ಮುಂಬೈ: ಜಯದೇವ್ ಉನಾದ್ಕಟ್ ಮತ್ತು ಮುಸ್ತಫಿಜುರ್ ರೆಹಮಾನ್ ಬೌಲಿಂಗ್ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ಗಳಲ್ಲಿ8 ವಿಕೆಟ್ ವಿಕೆಟ್ ಕಳೆದುಕೊಂಡು 147 ರನ್ಗಳಿಸಿದ್ದು, ಡೆಲ್ಲಿಗೆ 148ರನ್ಗಳ ಸಾಧಾರಣ ಗುರಿ ನೀಡಿದೆ.
ಟಾಸ್ ಗೆದ್ದ ರಾಜಸ್ಥಾನ್ ಫೀಲ್ಡಿಂಗ್ ಆಯ್ದುಕೊಂಡು ರಾಯಲ್ಸ್ ತಂಡದ ನಾಯಕ ಸಾಮ್ಸನ್ ಡೆಲ್ಲಿ ತಂಡಕ್ಕೆ ಬ್ಯಾಟಿಂಗ್ ಆಹ್ವಾನಿಸಿದರು. ಶ್ರೇಯಸ್ ಗೋಪಾಲ್ ಬದಲು ತಂಡ ಸೇರಿಕೊಂಡಿದ್ದ ಎಡಗೈ ವೇಗಿ ಜಯದೇವ್ ಉನಾದ್ಕಟ್ ತಮ್ಮ ಮೊದಲ ಮೂರು ಓವರ್ಗಳಲ್ಲಿ ಕ್ರಮವಾಗಿ ಪೃಥ್ವಿ ಶಾ(2), ಶಿಖರ್ ಧವನ್(9) ಮತ್ತು ಅಜಿಂಕ್ಯ ರಹಾನೆ(8) ವಿಕೆಟ್ ಪಡೆದು ಡೆಲ್ಲಿ ಆಘಾತ ನೀಡಿದರು.
-
Innings Break: After opting to bowl first, @rajasthanroyals have restricted @DelhiCapitals to 147-8.
— IndianPremierLeague (@IPL) April 15, 2021 " class="align-text-top noRightClick twitterSection" data="
Stay tuned as DC's chase is coming up shortly. https://t.co/8aM0TZxgVq #RRvDC #VIVOIPL pic.twitter.com/zPHOjhMvPt
">Innings Break: After opting to bowl first, @rajasthanroyals have restricted @DelhiCapitals to 147-8.
— IndianPremierLeague (@IPL) April 15, 2021
Stay tuned as DC's chase is coming up shortly. https://t.co/8aM0TZxgVq #RRvDC #VIVOIPL pic.twitter.com/zPHOjhMvPtInnings Break: After opting to bowl first, @rajasthanroyals have restricted @DelhiCapitals to 147-8.
— IndianPremierLeague (@IPL) April 15, 2021
Stay tuned as DC's chase is coming up shortly. https://t.co/8aM0TZxgVq #RRvDC #VIVOIPL pic.twitter.com/zPHOjhMvPt
ಇವರ ನಂತರ ದಾಳಿಗಿಳಿದ ಮುಸ್ತಫಿಜುರ್ ಖಾತೆ ತೆರೆಯುವ ಮುನ್ನವೇ ಮಾರ್ಕಸ್ ಸ್ಟೋಯ್ನಿಸ್ ವಿಕೆಟ್ ಪಡೆದರು. ತಂಡದ ಮೊತ್ತ 37ಕ್ಕೆ 4 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಬೀತಿಯಲ್ಲಿದ್ದ ಡೆಲ್ಲಿಗೆ ನಾಯಕ ಪಂತ್ ಮತ್ತು ಇಂದೇ ಪದಾರ್ಪಣೆ ಮಾಡಿದ ಲಲಿತ್ ಯಾದವ್ 5ನೇ ವಿಕೆಟ್ಗೆ 51 ರನ್ ಸೇರಿಸಿ ಚೇತರಿಕೆ ನೀಡಿದರು.
ಅರ್ಧಶತಕ ಪೂರೈಸಿ ಉತ್ತಮವಾಗಿ ಆಡುತ್ತಿದ್ದ ಪಂತ್ ಇಲ್ಲದ ರನ್ ಕದಿಯಲು ಹೋಗಿ ಪರಾಗ್ ಅವರ ಡೈರೆಕ್ಟ್ ಹಿಟ್ಗೆ ಬಲಿಯಾದರು. ಅವರು 32 ಎಸೆತಗಳಲ್ಲಿ 9 ಬೌಂಡರಿ ಸಹಿತ 51 ರನ್ಗಳಿಸಿದ್ದರು. ಇವರ ವಿಕೆಟ್ನೊಂದಿಗೆ ಡೆಲ್ಲಿ ತಂಡದ ಸ್ಪರ್ಧಾತ್ಮಕ ಮೊತ್ತದ ಆಸೆಯೂ ಕಮರಿತು.
ಕೊನೆಗೆ ಲಲಿತ್ ಯಾದವ್ 20 , ಟಾಮ್ ಕರ್ರನ್ 21 ಮತ್ತು ಕ್ರಿಸ್ ವೋಕ್ಸ್ ಅಜೇಯ 15 , ಅಶ್ವಿನ್ 7 ಮತ್ತ ರಬಾಡ 9 ರನ್ಗಳಿಸಿ ತಂಡದ ಮೊತ್ತವನ್ನು 150ರ ಗಡಿ ತಂದರು.
ಇದನ್ನು ಓದಿ:ಕನ್ನಡಿಗನಿಗೆ ಒಲಿದ ಅದೃಷ್ಟ: ಶ್ರೇಯಸ್ ಅಯ್ಯರ್ ಬದಲಿಗೆ ಡೆಲ್ಲಿ ತಂಡ ಸೇರಿದ ಅನಿರುದ್ಧ ಜೋಶಿ