ಲೀಡ್ಸ್: ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಹೆಡಿಂಗ್ಲೆಯಲ್ಲಿ ನಡೆಯುತ್ತಿರವ 3ನೇ ಟೆಸ್ಟ್ ಪಂದ್ಯದಲ್ಲೂ ಆಕರ್ಷಕ ಶತಕ ಬಾರಿಸಿದ್ದಾರೆ. ಅವರು ಮೊದಲೆರಡು ಟೆಸ್ಟ್ ಪಂದ್ಯಗಳಲ್ಲೂ ಶತಕ ದಾಖಲಿಸಿದ್ದರು.
ಭಾರತವನ್ನು 78 ರನ್ಗಳಿಗೆ ನಿಯಂತ್ರಿಸಿ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಈಗಾಗಲೇ ಮೊದಲ ನಾಲ್ಕು ಕ್ರಮಾಂಕದ ಬ್ಯಾಟ್ಸ್ಮನ್ಗಳು 50+ ರನ್ ದಾಖಲಿಸಿದ್ದಾರೆ. ರೋರಿ ಬರ್ನ್ಸ್ 61, ಹಸೀಬ್ ಹಮೀದ್ 68, ಡೇವಿಡ್ ಮಲನ್ 70 ರನ್ಗಳಿಸಿ ಔಟಾದರೆ, ಜೋ ರೂಟ್ ಅಜೇಯ ಶತಕ ಬಾರಿಸಿ ಮುನ್ನುಗ್ಗುತ್ತಿದ್ದಾರೆ.
124 ಎಸೆತಗಳಲ್ಲಿ 12 ಬೌಂಡರಿ ಸಹಿತ ರೂಟ್ ತಮ್ಮ ಟೆಸ್ಟ್ ವೃತ್ತಿ ಜೀವನದ 23ನೇ ಮತ್ತು ಸರಣಿಯಲ್ಲಿ ಸತತ 3ನೇ ಶತಕ ಬಾರಿಸಿದರು. ಈ ವರ್ಷ ರೂಟ್ ದಾಖಲಿಸಿದ 6ನೇ ಶತಕ ಇದಾಗಿದೆ. ಭಾರತದ ವಿರುದ್ಧ 2021ರ 4ನೇ ಶತಕ ಕೂಡ ಆಗಿದೆ. ಅವರು ಶ್ರೀಲಂಕಾ ವಿರುದ್ಧ ಕೂಡ 2 ಶತಕ ಬಾರಿಸಿದ್ದರು.
ಭಾರತದ ವಿರುದ್ಧ 8ನೇ ಶತಕ
ಜೋ ರೂಟ್ ಭಾರತದ ವಿರುದ್ಧ ಟೆಸ್ಟ್ನಲ್ಲಿ 8ನೇ ಶತಕ ಸಿಡಿಸಿದ್ದಾರೆ. ಈ ಮೂಲಕ ಭಾರತದ ವಿರುದ್ಧ ಹೆಚ್ಚು ಶತಕ ಸಿಡಿಸಿದ ಇಂಗ್ಲೆಂಡ್ ಬ್ಯಾಟ್ಸ್ಮನ್ ಎನಿಸಿಕೊಂಡರು. ಅಲಸ್ಟೈರ್ ಕುಕ್ 7, ಕೆವಿನ್ ಪೀಟರ್ಸನ್ 6, ಇಯಾನ್ ಬಾಥಮ್ 5 ಮತ್ತು ಗ್ರಹಾಂ ಗೂಚ್ 5 ಶತಕ ಸಿಡಿಸಿದ್ದರು.
ಗರಿಷ್ಠ ಶತಕ ಸಿಡಿಸಿದ ಇಂಗ್ಲೆಂಡ್ ನಾಯಕರು
- ಜೋ ರೂಟ್ 12
- ಅಲಸ್ಟೈರ್ ಕುಕ್ 12
- ಗ್ರಹಾಂ ಗೂಚ್ 11
- ಪೇಟರ್ ಮೇ 10
ಭಾರತ vs ಇಂಗ್ಲೆಂಡ್ ಟೆಸ್ಟ್ ಪಂದ್ಯಗಳಲ್ಲಿ ಗರಿಷ್ಠ ಶತಕ
- ಜೋ ರೂಟ್- 8
- ರಾಹುಲ್ ದ್ರಾವಿಡ್-7
- ಅಲಸ್ಟೈರ್ ಕುಕ್-7
- ಸಚಿನ್ ತೆಂಡೂಲ್ಕರ್-7
- ಮೊಹಮ್ಮದ್ ಅಜರುದ್ದೀನ್-6
- ಕೆವಿನ್ ಪೀಟರ್ಸನ್-6
ಟೆಸ್ಟ್ನಲ್ಲಿ ಇಂಗ್ಲೆಂಡ್ ಪರ ಗರಿಷ್ಠ ಶತಕ
- ಅಲಸ್ಟೈರ್ ಕುಕ್ - 33
- ಕೆವಿನ್ ಪೀಟರ್ಸನ್ - 23
- ಜೋ ರೂಟ್ - 23
- ಇಯಾನ್ ಬೆಲ್ - 22
- ಜೆಫ್ರಿ ಬಾಯ್ಕಾಟ್ - 22
- ವಾಲಿ ಹ್ಯಾಮಂಡ್ - 22
- ಮೈಕೆಲ್ ಕೌಡ್ರಿ - 22