕ್ರಿಕೆಟಿಗನಾಗಿರುವ ವಿರಾಟ್ ಕೊಹ್ಲಿ ವೇತನ ವಿಷಯದಲ್ಲಿ ಬಂದರೆ ಎರಡನೇ ಸ್ಥಾನದಲ್ಲಿದ್ದಾರೆ. ಇದು ಆಶ್ಚರ್ಯವೆನಿಸಿದರೂ ಸತ್ಯ ಸಂಗತಿಯಾಗಿದೆ.

ವಿಯಾನ್ (WION) ವರದಿಯ ಪ್ರಕಾರ ವಾರ್ಷಿಕವಾಗಿ ಕ್ರಿಕೆಟ್​ ಮಂಡಳಿಯಿಂದ ಹೆಚ್ಚು ವೇತನ ಪಡೆಯುವ ನಾಯಕರ ಪಟ್ಟಿಯಲ್ಲಿ ಕೊಹ್ಲಿ 2ನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಮೊದಲ ಸ್ಥಾನದಲ್ಲಿದ್ದಾರೆ.

ವರದಿಯ ಪ್ರಕಾರ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಪ್ರತಿ ವರ್ಷ 8.97 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ಆಟಗಾರ ಮತ್ತು ಟೆಸ್ಟ್​ ತಂಡದಲ್ಲಿ ನಾಯಕನಾಗಿರುವ ರೂಟ್ ವಾರ್ಷಿಕವಾಗಿ ಇಷ್ಟು ಮೊತ್ತವನ್ನು ಪಡೆಯುತ್ತಿದ್ದಾರೆ.

ಇನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೂರು ಮಾದರಿಯಲ್ಲಿದ್ದು, ಮೂರು ಮಾದರಿಯ ತಂಡಕ್ಕೂ ನಾಯಕನಾಗಿದ್ದರೂ ಸಹಾ 7 ಕೋಟಿ ರೂ ಪಡೆಯುತ್ತಿದ್ದಾರೆ. ಕೊಹ್ಲಿ ಮತ್ತು ರೂಟ್ ಹೊರತುಪಡಿಸಿದರೆ ಬೇರೆ ಯಾವುದೇ ತಂಡದ ನಾಯಕರ ವೇತನ 5 ಕೋಟಿ ರೂ. ದಾಟಿಲ್ಲ.

ಆಸ್ಟ್ರೇಲಿಯಾ ತಂಡದ ನಾಯಕರಾದ ಆ್ಯರೋನ್ ಫಿಂಚ್ ಮತ್ತು ಟಿಮ್ ಪೇನ್ 4.87 ಕೋಟಿ ರೂ., ದಕ್ಷಿಣ ಆಫ್ರಿಕಾದ ಟೆಸ್ಟ್​ ತಂಡದ ನಾಯಕ ಡೀನ್ ಎಲ್ಗರ್ 3.2, ಸೀಮಿತ ಓವರ್​ಗಳ ನಾಯಕ ಟೆಂಬ ಬವುಮಾ 2.5 ಕೋಟಿ ರೂ ಪಡೆಯುತ್ತಿದ್ದಾರೆ.

ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್​ 1.77 ಕೋಟಿ ರೂ, ವೆಸ್ಟ್ ಇಂಡೀಸ್ ತಂಡದ ನಾಯಕ ಕೀರನ್ ಪೊಲಾರ್ಡ್​ 1.73 ಕೋಟಿ ರೂ, ವಿಂಡೀಸ್ ಟೆಸ್ಟ್​ ತಂಡದ ನಾಯಕ ಕ್ರೈಗ್ ಭ್ರಾತ್​ವೇಟ್​ 1.39 ಕೋಟಿ ರೂ ಪಡೆಯುತ್ತಿದ್ದಾರೆ. ಇಂಗ್ಲೆಂಡ್ ತಂಡದ ಸೀಮಿತ ಓವರ್​ಗಳ ನಾಯಕ ಇಯಾನ್ ಮಾರ್ಗನ್ 1.75 ಕೋಟಿ ರೂ ಪಡೆಯುತ್ತಿದ್ದಾರೆ.

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ 62.40 ಲಕ್ಷ, ಶ್ರೀಲಂಕಾ ಟೆಸ್ಟ್​ ತಂಡದ ನಾಯಕ ದಿಮುತ್ ಕರುಣರತ್ನೆ 51.03 ಲಕ್ಷ, ಸೀಮಿತ ಓವರ್​ಗಳ ನಾಯಕ ಕುಸಾಲ್ ಪೆರೆರಾ 25 ಲಕ್ಷ ಪಡೆಯುತ್ತಿದ್ದಾರೆ.

ಇದನ್ನು ಓದಿ:ನಮ್ಮಿಂದ ಕೊಹ್ಲಿಯನ್ನು ಹಿಂದಿಕ್ಕುವುದು ಅಸಾಧ್ಯ: ವಾರ್ನರ್ ಹೀಗೆ ಹೇಳಿದ್ಯಾಕೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.