ETV Bharat / sports

ನೆಲಕಚ್ಚಿದ ಶ್ರೀಲಂಕಾ ಕ್ರಿಕೆಟ್‌ ತಂಡ: ಸಂಭಾವನೆ ಪಡೆಯದೆ ತಂಡ ಕಟ್ಟಲು ಪಣತೊಟ್ಟ ಜಯವರ್ಧನೆ

author img

By

Published : Jul 9, 2021, 4:56 PM IST

ಸಂಪೂರ್ಣವಾಗಿ ನೆಲಕಚ್ಚಿರುವ ಲಂಕಾ ತಂಡವನ್ನು ಮತ್ತೆ ಬಲಿಷ್ಠವಾಗಿ ಕಟ್ಟಲು ನಿರ್ಧರಿಸಿರುವ ಮಹೇಲಾ ಜಯವರ್ಧನೆ ಇದೀಗ ಅಲ್ಲಿನ ಅಂಡರ್​-19 ತಂಡಕ್ಕೆ ಸಲಹೆಗಾರನಾಗಿ ಕೆಲಸ ಮಾಡಲು ನಿರ್ಧರಿಸಿದ್ದಾರೆ.

Jayawardene
Jayawardene

ಕೊಲಂಬೊ: ಕೆಲವು ವರ್ಷಗಳ ಹಿಂದೆ ಅತ್ಯಂತ ಬಲಿಷ್ಠವಾಗಿದ್ದ ಶ್ರೀಲಂಕಾ ಕ್ರಿಕೆಟ್​ ತಂಡ ಇದೀಗ ಎಲ್ಲ ವಿಭಾಗಗಳಲ್ಲೂ ವೈಫಲ್ಯ ಅನುಭವಿಸುತ್ತಿದೆ. ಈ ಹಿಂದಿನ ರೀತಿ ಹೇಳಿಕೊಳ್ಳುವಂತಹ ಪ್ರದರ್ಶನ ಯಾವುದೇ ಆಟಗಾರರಿಂದ ಮೂಡಿ ಬರುತ್ತಿಲ್ಲ.

ಹೀಗಾಗಿ ಎದುರಾಳಿ ತಂಡಗಳೊಂದಿಗೆ ಆಡುತ್ತಿರುವ ಬಹುತೇಕ ಪಂದ್ಯಗಳಲ್ಲಿ ಲಂಕನ್ನರು ಸೋಲು ಕಾಣುತ್ತಿದ್ದಾರೆ. ಇದರಿಂದ ಬೇಸತ್ತಿರುವ ಮಾಜಿ ಕ್ಯಾಪ್ಟನ್​ ಮಹೇಲಾ ಜಯವರ್ಧನೆ ಹೊಸ ನಿರ್ಧಾರಕ್ಕೆ ಬಂದಿದ್ದಾರೆ.

ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವ ಮಹೇಲಾ ಜಯವರ್ಧನೆ, ಯಾವುದೇ ರೀತಿಯ ಸಂಭಾವನೆ ಪಡೆದುಕೊಳ್ಳದೇ ಅಂಡರ್​-19 ಕ್ರಿಕೆಟ್​ ತಂಡಕ್ಕೆ ತರಬೇತಿ ನೀಡಲು ಉತ್ತೇಜನ ತೋರಿಸಿದ್ದಾರೆ. ಅಂಡರ್​​-19 ತಂಡದ ಸಲಹೆಗಾರನಾಗಿ ಕಾರ್ಯ ನಿರ್ವಹಿಸಲು ಅವರು ನಿರ್ಧರಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಕ್ರಿಕೆಟ್​ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಮುಂದಿನ ವರ್ಷ ಅಂಡರ್​-19 ವಿಶ್ವಕಪ್​ ನಡೆಯಲಿದೆ. ಅದಕ್ಕಾಗಿ ಜಯವರ್ಧನೆ ಬಲಿಷ್ಠ ಲಂಕಾ ತಂಡ ಕಟ್ಟಲು ಈಗಿನಿಂದಲೇ ತಯಾರಿ ನಡೆಸಲಿದ್ದಾರೆ. ಜತೆಗೆ ತಂಡದಿಂದ ಹೊರಬೀಳುವ ಬಹುತೇಕ ಆಟಗಾರರ​ ಭವಿಷ್ಯದಲ್ಲಿ ಉತ್ತಮ ಕ್ರಿಕೆಟರ್ಸ್​ಗಳಾಗಿ ಹೊರಹೊಮ್ಮಲಿರುವ ಕಾರಣ ತಾವು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿರಿ: ಟೀಂ ಇಂಡಿಯಾ ಕೋಚ್​ ಸಂಪೂರ್ಣ ಜವಾಬ್ದಾರಿ ದ್ರಾವಿಡ್​ಗೆ ನೀಡಬಾರದು: ವಾಸೀಂ ಜಾಫರ್​

ಈ ಹಿಂದೆ ಲಂಕಾ ತಂಡದಲ್ಲಿ ಮಹೇಲಾ​ ಜಯವರ್ಧನೆ, ಕುಮಾರ ಸಂಗಕ್ಕಾರ, ಲಸಿತ್​ ಮಲಿಂಗಾ, ತಿಲಕರತ್ನ ದಿಲ್ಶನ್, ಮ್ಯಾಥ್ಯೂಸ್​ ಸೇರಿದಂತೆ ಅನೇಕ ದಿಗ್ಗಜರಿದ್ದರು. ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಜಯವರ್ಧನೆ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.