ETV Bharat / sports

ಪದಾರ್ಪಣೆಯ ಪಂದ್ಯದಲ್ಲಿಯೇ ಬಾಲ್​ ಬಡಿದು ಆಸ್ಪತ್ರೆಗೆ ದಾಖಲಾದ ವೆಸ್ಟ್​ ಇಂಡೀಸ್ ಆಟಗಾರ

ಇನಿಂಗ್ಸ್‌ನ 24ನೇ ಓವರ್‌ನಲ್ಲಿ ಆಫ್‌ ಸ್ಪಿನ್ನರ್‌ ರಾಸ್ಟನ್‌ ಚೇಸ್‌ ಬೌಲಿಂಗ್‌ನಲ್ಲಿ ಶಾರ್ಟ್‌ ಪಿಚ್‌ ಎಸೆತವನ್ನು ಎಡಗೈ ಬ್ಯಾಟ್ಸ್‌ಮನ್‌ ಕರುಣಾರತ್ನೆ ಬಲವಾಗಿ ಬಾರಿಸಿದ್ದರು. ಆದರೆ, ದುರದೃಷ್ಟವಶಾತ್ ಶಾರ್ಟ್‌ ಲೆಗ್‌ನಲ್ಲಿ ಫೀಲ್ಡ್‌ ಮಾಡುತ್ತಿದ್ದ ಜೆರೆಮಿ ಅವರ ತಲೆಗೆ ಆ ಬಾಲ್​​ ಬಡಿದಿತ್ತು. ಚೆಂಡು ಬಡಿದ ರಭಸಕ್ಕೆ ಅವರು ಸ್ಥಳದಲ್ಲೇ ಕುಸಿದುಬಿದ್ದರು..

author img

By

Published : Nov 21, 2021, 5:03 PM IST

ಜೆರೆಮಿ ಸೊಲೊಝಾನೊ
ಜೆರೆಮಿ ಸೊಲೊಝಾನೊ

ಗಾಲೆ : ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್​ ಇಂಡೀಸ್​​ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ವಿಂಡೀಸ್​ನ ಯುವ ಆಟಗಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

  • This is scary! Jeremy Solozano has been struck in the front of the helmet by a vicious pull shot against the spin bowling of Chase. He is being placed on a stretcher out of an abundance of caution. We hope he's OK. #SLvWI pic.twitter.com/1dtUPNC1td

    — 🏏FlashScore Cricket Commentators (@FlashCric) November 21, 2021 " class="align-text-top noRightClick twitterSection" data=" ">

ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಯುವ ಆಟಗಾರ ಜೆರೆಮಿ ಸೊಲೊಝಾನೊಗೆ ಫೀಲ್ಡಿಂಗ್​ ಮಾಡುವಾಗ ಹೆಲ್ಮೆಟ್​​ಗೆ ಬಾಲ್​ ಬಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಆರಂಭವವಾದ ಮೊದಲ ಟೆಸ್ಟ್‌ನಲ್ಲಿ ಟಾಸ್‌ ಗೆದ್ದ ಶ್ರೀಲಂಕಾ ಬ್ಯಾಟಿಂಗ್‌ ಆಯ್ಕೆ ಮಾಡಿದೆ.

ಈ ಇನಿಂಗ್ಸ್‌ನ 24ನೇ ಓವರ್‌ನಲ್ಲಿ ಆಫ್‌ ಸ್ಪಿನ್ನರ್‌ ರಾಸ್ಟನ್‌ ಚೇಸ್‌ ಬೌಲಿಂಗ್‌ನಲ್ಲಿ ಶಾರ್ಟ್‌ ಪಿಚ್‌ ಎಸೆತವನ್ನು, ಎಡಗೈ ಬ್ಯಾಟ್ಸ್‌ಮನ್‌ ಕರುಣಾರತ್ನೆ ಬಲವಾಗಿ ಬಾರಿಸಿದ್ದರು. ಆದರೆ, ದುರದೃಷ್ಟವಶಾತ್ ಶಾರ್ಟ್‌ ಲೆಗ್‌ನಲ್ಲಿ ಫೀಲ್ಡ್‌ ಮಾಡುತ್ತಿದ್ದ ಜೆರೆಮಿ ಅವರ ತಲೆಗೆ ಆ ಬಾಲ್​​ ಬಡಿದಿತ್ತು. ಚೆಂಡು ಬಡಿದ ರಭಸಕ್ಕೆ ಅವರು ಸ್ಥಳದಲ್ಲೇ ಕುಸಿದುಬಿದ್ದರು.

  • 🚨 UPDATE🚨

    Jeremy Solozano’s scans show no structural damage. He will be kept at the hospital overnight for observation 🙏🏽

    We will continue to keep you posted on any further updates from our Medical team.
    #SLvWI pic.twitter.com/6pLuLXnIrt

    — Windies Cricket (@windiescricket) November 21, 2021 " class="align-text-top noRightClick twitterSection" data=" ">

ನಂತರ ಅವರನ್ನು ಸ್ಟ್ರೆಚರ್‌ ಮೂಲಕ ಆ್ಯಂಬುಲೆನ್ಸ್‌ಗೆ ಸಾಗಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಜೆರೆಮಿ ಸೊಲೊಝಾನೊಗೆ ಈ ಪಂದ್ಯ ಪದಾರ್ಪಣೆಯ ಪಂದ್ಯವಾಗಿತ್ತು. ಪದಾರ್ಪಣೆಯ ಪಂದ್ಯದಲ್ಲಿಯೇ ಈ ದುರ್ಘಟನೆ ನಡೆದಿದೆ.

ಇನ್ನೂ ಈ ಕುರಿತು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಟ್ವೀಟ್​​ ಮಾಡಿದ್ದು, ಜೆರೆಮಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಶೀಘ್ರದಲ್ಲೇ ಅವರು ಚೇತರಿಸಿಕೊಳ್ಳುವ ಭರವಸೆ ಹೊಂದಿದ್ದೇವೆ" ಎಂದು ವಿಂಡೀಸ್‌ ಕ್ರಿಕೆಟ್‌ ಮಂಡಳಿ ಟ್ವೀಟ್​ ಮಾಡಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.