ಅಡಿಲೇಡ್ : ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಸೋಮವಾರ 2ನೇ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ 275 ರನ್ಗಳ ಸೋಲು ಕಂಡಿದೆ. ಈ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಜೋ ರೂಟ್ ಇಂಗ್ಲೆಂಡ್ ಪರ ಗರಿಷ್ಠ ಸೋಲು ಕಂಡ ನಾಯಕ ಎಂಬ ಬೇಡದ ದಾಖಲೆಗೆ ಪಾತ್ರರಾದರು.
ಇಂಗ್ಲೆಂಡ್ ಪರ ಜೋ ರೂಟ್ ನಾಯಕನಾಗಿ 58 ಪಂದ್ಯಗಳಲ್ಲಿ ಮುನ್ನಡೆಸಿದ್ದು, 27 ಗೆಲುವು ಪಡೆಯುವ ಮೂಲಕ ಅತ್ಯಂತ ಯಶಸ್ವಿ ನಾಯಕ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು.
ಆದರೆ, ಆಸ್ಟ್ರೇಲಿಯಾ ವಿರುದ್ಧ ಸತತ 2 ಟೆಸ್ಟ್ ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಇಂಗ್ಲೆಂಡ್ ನಾಯಕನಾಗಿ ಗರಿಷ್ಠ ಸೋಲು ಪಡೆದ ನಾಯಕ ಎಂಬ ಬೇಡದ ದಾಖಲೆಗೂ ಪಾತ್ರರಾದರು.
ಇಂಗ್ಲೆಂಡ್ ತಂಡವನ್ನು 5 ನಾಯಕರು 50ಕ್ಕೂ ಹೆಚ್ಚಿನ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಇದರಲ್ಲಿ ರೂಟ್ ಗರಿಷ್ಠ ಗೆಲುವು ಮತ್ತು ಸೋಲು ಕಂಡ ನಾಯಕರಾಗಿದ್ದಾರೆ.
ಮೈಕಲ್ ವಾನ್ 51 ಪಂದ್ಯಗಳಲ್ಲಿ 26 ಜಯ ಮತ್ತು 16 ಸೋಲು ಕಂಡಿದ್ದರೆ, ಆಲೈಸ್ಟರ್ ಕುಕ್ 59 ಪಂದ್ಯಗಳಿಂದ 24 ಜಯ ಮತ್ತು 22 ಸೋಲು ಕಂಡಿದ್ದಾರೆ. ಮೈಕ್ ಅಥರ್ಟನ್ 54 ಪಂದ್ಯಗಳಲ್ಲಿ 13 ಗೆಲುವು ಮತ್ತು 21 ಸೋಲು ಕಂಡಿದ್ದಾರೆ.
ಇದನ್ನೂ ಓದಿ:ಆ್ಯಶಸ್ ಸರಣಿ : ಡೇ ಅಂಡ್ ನೈಟ್ನಲ್ಲಿ ಆಸೀಸ್ ಅಜೇಯ, ಇಂಗ್ಲೆಂಡ್ ವಿರುದ್ಧ 275 ರನ್ಗಳ ಜಯ