ಲೀಡ್ಸ್: ಭಾರತ ವಿರುದ್ಧ ಹೆಡಿಂಗ್ಲೆಯಲ್ಲಿ 3ನೇ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಮತ್ತು 76 ರನ್ಗಳಿಂದ ಗೆಲ್ಲುತ್ತಿದ್ದಂತೆ ಜೋ ರೂಟ್ ಇಂಗ್ಲೆಂಡ್ ಯಶಸ್ವಿ ಟೆಸ್ಟ್ ನಾಯಕ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಭಾರತವನ್ನು 78ಕ್ಕೆ ಕಟ್ಟಿಹಾಕಿದ್ದ ಇಂಗ್ಲೆಂಡ್ ಇದಕ್ಕುತ್ತರವಾಗಿ 432 ರನ್ಗಳಿಸಿ 364 ರನ್ಗಳ ಬೃಹತ್ ಮುನ್ನಡೆ ಸಾಧಿಸಿತ್ತು. ಇನ್ನು ಶುಕ್ರವಾರ 2 ವಿಕೆಟ್ ನಷ್ಟಕ್ಕೆ 215 ರನ್ಗಳಿಸಿದ್ದ ಭಾರತವನ್ನು 4ನೇ ದಿನ ಶನಿವಾರ 278ಕ್ಕೆ ಆಲೌಟ್ ಮಾಡುವ ಮೂಲಕ ಇನ್ನಿಂಗ್ಸ್ ಜಯ ಸಾಧಿಸಿ ಟೆಸ್ಟ್ ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿತು. ಈ ಜಯದೊಂದಿಗೆ ರೂಟ್ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.
ಇದನ್ನು ಓದಿ:ಸಿಪಿಎಲ್ ಇತಿಹಾಸದಲ್ಲೇ ವೇಗದ ಅರ್ಧಶತಕ ದಾಖಲಿಸಿದ ಆ್ಯಂಡ್ರೆ ರಸೆಲ್
ನಾಯಕನಾಗಿ ರೂಟ್ ಇಂಗ್ಲೆಂಡ್ ತಂಡವನ್ನು 55 ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಇದರಲ್ಲಿ ಅವರು ಒಟ್ಟು 27 ಗೆಲುವು ಸಾಧಿಸುವ ಮೂಲಕ ನಾಯಕನಾಗಿ ದೇಶಕ್ಕೆ ಹೆಚ್ಚು ಗೆಲುವು ತಂದುಕೊಟ್ಟ ದಾಖಲೆಗೆ ಪಾತ್ರಾಗಿದ್ದಾರೆ. ಈ ದಾಖಲೆ ಈ ಮೊದಲು ಮೈಕಲ್ ವಾನ್ ಹೆಸರಿನಲ್ಲಿತ್ತು. ಅವರು 51 ಪಂದ್ಯಗಳಲ್ಲಿ ಇಂಗ್ಲೀಷ್ ತಂಡವನ್ನು ಮುನ್ನಡೆಸಿ 26 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದರು.
ಹೆಚ್ಚು ಟೆಸ್ಟ್ ಗೆದ್ದ ಇಂಗ್ಲೆಂಡ್ ನಾಯಕ
- ಜೋ ರೂಟ್ -(55 ಟೆಸ್ಟ್ ಪಂದ್ಯಗಳಲ್ಲಿ ನಾಯಕ) - 27 ಜಯ
- 26 ಮೈಕೆಲ್ ವಾನ್ (51)- 26 ಜಯ
- 24 ಆಂಡ್ರ್ಯೂ ಸ್ಟ್ರಾಸ್ (50)- 24 ಜಯ
- 24 ಅಲಸ್ಟೇರ್ ಕುಕ್(59)24 ಜಯ
- 20 ಪೀಟರ್ ಮೇ (41ಟೆಸ್ಟ್) 20 ಜಯ